ಬಕಾಸುರನ ಟೀಸರ್

ಪ್ರಕಾಶ್
ಕರ್ವ ಚಿತ್ರದ ನಿರ್ದೇಶಕ,ನಾಯಕನಟ ಜುಗಲ್‌ಬಂದಿಯಲ್ಲಿ ಸಿದ್ದಗೊಂಡಿರುವ ’ಬಕಾಸುರ’ ಸಿನೆಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಟೀಸರ್‌ಗೆ ಯಶ್ ಹಿನ್ನೆಲೆ ಧ್ವನಿ ನೀಡಿದ್ದು ಬೆಂಗಳೂರಿನಲ್ಲಿ ಬಹುತೇಕ ಚಿತ್ರೀಕರಣ ನಡೆದಿದ್ದರೆ ಮೈಸೂರು ಮಡಿಕೇರಿಯಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ.

ಕಳೆದ ಸೋಮವಾರ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ’ಬಕಾಸುರ’ ಚಿತ್ರದ ಟೀಸರ್ ಬಿಡುಗಡೆ ಮಾಡಲು ಶ್ರೀಮುರಳಿ ಆಗಮಿಸಿದ್ದರು. ನಾಯಕ ಆರ್‌ಜೆ.ರೋಹಿತ್ ನಿರೂಪಣೆ ಜವಬ್ದಾರಿಯನ್ನು ಹೊತ್ತುಕೊಂಡಿದ್ದರು ಚಿತ್ರಕ್ಕೆ ಶುಭ ಕೋರಿದ  ಶ್ರೀಮರಳಿ  ಮಾತನಾಡಿ ಏತಕ್ಕಾಗಿ ಬಂದಿದ್ದೇನೆ ಎಂಬುದಕ್ಕೆ ಉತ್ತರ ಸಿಗೋಲ್ಲ. ಹೇಳಲು ಹೋದರೆ  ಬೇರೆ ಅರ್ಥ ಬರುತ್ತೆ, ಬೇರೆ ತರಹ ಕೇಳಿಸುತ್ತೆ. ಇಲ್ಲಿಗೆ ಬರಲು ಸಂಬಂಧ ಬೇಕಾಗಿಲ್ಲ,. ನಾವು ಬಹಳ ಜನರನ್ನು ಇಷ್ಟ ಪಡುತ್ತೇವೆ. ನಮ್ಮನ್ನು ಇಷ್ಟಪಡುವವರು ಕಡಿಮೆ ಇರುತ್ತಾರೆ. ನಿಮಗೆ ಈ ಪಾಠಿ ಸ್ನೇಹಿತರು ಇರುವುದು ಸಂತಸ ತಂದಿದೆ. ವಿಜಯ್‌ಚೆಂಡೂರ್ ಚಿತ್ರಗಳನ್ನು ನೋಡುತ್ತಿದ್ದು, ಅವರ ಅಭಿಮಾನಿಯಾಗಿದ್ದೇನೆ ಎನ್ನುತ್ತಾರೆ.

ಮುಖ್ಯ ಪಾತ್ರದಲ್ಲಿ ರವಿಚಂದ್ರನ್-ರೋಹಿತ್ ಅಭಿನಯಿಸಿದ್ದಾರೆ. ಇವರೊಂದಿಗೆ  ಸಾಧುಕೋಕಿಲ,ಶಶಿಕುಮಾರ್, ಮಕರಂದ್ ದೇಶ್‌ಪಾಂಡೆ, ಸಿತಾರ ಮುಂತಾದವರು ಇದ್ದಾರೆ. ಆಂಗ್ಲ ಭಾಷೆಯಲ್ಲಿ ಬಕ್  ಅಂದರೆ ದುಡ್ಡು ಅರ್ಥ ಕೊಡುತ್ತದೆ. ಸುರ ಎಂದರೆ ಮನುಷ್ಯ. ಒಳ್ಳೆ ವ್ಯಕ್ತಿ ದುಡ್ಡಿನ ಹಿಂದೆ ಹೋದಾಗ ಹೇಗೆ ಬಕಾಸುರ ಆಗುತ್ತಾನೆ ಎಂಬುದು ಒಂದು ಎಳೆಯ ಕತೆಯಾಗಿದೆ. ರವಿ ಸರ್ ನಕರಾತ್ಮಕವಾಗಿ ಕಾಣಿಸಿಕೊಂಡಿದ್ದಾರೆ.  ಹಾಗಂತ ಬಕಾಸುರ ಯಾರು ಅಂತ ತಿಳಿಯಲು ಸಿನಿಮಾ ನೋಡಬೇಕು. ಬೆಂಗಳೂರು, ಮೈಸೂರು, ಗೋವಾ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸ್ವಲ್ಪ ಮಟ್ಟಿಗೆ ಹಾರರ್ ಲೇಪನವಿದೆ ಎಂಬುದರ ಮಾಹಿತಿಯನ್ನು ಬಿಚ್ಚಿಟ್ಟರು ನಿರ್ದೇಶಕ ನವನೀತ್.

ಗಾಂಧಾರಿ ಧಾರಾವಾಹಿ ನೋಡಿದ ನಿರ್ದೇಶಕರು ಹಿರಿತೆರೆಗೆ ಪರಿಚಯಿಸಿದ್ದಾರೆ ಕ್ಯಾಮಾರ ಮುಂದೆ ನಟಿಸಬಹುದು. ಆದರೆ ಕಾರ್ಯಕ್ರಮದಲ್ಲಿ  ಮಾತನಾಡಲು ಭಯವಾಗುತ್ತದೆ ಎಂದರು   ವಕೀಲೆ ಪಾತ್ರ ಮಾಡಿರುವ ನಾಯಕಿ ಕಾವ್ಯಗೌಡ. ವಿಜಯ್ ಚೆಂಡೂರ್, ರಾಘವೇಂದ್ರ ಭಟ್ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.

ಸಾಹಿತಿ ಮನ್ವರೀಷ್‌ಗೆ ಎಲ್ಲಾ ಸ್ಟಾರ್ ಕಲಾವಿದರ ಚಿತ್ರಗಳಿಗೆ ಹಾಡನ್ನು ಬರೆಯುವ ಬಯಕೆ ಇತ್ತು. ಅದು ಈ ಸಿನಿಮಾದ ಮೂಲಕ ಎಲ್ಲರನ್ನು ಸೇರಿಸಿಕೊಂಡು ಗೀತೆ ರಚಿಸುವ ಅವಕಾಶ ಸಿಕ್ಕಿದ್ದು ಸುಕೃತ ಎಂದು ಹೇಳಿದರು.

ಅವಿನಾಶ್ ಮೂರು ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದು ಕೆಲಸದ ಸಮಯದಲ್ಲಿ ಕಿತ್ತಾಡಿದ್ದು ಒಳ್ಳೆ ಪ್ರಾಡಕ್ಟ್‌ಗೋಸ್ಕರ ಎಂದು ಹೇಳಿಕೊಂಡರು. ಹಿತೈಷಿಗಳಾಗಿ ಮಲೆಯಾಳಂ ನಿರ್ಮಾಪಕ ಮೋಹನ್‌ಮೆನನ್, ಕರ್ವ ನಿರ್ಮಾಣ ಮಾಡಿರುವ  ಕೃಷ್ಣಚೈತನ್ಯ  ಆಗಮಿಸಿದ್ದರು. ಚಿತ್ರವು ಇದೇ ತಿಂಗಳು ಕೊನೆ ವಾರದಂದು ಬಿಡುಗಡೆಯಾಗುವ ಸಾಧ್ಯತೆ ಇದೆ.

Leave a Comment