ಬಜೆಟ್ ನಲ್ಲಿ ಸಿಗದ ಸೌಲಭ್ಯ-ಎಐಟಿಯುಸಿ ಪ್ರತಿಭಟನೆ

ದಾವಣಗೆರೆ, ಫೆ. 11 – ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕನಿಷ್ಟ 18 ಸಾವಿರ ರೂ ವೇತನ ನಿಗದಿಗೊಳಿಸಬೇಕೆಂದು ಒತ್ತಾಯಿಸಿ ಎಐಟಿಯುಸಿ ಕಾರ್ಯಕರ್ತರು ಜಯದೇವವೃತ್ತದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು.
1975 ರಿಂದ ಶಿಶುಅಭಿವೃದ್ದಿ ಯೋಜನೆಯಲ್ಲಿ ಕಳೆದ 44 ವರ್ಷಗಳಿಂದಲೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲಸದ ಭದ್ರತೆ, ನಿವೃತ್ತಿ ವೇತನ, ಕನಿಷ್ಟ ಕೂಲಿಯೂ ಸಹ ಕಲ್ಪಿಸದೆ ಬಜೆಟ್ ನಲ್ಲಿ ವಂಚನೆ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿ ಮತ್ತು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸದೆ ಅನ್ಯಾಯ ಮಾಡಲಾಗಿದೆ. ನಿವೃತ್ತ ವೇತನ ನೀಡಿಲ್ಲ, ಸೇವೆ ಹಿರಿತನದ ಅವಧಿಯನ್ನು ಪರಿಗಣಿಸಿ ಗೋವಾ ಸರ್ಕಾರದ ರೀತಿಯಲ್ಲಿ ಗೌರವಧನವನ್ನು ನೀಡಬೇಕು. ಇಎಸ್ಐ, ಭವಿಷ್ಯ ನಿಧಿ, ಸೇವಾಭದ್ರತೆ, ಗ್ರಾಚ್ಯುಯಿಟಿ ನೀಡಬೇಕು. ಕಾರ್ಮಿಕ ಕಾನೂನಿನ ಸೌಲಭ್ಯಗಳನ್ನು ಜಾರಿ ಮಾಡಬೇಕು. ಪ್ರಧಾನಿ ನರೇಂದ್ರಮೋದಿ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಜೆಟ್ ನಲ್ಲಿಯಾವುದೇ ಸೌಲಭ್ಯ ಕಲ್ಪಿಸದೆ ಅನ್ಯಾಯವೆಸಗಿದ್ದಾರೆ ಎಂದು ಪ್ರತಿಭಟನಾ ನಿರತರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕಾಂ.ಹೆಚ್.ಕೆ.ರಾಮಚಂದ್ರಪ್ಪ, ಆವರಗೆರೆ ವಾಸು, ಎಂ.ಬಿ,ಶಾರದಮ್ಮ, ಎಸ್.ಸಿ.ಮಲ್ಲಮ್ಮ, ವಿಶಾಲಾಕ್ಷಿ, ಗೌರಮ್ಮ,ಅನಿತಾ, ಭಾಗ್ಯ,ಮಂಜುಳಾ, ಸುವರ್ಣ ಸೇರಿದಂತೆ ಅನೇಕರಿದ್ದರು.

Leave a Comment