ಬಜಾರ್ ಬಳಿಕ ಸುನಿ ಅಖಾಡಕ್ಕೆ

ಅವತಾರ ಪುರುಷ ಪೂರ್ಣ

*ಚಿಕ್ಕನೆಟಕುಂಟೆ ಜಿ.ರಮೇಶ್

ಕನ್ನಡ ಚಿತ್ರರಂಗದಲ್ಲಿ ಹೊಸ ಹವಾ ಸೃಷ್ಠಿಸಿದ ಹೆಗ್ಗಳಿಕೆ ನಿರ್ದೇಶಕ ಸುನಿ ಅವರದು. “ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ” ಹೇಳುತ್ತಲೇ ಎಲ್ಲರ ಜನಮನ ಗೆದ್ದು “ಬಹುಪರಾಕ್” ಹೇಳಿಸಿಕೊಂಡವರು.

ಯಾವುದೇ “ಚಮಕ್” ಮಾಡದೆ ’ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ’ ಹೇಳುತ್ತಲೇ “ಅಲಮೇಲಮ್ಮನ ಆಪರೇಷನ್”ಗೆ ಕೈ ಹಾಕಿ, ’ಬಜಾರ್’ಗಿಳಿದ ಪ್ರತಿಭಾವಂತ ನಿರ್ದೇಶಕ.

lahari-photo-30-11-19-suni-dirclr

ಇದೀಗ ಹೊಸ ಅವತಾರದಲ್ಲಿ ತಮ್ಮ ಗತ್ತು,ಗಮ್ಮತ್ತು ಹಳೆಯ ಖದರ್ ತೋರಿಸಲು “ಅವತಾರ ಪುರುಷ’ನೊಂದಿಗೆ ಬರಲು ಸಜ್ಜಾಗಿದ್ದಾರೆ.ಸದ್ದುಗದ್ದಲವಿಲ್ಲದೆ ಟಾಕಿ ಭಾಗದ ಚಿತ್ರೀಕರಣ ಪೂರ್ಣಗೊಳಿಸಿ ಎರಡು ಹಾಡುಗಳ ಬಾಕಿ ಉಳಿಸಿಕೊಂಡಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆದರೆ ಜನವರಿಯಲ್ಲಿ ಚಿತ್ರೀಕರಣ ನಡೆಸಿ,ಮಾರ್ಚ್ ಏಪ್ರಿಲ್ ಚಿತ್ರವನ್ನು ತೆರೆಗೆ ತರುವ ಆಲೋಚನೆ ಹೊಂದಿದ್ದಾರೆ. ’ಅವತಾರ ಪುರುಷ’ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹಾಕಿದ್ದಾರೆ.

ಚಿತ್ರದಲ್ಲಿ ಶರಣ್ ಮತ್ತು ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ,ಉಳಿದಂತೆ ಸಾಯಿಕುಮಾರ್,ಸುಧಾರಾಣಿ,ಶ್ರೀನಗರ ಕಿಟ್ಟಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ನಟ ಶರಣ್, ಜ್ಯೂನಿಯರ್ ಆರ್ಟಿಸ್ಟ್ ಪಾತ್ರ ಕಾಣಿಸಿಕೊಂಡಿದರೆ ನಟಿ ಆಶಿಕಾ  ಅನಿವಾಸಿ ಭಾರತೀಯಳ ಪಾತ್ರ ಮಾಡಿದ್ದಾರೆ. ಜ್ಯೂನಿಯರ್ ಕಲಾವಿದ ಹಲವು ಅವತಾರ ಎತ್ತುತ್ತಾನೆ ತನ್ನ ಜೀವನದಲ್ಲಿ ಅವತಾರ ಎತ್ತುವ ಘಟನೆ ನಡೆದಾಗ ಅದನ್ನು ಆತ ಹೇಗೆ ಸ್ವೀಕರಿಸುತ್ತಾನೆ ಎನ್ನುವುದು ಎಲ್ಲರಿಗೂ ಇಷ್ಟವಾಗುವ ರೀತಿ ಮನರಂಜನೆಯೊಂದಿಗೆ ಕಟ್ಟಿಕೊಡಲಾಗಿದೆ ಎಂದು ಚಿತ್ರದ ಮಾಹಿತಿ ಹಂಚಿಕೊಂಡರು ನಿರ್ದೇಶಕ ಸುನಿ.

