ಫ್ರೀಜರ್‌ನಲ್ಲಿ ಮೊಟ್ಟೆ ಬೇಡ

ಶೀತ ಪೆಟ್ಟಿಗೆ ಅಥವಾ ರೆಫ್ರಿಜರೇಟರ್ ಆಹಾರಗಳನ್ನು ಇಟ್ಟು ಬಳಸಿದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹಲವು ಅಧ್ಯಯನಗಳು ಹೇಳಿವೆ.
ಆದರೆ ಇಂದಿನ ಯಾಂತ್ರೀಕೃತ ಯುಗದಲ್ಲಿ ಫ್ರಿಜ್ ಅಗತ್ಯವೆನಿಸಿದೆ. ಕಾರ್ಯದೊತ್ತಡದಿಂದ ವಾರಕ್ಕೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ಇಡಬೇಕಾದ ಅನಿವಾರ್ಯತೆ ಇದೆ.
ಆದರೆ ಫ್ರಿಜ್‌ನಲ್ಲಿ ಕೋಳಿಮೊಟ್ಟೆ ಇಡದಂತೆ ಆಹಾರ ತಜ್ಞರು ಎಚ್ಚರಿಸಿದ್ದಾರೆ.
ಕೋಳಿ ಮೊಟ್ಟೆಯನ್ನು ಫ್ರೀಜರ್‌ನಲ್ಲಿ ಇಟ್ಟರೆ ಮೊಟ್ಟೆಯಲ್ಲಿರುವ ಫೋಷಕಾಂಶ ನಾಶವಾಗುವುದಲ್ಲದೆ ಮೊಟ್ಟೆ ವಿಷಕಾರಿಯಾದರೂ ಆಗಬಹುದು ಎಂಬ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಮೊಟ್ಟೆಯನ್ನು ಫ್ರೀಜರ್‌ನಲ್ಲಿ ಇಡುವುದು ಬೇಡ. ತಾಜಾ ಮೊಟ್ಟೆ ಸೇವನೆ ಒಳ್ಳೆಯದು.
ಮೊಟ್ಟೆಯನ್ನು ಫ್ರೀಜರ್‌ನಲ್ಲಿ ಇಟ್ಟರೆ ತಂಪಾದ ವಾತಾವರಣದಲ್ಲಿ ಮೊಟ್ಟೆಯಿಟ್ಟರು ಪ್ರಮುಖ ಕಿಣ್ವಗಳು ನಾಶವಾಗುತ್ತವೆ. ಜೊತೆಗೆ ಇಂತಹ ಮೊಟ್ಟೆಯಲ್ಲಿ ಸಾಲೊಮನ್ ಎಂಬ ಬ್ಯಾಕ್ಟೀರಿಯಾ ಹುಟ್ಟಿಕೊಳ್ಳಬಹುದು. ಇದು ದೇಹಕ್ಕೆ ಹಾನಿಕಾರಕ ರೋಗಗಳನ್ನು ಉಂಟುಮಾಡಬಹುದು ಎಂದು ಅಧ್ಯಯನ ವರದಿಗಳು ಹೇಳಿವೆ.
ಒಂದು ಸಣ್ಣ ಪರೀಕ್ಷೆ
ಒಂದು ವಾರಕ್ಕಿಂದ ಹೆಚ್ಚು ದಿನ ಪರ ಊರಿಗೆ ಹೋದ ಸಂದರ್ಭದಲ್ಲಿ ರೆಫ್ರಿಜರೇಟರ್‌ನಲ್ಲಿ ಇಡುವ ಆಹಾರಗಳ ಸುರಕ್ಷತೆಗೆ ಒಂದು ಸಣ್ಣ ಪರೀಕ್ಷೆ ಮಾಡಬಹುದು.
ಊರಿಗೆ ತೆರಳುವ ಮೊದಲು ಒಂದು ಸಣ್ಣ ಲೋಟದಲ್ಲಿ ನೀರು ತುಂಬಿ ಫ್ರಿಜ್‌ನಲ್ಲಿಡಿ. ಅದು ಮಂಜುಗಡ್ಡೆಯಾದ ಮೇಲೆ ಅದರ ಮೇಲೆ ಒಂದು ನಾಣ್ಯ ಇಡಿ. ಒಂದು ವಾರದ ನಂತರ ಲೋಟದ ಮಂಜುಗಡ್ಡೆಯಲ್ಲಿರುವ ನಾಣ್ಯ ಮೇಲೆ ಇದ್ದರೆ ವಿದ್ಯುತ್ ಹೋಗದೆ ಆಹಾರ ತಾಜಾ ಇದೆ ಎಂದು ಅರ್ಥ.
ಒಂದು ವೇಳೆ ನಾಣ್ಯ ಲೋಟದ ತಳದಲ್ಲಿದ್ದರೆ ಆಹಾರ ಹಾಳಾಗಿದೆ ಎಂದು ಅರ್ಥ.
ಇಂತಹ ಆಹಾರ ತಿನ್ನಲು ಯೋಗ್ಯವಲ್ಲ.

Leave a Comment