ಬಟ್ಲರ್‌ಗೆ ಗಂಭೀರ ಗಾಯವಾಗಿಲ್ಲ: ಮಾರ್ಗನ್‌

ಲಂಡನ್, ಜೂ 9 -ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿರುವ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರು ಮುಂಬರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆಂದು ನಾಯಕ ಇಯಾನ್‌ ಮಾರ್ಗನ್‌ ಹೇಳಿದ್ದಾರೆ.
ಶನಿವಾರ ನಡೆದ ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಜೋಸ್‌ ಬಟ್ಲರ್‌ ಬ್ಯಾಟಿಂಗ್‌ ವೇಳೆ ಸೊಂಟ ನೋವಿಗೆ ಒಳಗಾಗಿದ್ದರು. ಆದರೂ ಅವರು 44 ಎಸೆತಗಳಲ್ಲಿ 64 ರನ್‌ ಸಿಡಿಸಿದ್ದರು. ಸೊಂಟದ ನೋವಿನಿಂದಾಗಿ ಬಾಂಗ್ಲಾ ಇನಿಂಗ್ಸ್‌ಗೆ ಅವರು ಮೈದಾನಕ್ಕೆ ಇಳಿದಿರಲಿಲ್ಲ.
ಬಟ್ಲರ್‌ಗೆ ಹೇಳಿಕೊಳ್ಳುವಂತ ಗಂಭೀರ ಗಾಯವಾಗಿಲ್ಲ. ಮುಂದಿನ 48 ಗಂಟೆಗಳಲ್ಲಿ ಬಟ್ಲರ್ ಆರೋಗ್ಯ ಸ್ಥಿತಿಯ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಗಾಯಕ್ಕೊಳಗಾದ ಬಟ್ಲರ್‌ ಮುಂಜಾಗೃತಾ ಕ್ರಮವಾಗಿ ಬಾಂಗ್ಲಾ ಇನ್ನಿಂಗ್ಸ್‌ನಲ್ಲಿ ಮೈದಾನಕ್ಕಿಳಿದಿರಲಿಲ್ಲ. ಆದರೆ, ಅದು ಗಂಭೀರ ಗಾಯವಲ್ಲ ಎಂದು ನನಗೆ ವಿಶ್ವಾಸವಿದೆ ಎಂದು ಸುದ್ದಿಗಾರರೊಂದಿಗೆ ಮಾರ್ಗನ್ ತಿಳಿಸಿದರು.
ಇಂಗ್ಲೆಂಡ್‌ ಮುಂದಿನ ಪಂದ್ಯ ಜೂನ್‌. 14 ರಂದು ವೆಸ್ಟ್‌ ಇಂಡೀಸ್‌ ವಿರುದ್ಧ ಸೆಣಸಲಿದೆ.

Leave a Comment