ಬಜಾರ್‌ಗೆ ದರ್ಶನ್ ಬಲ

ಬಜಾರ್ ಹಾಡುಗಳು ಬಿಡುಗಡೆಯಾಗಿವೆ ವಿಜಯನಗರದ ಬಂಟರ ಸಂಘದ ಸಭಾಂಗಣದಲ್ಲಿ ಮಂಗಳವಾರ ಕಿಕ್ಕಿರಿದು ಜನ ಸೇರಿದ್ದ ಕಾರ್ಯಕ್ರಮದಲ್ಲಿ ದರ್ಶನ್ ಹಾಡುಗಳ ಸಿಡಿಯನ್ನು ಬಿಡುಗಡೆಗೊಳಿಸಿದರು.
ಹೊಸಬರ ಜೊತೆಗೆ ನಾನು ಸಹ ಹೊಸಬ ನಾಗಿರುತ್ತೇನೆ.ಕಲಿಯುವುದು ಯಾವೂತ್ತು ಇರಲಿದೆ ಹೊಸಬನಾಗಿ ಚಿತ್ರರಂಗಕ್ಕೆ ಬಂದ ನಾನು ಹಳಬನಾಗಿರಬಹುದು ಆದರೆ ಹೊಸಬರ ಜೊತೆ ನಾನು ಹೊಸಬ ಎಂದರು ದರ್ಶನ್.
ಸಿನಿಮಾ ರಂಗಕ್ಕೆ ನಾಯಕ ಧನ್‌ವೀರ್‌ಗೆ ಸ್ವಾಗತ. ಪರದೆ ಮೇಲೆ ಆತ ಚೆಂದವಾಗಿ ಕಾಣಿಸುತ್ತಾರೆ. ಪಾರಿವಾಳ ರೇಸ್‌ನ್ನು ಇಟ್ಟುಕೊಂಡು ರೌಡಿಸಂ ಕತೆಯನ್ನು ನಿರ್ದೇಶಕರು ಹೇಳಲು ಹೊರಟ್ಟಿದ್ದಾರೆ.
ಮೂವತ್ತು ವರ್ಷಗಳ ಕೆಳಗೆ ನಾನು ಸಹ ಪಾರಿವಾಳಗಳನ್ನು ಸಾಕಿದ್ದೆ. ಅದನ್ನೇ ಕತೆಯಾಗಿಟ್ಟುಕೊಂಡು ನಿರ್ದೇಶಕರು ಸಮುದ್ರದ ಎದುರಾಗಿ ಈಜುತ್ತಾ ಹೋಗುತ್ತಾರೆ. ತಂಡಕ್ಕೆ ಒಳ್ಳೆಯದಾಗಲಿ ಎಂದು ದರ್ಶನ್ ಶುಭ ಕೋರಿದರು.
ಸುಂದರ ಪ್ರೀತಿ ಕತೆಯಲ್ಲಿ ಪಾರಿವಾಳ ರೇಸ್‌ಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಚೌಕ, ಶಿವಲಿಂಗ ಚಿತ್ರಗಳಲ್ಲಿ ಸ್ವಲ್ಪ ತೋರಿಸಲಾಗಿತ್ತು. ಇದರಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಸಲಾಗಿದೆ. ಕ್ಲೈಮಾಕ್ಸ್‌ದಲ್ಲಿ ೫೦೦ ಪಾರಿವಾಳಗಳನ್ನು ಇಟ್ಟುಕೊಂಡು ಶೂಟ್ ಮಾಡಿದ್ದು ಮರೆಯಲಾಗದ ಅನುಭವ ಎಂದರು ನಿರ್ದೇಶಕ ಸುನಿ.
ಚಮಕ್ ನಂತರ ಅದ್ದೂರಿ ಬಜಾರ್ ಚಿತ್ರಕ್ಕೆ ನಿರ್ದೇಶನ ಮಾಡಿರುವುದು ಖುಷಿ ತಂದಿದೆ ಎಂದು ಸುನಿ ಹೇಳಿಕೊಂಡರು.ತುಂಬಿದ್ದ ಜನರನ್ನು ರಂಜಿಸಲು ನಾಯಕ ಧನ್‌ವೀರ್ ಬಜಾರ್ ಸಿನಿಮಾದ ಒಂದು ಡೈಲಾಗ್ ಹೊಡೆದು ಚಪ್ಪಾಳೆ ಗಿಟ್ಟಿಸಿದರು.
ಸಿನೆಮಾದ ಚಿತ್ರೀಕರಣಕ್ಕಾಗಿ ಥೈಲ್ಯಾಂಡ್‌ಗೆ ಹೋಗಿದ್ದು ಸುಂದರ ನೆನಪು ಆಗಿದೆ ಅಂತ ಹಾಡಿಗೆ ನರ್ತನ ಮಾಡಿದರು ನಾಯಕಿ ಅದಿತಿಪ್ರಭುದೇವ. ನಿರ್ಮಾಪಕ ತಿಮ್ಮೆಗೌಡ, ಸಂಗೀತ ನಿರ್ದೇಶಕ ರವಿಬಸ್ರೂರು, ಕಾರ್ಯಕಾರಿ ನಿರ್ಮಾಪಕ ಶಿವಧ್ವಜ್ ಕೆಲವೊಂದು ಚಿತ್ರೀಕರಣ ಚಿತ್ರ ಸಾಗಿಬಂದ ಹಾದಿಯನ್ನು ಬಿಚ್ಚಿಟ್ಟು ಬಜಾರ್ ಗೆಲ್ಲಿಸುವಂತೆ ಮನವಿ ಮಾಡಿದರು.

Leave a Comment