ಚಿತ್ರವನ್ನು ಬೆಂಗಳೂರು, ಕೇರಳ,ಕೊಡಗು ಸೇರಿದಂತೆ ಮತ್ತಿತರ ಕಡೆ ೫೦ ದಿನಗಳ ಕಾಲ ಚಿತ್ರೀಕರಣ ಮಾಡಿದ್ದು ಟಾಕಿ ಭಾಗ ಸಂಪೂರ್ಣ ಮುಗಿದಿದೆ. ಇನ್ನು ೧೦ ದಿನಗಳ ಚಿತ್ರೀಕರಣ ಬಾಕಿ ಉಳಿದಿದೆ. ಬಾಕಿ ಇರುವ ಎರಡು ಹಾಡುಗಳನ್ನು ’ಅವನೇ ಶ್ರೀಮನ್ನಾರಾಯಣ’ ಚಿತ್ರ ಬಿಡುಗಡೆ ಬಳಿಕ ಚಿತ್ರೀಕರಣ ಮಾಡುವ ಉದ್ದೇಶವೊಂದಲಾಗಿದೆ.

ಚಿತ್ರಕ್ಕೆ ವಿಲಿಯಮ್ ಡೇವಿಡ್ ಕ್ಯಾಮರ ಕೈಚಳಕ ಚಿತ್ರಕ್ಕಿದೆ. ಇಡೀ ತಂಡ ಚಿತ್ರ ಚೆನ್ನಾಗಿ ಮೂಡಿ ಬರಲು ಸಹಕಾರ ನೀಡಿದೆ ಎಂದರು.

ಬಾಕ್ಸ್

ಟಾಕಿ ಪೂರ್ಣ

’ಬಜಾರ್’ ಚಿತ್ರದ ಬಳಿಕ ನಿರ್ದೇಶಕ ಸುನಿ ’ಅವತಾರ ಪುರುಷ’ ಚಿತ್ರವನ್ನು ಕೈಗೆತ್ತಿಕೊಂಡು ಟಾಕಿ ಭಾಗ ಸಂಪೂರ್ಣ ಚಿತ್ರೀಕರಣ ಮಾಡಿದ್ದಾರೆ. ಬಾಕಿ ಇರುವ ಎರಡು ಹಾಡುಗಳನ್ನು ಶೀಘ್ರ ಚಿತ್ರೀಕರಣ ಮಾಡಿ ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಆಲೋಚನೆ ಸುನಿ ಮತ್ತು ನಿರ್ಮಾಪಕ ಪುಷ್ಕರ್ ಅವರದು.

ಬಾಕ್ಸ್-೨

ಕಾಮಿಡಿಗೆ ಬರವಿಲ್ಲ

ಜ್ಯೂನಿಯರ್ ಆರ್ಟಿಸ್ಟ್ ಕಲಾವಿದನ ಅವತಾರಗಳನ್ನು ಅವತಾರ ಪುರುಷ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಶರಣ್ ಇದ್ದ ಮೇಲೆ ಕಾಮಿಡಿಗೂ ಬರವಿಲ್ಲ. ಎಲ್ಲರಿಗೂ ಇಷ್ಟವಾಗಲಿದೆ.

-ಸುನಿ

ನಿರ್ದೇಶಕ

ಬಾಕ್ಸ್-೩

ನಾಡಿಮಿಡಿತ ಅರಿತ ಸುನಿ

ಯುವ ಜನರ ನಾಡಿ ಮಿಡಿತ ಅರಿತು ಕೊಂಡಿರುವ ನಿರ್ದೇಶಕ ಸುನಿ ಅವರಿಗೆ ಇಷ್ಟವಾಗು ಅಂಶಗಳೊಂದಿಗೆ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದಾರೆ. ತಮ್ಮ ಮೊದಲ ಚಿತ್ರದಿಂದ ಇಲ್ಲಿಯತನಕ ವಿಭಿನ್ನವಾದ ಸಿನಿಮಾ ನೀಡಿ ಜನಮನಗೆಲ್ಲುವ ಪ್ರಯತ್ನ ಮಾಡಿದ್ದಾರೆ.

Leave a Comment