ಬಜೆಟ್ ತಯಾರಿಕೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ, ಜೂ 10 – ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ವಾರದಿಂದ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಬ್ಯಾಂಕಿಂಗ್, ಉದ್ಯಮಿಗಳು, ರೈತ ಸಮುದಾಯದ ಪ್ರತಿನಿಧಿಗಳು ಮತ್ತು ರಾಜ್ಯ ಹಣಕಾಸು ಸಚಿವರ ಜೊತೆ ಸೀತಾರಾಮನ್ ಸಮಾಲೋಚನೆ ಮಾಡಲಿದ್ದಾರೆ

ಮುಂದಿನ ವಾರ ಬಜೆಟ್ ತಯಾರಿ ಬಗ್ಗೆ ಪೂರ್ವ ತಯಾರಿ ನಡೆಸಲಿದ್ದಾರೆ, ಈ ಬಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅವರು ಸಹ ಬಜೆಟ್ ತಯಾರಿಕೆಯಲ್ಲಿ ನಿರತವಾಗಿದ್ದಾರೆ.

ಇದೇ 20 ರಂದು ಜಿಎಸ್ ಟಿ ಮಂಡಳಿ ಸಭೆ ನಡೆಯಲಿದ್ದು , ಇದರಲ್ಲಿ ಭಾಗವಹಿಸುವ ರಾಜ್ಯಗಳ ಹಣ ಕಾಸು ಸಚಿವರ ಸಲಹೆ, ಸೂಚನೆ ಪಡೆಯಲು ನಿರ್ಮಲಾ ಸೀತಾರಾಮನ್ ಮುಂದಾಗಿದ್ದಾರೆ.

ಈಗಾಗಲೇ ನಿಗದಿಯಾಗಿರುವಂತೆ ಮುಂದಿನ ತಿಂಗಳು 5ರಂದು ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗಿದೆ. ಇದಕ್ಕೆ ಒಂದು ದಿನ ಮುಂಚಿತವಾಗಿ ನಾಲ್ಕರಂದು ಪ್ರಸಕ್ತ ಸಾಲಿನ ಆರ್ಥಿಕ ಸಮೀಕ್ಷೆಯನ್ನೂ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಲಾಗುತ್ತದೆ, ಇದೆ 17 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ

Leave a Comment