ಬಜೆಟ್ ಬಿಜೆಪಿಯ ಚುನಾವಣಾ ಪ್ರಣಾಳಿಕೆ: ಖರ್ಗೆ

ನವದೆಹಲಿ, ಫೆ. ೧- ಕೇಂದ್ರದ ಈ ಸಾಲಿನ ಬಜೆಟ್ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು.ಸಂಸತ್‌ದಲ್ಲಿಂದು  ಕೇಂದ್ರದ ವಿತ್ತ ಸಚಿವ ಪಿಯುಷ್ ಗೋಯಲ್ ಬಜೆಟ್ ಮಂಡನೆ ನಂತರ ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಜೆಟ್‌ನ್ನು ಬಿಜೆಪಿಯ ಚುನಾವಣಾ ಬಜೆಟ್ ಎಂದು ಜರಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ ಎಂಬುದನ್ನು ಅರಿತಿರುವ ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಜನಸಾಮಾನ್ಯರನ್ನು ಸೆಳೆಯಲು ಚುನಾವಣಾ ಪ್ರಣಾಳಿಕೆಯಾಗಿರುವ ಬಜೆಟ್‌ನ್ನು ಮಂಡಿಸಿದ್ದಾರೆ ಎಂದು ಟೀಕಿಸಿದರು.

Leave a Comment