ಫ್ರಾನ್ಸ್ ಜೈಲಿನಲ್ಲಿ ಒತ್ತೆಯಾಳು ಘಟನೆ: ಬಗೆಹರಿದ ಪರಿಸ್ಥಿತಿ

 ಮಾಸ್ಕೋ, ಜೂನ್ 12 (ಸ್ಪುಟ್ನಿಕ್) ಫ್ರಾನ್ಸ್ ನ ವಾಯವ್ಯ ಭಾಗದ ಕಾಂಡೆ-ಸುರ್-ಸಾರ್ಥ್ ಜೈಲಿನಲ್ಲಿನ ಒತ್ತೆಯಾಳು ಪರಿಸ್ಥಿತಿ ಬಗೆಹರಿಸಲಾಗಿದೆ ಎಂದು ಫ್ರಾನ್ಸ್ ಕಾನೂನು ಸಚಿವ ನಿಕೋಲ್ ಬೆಲ್ಲೊಬೆಟ್ ಹೇಳಿದ್ದಾರೆ.

 ಈ ಮುನ್ನ, ಜೈಲಿನಲ್ಲಿ 35 ವರ್ಷದ ಖೈದಿಯೊಬ್ಬ ಇಬ್ಬರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ. ಇವರ ಪೈಕಿ ಒಬ್ಬನನ್ನು ಇಂದು ಬಿಡುಗಡೆ ಮಾಡಿದ್ದ. ಶಸ್ತಾಸ್ರ್ರದಿಂದ ಬೆದರಿಸಿ ಜೈಲಿನ ವಾರ್ಡನ್‍ ಅನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಎಂದು ಬಿಎಫ್‍ಎಂ ಟಿವಿ ವರದಿ ಮಾಡಿದೆ.

 ಕಾಂಡೆ-ಸುರ್-ಸಾರ್ಥ್ ಜೈಲಿನಲ್ಲಿನ ಒತ್ತೆಯಾಳು ಪರಿಸ್ಥಿತಿ ಅಂತ್ಯಗೊಂಡಿದೆ. ಜೈಲು ಆಡಳಿತಕ್ಕೆ ಮತ್ತು ಪೋಲಿಸ್ ವಿಶೇಷ ಕಾರ್ಯಾಚರಣೆ ತಂಡಕ್ಕೆಧನ್ಯವಾದ ಸಲ್ಲಿಸುತ್ತಿದ್ದೇನೆ.’ ಎಂದು ಬೆಲ್ಲೊಬೆಟ್ ಟ್ವೀಟ್ ಮಾಡಿದ್ದಾರೆ.

  ಮಾಧ್ಯಮದ ವರದಿಯಂತೆ ಖೈದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

 ಹೆಚ್ಚಿನ ಸೌಲಭ್ಯವಿರುವ ಸ್ಥಳಕ್ಕೆ ತನ್ನನ್ನು ಸ್ಥಳಾಂತರಿಸಬೇಕೆಂದು ಖೈದಿ ಒತ್ತಾಯಿಸಿದ್ದ. ಈತ, ಮಾನಸಿಕವಾಗಿ ಬಳುತ್ತಿದ್ದ ಎನ್ನಲಾಗಿದ್ದು, ಈ ಹಿಂದೆ, ಬೇರೊಂದು ಜೈಲಿನಲ್ಲಿ ಈ ಖೈದಿ ಕೆಲವರನ್ನು ಒತ್ತೆಯಾಳುಗಳನ್ನಾಗಿಸಿಕೊಂಡಿದ್ದರಿಂದ  ಕಾಂಡೆ-ಸುರ್-ಸಾರ್ಥ್ ಜೈಲಿಗೆ ಸ್ಥಳಾಂತರಿಸಲಾಗಿದೆ.

Leave a Comment