ಫೈನಲ್ಸ್‌ಗೆ ಪಿ.ವಿ. ಸಿಂಧು

ಜಕಾರ್ತ , ಆ.೨೭- ಭಾರತದ ಅಗ್ರಮಾನ್ಯ ಸೆಟ್ಲ್ ಬ್ಯಾಡ್ ಮಿಂಟನ್ ತಾರೆ ಪಿ.ವಿ.ಸಿಂಧು ಇಂದೂ ನಡೆದ ಏಷ್ಯನ್ ಗೇಮ್ಸ್ ಸೆಮಿಫೈನಲ್ಸ್ ಪಂದ್ಯದಲ್ಲಿ ಜಪಾನಿನ ಅಕಾನೆ ಯಮಾಗುಚಿ ವಿರುದ್ಧ 21-17, 15-21, ಹಾಗೂ 21-10 ರಲ್ಲಿ ಜಯಗಳಿಸಿದ್ದಾರೆ.

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಫೈನಲ್ಸ್ ಪ್ರವೇಶಿಸಿದ ಭಾರತದ ಏಕೈಕ ಕ್ರೀಡಾಪಟು ಸಿಂಧು ಆಗಿದ್ದಾರೆ.

ಇಂದು ನಡೆದ ಮತ್ತೊಂದು ಸೆಮಿಫೈನಲ್ಸ್‌ನಲ್ಲಿ ಭಾರತದ ಸೈನಾ ನೆಹ್ವಾಲ್ ಅವರನ್ನು ಪರಾಭವಗೊಳಿಸಿದ ಚೈನೀಸ್ ಚೈನೀಸ್ ಥೈಪೆಯ ತಾಯ್ ಝು ಯಿಂಗ್ ವಿರುದ್ಧ ಸಿಂಧು ಫೈನಲ್‌ನಲ್ಲಿ ಚಿನ್ನಕ್ಕಾಗಿ ಸೆಣೆಸಲಿದ್ದಾರೆ.

Leave a Comment