ಫೋನ್ ಕದ್ದಾಲಿಕೆ ತನಿಖೆ ಏಕೆ ಇಲ್ಲ: ಹೊರಟ್ಟಿ ಪ್ರಶ್ನೆ

ಹುಬ್ಬಳ್ಳಿ, ಆ 16- ಫೋನ ಕದ್ದಾಲಿಕೆ ಪ್ರಕರಣಗಳು ರಾಜ್ಯದ ಇತಿಹಾಸದಲ್ಲಿ ಹೊಸದೇನಲ್ಲ,ಒಂದು ವೇಳೆ ಕಳ್ಳಗಿವಿ ಘಟನೆ ಈಗ ನಡೆದಿದ್ದರೆ ಅದನ್ನು ರಾಜ್ಯ ಸರ್ಕಾರ ತನಿಖೆ ಮಾಡುವುದನ್ನು ಬಿಟ್ಟು ಸುಮ್ಮನೆ ಏಕೆ ಕುಳಿತಿದೆ ಎಂದು ಮಾಜಿ ಸಚಿವ, ವಿಪ ಸದಸ್ಯ ಬಸವರಾಜ ಹೊರಟ್ಟಿ ಇಂದಿಲ್ಲಿ ಪ್ರಶ್ನಿಸಿದರು.
ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಫೋನ ಕದ್ದಾಲಿಕೆ (ಕಳ್ಳಗಿವಿ) ಆರೋಪ ಕುರಿತಂತೆ ಸ್ಪಷ್ಟನೆ ನೀಡಿದ ಅವರು ದೇಶದಲ್ಲಿ ಇದೇ ಮೊದಲ ಬಾರಿ ಏನು ಫೋನ ಕದ್ದಾಲಿಕೆ ಪ್ರಕರಣಗಳು ನಡೆದಿಲ್ಲ, ಹಿಂದೆಯೂ ಸಾಕಷ್ಟು ಬಾರಿ ನಡೆದಿವೆ ಎಂದು ಸಮರ್ಥಿಸಿಕೊಂಡರು.
ಆದರೆ ಈವರೆಗೂ ಯಾವುದೇ ಫೋನ ಕದ್ದಾಲಿಕೆ ಪ್ರಕರಣಗಳ ಬಗ್ಗೆ ತನಿಖೆಗಳು ನಡೆದಿಲ್ಲ, ಒಂದು ವೇಳೆ ತನಿಖೆಗಳು ನಡೆದರೂ ಯಾವುದೇ ಕ್ರಮ ಜರುಗಿಲ್ಲ ಎಂದರು.
ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರಗಳ ಫೋನ ಕದ್ದಾಲಿಕೆ ನಡೆಸಿವೆ ಅಷ್ಟೇ ಏಕೆ ಕೇಂದ್ರ ಸರ್ಕಾರವೂ ಈ ಹಿಂದೆ ಫೋನ ಕದ್ದಾಲಿಕೆ ನಡೆಸಿದೆ ಎಂದು ಅವರು ಆರೋಪಿಸಿದರು.
ಈಗ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಕದ್ದಾಲಿಕೆ ಪ್ರಕರಣ ಕುರಿತಂತೆ ಬಿಜೆಪಿಯವರು ಮನಬಂದಂತೆ ಮಾತನಾಡುವುದುನ್ನು ಬಿಟ್ಟು ತನಿಖೆಗೆ ಮುಂದಾಗಲಿ, ತನಿಖೆ ಮಾಡುವುದನ್ನು ಬಿಟ್ಟು ಸರ್ಕಾರ ಸುಮ್ಮನೆ ಏಕೆ ಕುಳಿತಿದೆ ಎಂದ ಅವರು, ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
@12bc = ಇಲಾಖಾವಾರು ವರದಿಗೆ ಆಗ್ರಹ
ಇನ್ನು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ನೆರೆಹಾವಳಿಯಿಂದ ಉಂಟಾದ ನಷ್ಟ ಕುರಿತಂತೆ ರಾಜ್ಯ ಸರ್ಕಾರ, ಕೃಷಿ, ಪಶುಸಂಗೋಪನೆ, ಆಸ್ತಿ, ಮೃತಪಟ್ಟವರ ಸಂಖ್ಯೆ ಆಧರಿಸಿ ಇಲಾಖಾವಾರು ವರದಿಯನ್ನು ಮುಖ್ಯ ಕಾರ್ಯದರ್ಶಿಗಳಿಂದ ಸಿದ್ಧಪಡಿಸಬೇಕೆಂದರು.
ಈ ರೀತಿ ಮುಖ್ಯ ಕಾರ್ಯದರ್ಶಿಗಳು ಸಿದ್ಧಪಡಿಸಿದ ವರದಿಯಲ್ಲಿ ಆಯಾ ಇಲಾಖಾವಾರು ಸಂಭವಿಸಿದ ಒಟ್ಟು ಹಾನಿಯ ಮೊತ್ತಕ್ಕೆ ಶೇ. 10 ರಷ್ಟನ್ನು ಅಧಿಕಗೊಳಿಸಿ ವರದಿ ಕಳುಹಿಸಿದರೇ ಕೇಂದ್ರದಿಂದ ಹೆಚ್ಚಿನ ಪರಿಹಾರ ದೊರಕಲು ಸಾಧ್ಯವೆಂದರು.
ಈ ನಿಟ್ಟಿನಲ್ಲಿ ಸರ್ಕಾರ ಈಗಲಾದರೂ ಕಾರ್ಯಪ್ರವೃತ್ತವಾದರೆ ಕೇಂದ್ರದ ಹಣ ಬಂದು ಸಂತ್ರಸ್ತರು ನೆಮ್ಮದಿಯ ನಿಟ್ಟುಸಿರು ಕಾಣಲು ಸಾಧ್ಯವೆಂದು ಅವರು ಹೇಳಿದರು.

Leave a Comment