ಬಜೆಟ್‌: ಕಲ್ಯಾಣ ಕರ್ನಾಟಕ ಆದ್ಯತೆಗೆ ಆಗ್ರಹ

 

ಕಲಬುರಗಿ ಜ17:ಕಲ್ಯಾಣ ಕರ್ನಾಟಕ ಭಾಗದ ರಚನಾತ್ಮಕ  ಪ್ರಗತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಗಂಭೀರವಾಗಿ ಪರಿಗಣಿಸಿ ಮುಂಬರುವ ಬಜೆಟ್‌ ನಲ್ಲಿ‌ ವಿಶೇಷ ‌

ಆದ್ಯತೆ ನೀಡುವಂತೆ  ಹೈಕ ಜನಪರ‌ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಇಂದು ಸುದ್ದಿ ಗೋಷ್ಠಿಯಲ್ಲಿ

ಆಗ್ರಹಿಸಿದರು.

ಸರ್ಕಾರ ಈಗಾಗಲೇ ಘೋಷಿಸಿರುವ ಯೋಜನೆಗಳನ್ನು ಅನುಷ್ಠಾನಕ್ಕೆ ತರುವದು. ಹೊಸ ಯೋಜನೆಗಳಿಗೆ ಮಂಜೂರಾತಿ ಒದಗಿಸುವದು ಅತ್ಯಗತ್ಯವಾಗಿದೆ ಎಂದರು.

371(ಜೆ) ಅನುಷ್ಠಾನಕ್ಕೆ  ಪ್ರತ್ಯೇಕ ಸಚಿವಾಲಯ ಸ್ಥಾಪನೆ ಅಗತ್ಯವಾಗಿ ದೆ.ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ,ನಿಮ್ಜ್ ಕಾರ್ಯಾ ರಂಭ, ಇಎಸ್ಐ ಆಸ್ಪತ್ರೆಯ ನ್ನು ಕೇಂದ್ರ ಸರ್ಕಾರ ಏಮ್ಸ್ ಗೆ ಪರಿವರ್ತನೆ ಮಾಡುವದು  ಅಗತ್ಯ ‌ಎಂದರು.

ನವನಗರ ನಿರ್ಮಾಣ:

ಕಲಬುರಗಿ ಮಹಾನಗರ ಜನಸಂಖ್ಯೆ ವೃದ್ಧಿ ಗೆ ಅನುಗುಣವಾಗಿ ಜನಸಾಂದ್ರತೆ ಹೆಚ್ಚುತ್ತಿದೆ.ಇದನ್ನು ಗಮನಿಸಿ ದೂರದೃಷ್ಟಿ ಯನ್ನಿಟ್ಟುಕೊಂಡು ಕಲಬುರಗಿ ನವನಗರ ನಿರ್ಮಾಣ ಮಾಡಿ ಸಹಸ್ರಾರು ಜನರಿಗೆ ಉದ್ಯೋಗ ‌ಸೃಷ್ಟಿಗೆ ಅನುಕೂಲ ಮಾಡಿಕೊಡುವಂತೆ ಹಕ್ಕೊತ್ತಾಯ ಮಾಡಿದರು. ಈ ಭಾಗದಲ್ಲಿ ಸೋಲಾರ್,ಸಿಮೆಂಟ್, ದಾಲ್ ಕ್ಲಸ್ಟರ್ ಮೊದಲಾದ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಗೆ ಆದ್ಯತೆನೀಡಲು ಆಗ್ರಹಿಸಿದರು.ಸಮಗ್ರ ಮತ್ತು ಸ್ಥಳೀಯ ಮಟ್ಟದ ಬೇಡಿಕೆಗಳ ಬಗ್ಗೆ

ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗುವದುಎಂದುವಿವರಿಸಿದರು.

ಸುದ್ದಿಗೋಷ್ಠಿ ಯಲ್ಲಿ ಡಾ.ಬಸವರಾಜ ಕುಮನೂರ,ಮನೀಷ್ ಜಾಜು, ಶಿವಲಿಂಗಪ್ಪ ಬಂಡಕ್,ಆನಂದ‌ ದೇಶಪಾಂಡೆ, ಪ್ರೊ ಸಂಗೀತಾ ಕಟ್ಟಿಮನಿ ಸೇರಿದಂತೆ ಹಲವರಿದ್ದರು.

Leave a Comment