ಫೋನ್‌ನಲ್ಲಿ ಆಧಾರ್ ಸಂಖ್ಯೆ ಹೇಳೀರಿ….. ಜೋಕೆ!

ಹುಬ್ಬಳ್ಳಿ,ಜೂ19- ವಂಚನೆಗೆ ಹತ್ತು ಹಲವು ರಾಜಮಾರ್ಗಗಳ ಜೊತೆಗೆ ವಾಮಮಾರ್ಗಗಳೂ ಲಭ್ಯ.
ಇದೀಗ ಫೋನ್ ಮಾಡಿ ಯಾರಾದರೂ ನಿಮ್ಮ ಆಧಾರ್ ಸಂಖ್ಯೆ ಕೇಳಿದರೆ ಹುಷಾರಾಗಿರುವುದೇ ಸೂಕ್ತ.
ಯಾವುದಾದರೂ ಮೊಬೈಲ್ ಕಂಪನಿಯವರೆಂದು ಹೇಳಿಕೊಂಡು ಕರೆ ಮಾಡುವ ಕೆಲವರು ನಿಮಗೆ ಒಂದನ್ನು ಒತ್ತಲು ಹೇಳಿ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಎಂಟರ್ ಮಾಡಲು ಹೇಳಬಹುದು. ನಂತರ ಬೇರೆ ಸಂಖ್ಯೆಗಳನ್ನು ಒತ್ತಿದ ಬಳಿಕ ಬರುವ ಓಟಿಪಿ (ಒನ್ ಟೈಪ್ ಪಾಸ್ ವರ್ಡ್) ಕೊಡಲು ಹೇಳುವರು.
ಅದನ್ನು ಕೊಟ್ಟರೆ ಆಧಾರ್ ಸಂಖ್ಯೆಯೊಡನೆ ಜೋಡಿಸಲ್ಪಟ್ಟ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಬೀಳುವುದು ಖಚಿತವೆಂಬ ಸಂದೇಶವೀಗ ವ್ಯಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ.
ಯಾರೇ ಸಂಖ್ಯೆ ಕೇಳಿದರೂ ಬ್ಯಾಂಕ್ ಗೋ, ಮೊಬೈಲ್ ಕಂಪನಿಗೋ ನೇರವಾಗಿ ತಲುಪಿಸುವುದಾಗಿ ಹೇಳಿ. ಮೋಸ ಹೋಗಬೇಡಿ, ಜಾಗೃತರಾಗಿ ಎಂಬ ಎಚ್ಚರಿಕೆಯೂ  ಸಂದೇಶದಲ್ಲಿದೆ, ಎಂಥಾ ಕಾಲ ಬಂತಯ್ಯಾ !

Leave a Comment