ಫೈಟ್ ಮಾಸ್ಟರ್‌ಗಳಿಗೆ ರಾಜಣ್ಣನ ಮಗನ ಗೌರವ

ಯಾವುದೇ ನಟ ಆಕ್ಷನ್ ಹೀರೋ ಆಗಿ ತೆರೆಯ ಮೇಲೆ ರಾರಾಜಿಸಬೇಕಾದರೆ ಅದರ ಹಿಂದೆ ಫೈಟ್ ಮಾಸ್ಟರ್ ಪರಿಶ್ರಮ ಅಪಾರ. ಈ ಕಾರಣಕ್ಕಾಗಿಯೇ ಎಲ್ಲಾ ಸಾಹಸ ನಿರ್ದೇಶಕರನ್ನು ಒಂದೆಡೆ ಸೇರಿಸಿ ಅವರ ಕೆಲಸ ನೆನೆದು ಗೌರವ ಸಲ್ಲಿಸಿದೆ ’ರಾಜಣ್ಣನ ಮಗ’.

ಸಾಹಸ ನಿರ್ದೇಶಕರಾದ ಡಿಫರೆಂಟ್ ಡ್ಯಾನಿ,ಥ್ರಿಲ್ಲರ್ ಮಂಜು,ಮಾಸ ಮಾದ,ಕುಲ್ಫಿ ಚಂದ್ರು, ಕೆ.ಡಿ ವೆಂಕಟೇಶ್ ಸೇರಿದಂತೆ ಹಲವು ಸಾಹಸ ನಿರ್ದೇಶಕರನ್ನು ಗೌರವಿಸುವ ಮೂಲಕ ’ರಾಜಣ್ಣನ ಮಗ’ ಚಿತ್ರದ ಟೀಸರ್ ಅನ್ನು ವಿನೂತನವಾಗಿ ಬಿಡುಗಡೆ ಮಾಡಿದರು ಚಿತ್ರದ ನಾಯಕ ಕಮ್ ನಿರ್ಮಾಪಕ ಹರೀಶ್.

ಕಳೆದ ವಾರ ಚಿತ್ರದ ಟೀಸರ್ ಬಿಡುಗಡೆ ಸಂದರ್ಭದಲ್ಲಿ ಹಾಜರಿದ್ದ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್.ಎ ಚಿನ್ನೇಗೌಡ, ಕಾರ್ಯದರ್ಶಿ ಭಾ.ಮ ಹರೀಶ್ ಮತ್ತಿತತರು ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು.

rajannana-maga_127

ಈ ವೇಳೆ ಮಾತಿಗಿಳಿದ ನಟ,ನಿರ್ಮಾಪಕ ಹರೀಶ್, ನಾಯಕ ತೆರೆಯ ಮೇಲೆ ಅದ್ಬುತವಾಗಿ ಆಕ್ಷನ್ ಮಾಡಲು ಸಾಹಸ ನಿರ್ದೇಶಕರ ಶ್ರಮ ಹಿರಿದು. ಹಾಗಾಗಿಯೇ ಹಲವು ಸಾಹಸ ನಿರ್ದೇಶಕರನ್ನು ಕರೆಸಿ ಗೌರವ ಸಲ್ಲಿಸಲಾಯಿತು. ಚಿತ್ರಕ್ಕೆ ಡಿಫರೆಂಟ್ ಡ್ಯಾನಿ ೬ ಫೈಟ್ ಮಾಡಿದ್ದಾರೆ.ಇದನ್ನು ನೋಡಿದ ಹಲವು ಸಾಹಸ ನಿರ್ದೇಶಕರು ಮೆಚ್ಚುಗೆ ಸೂಚಿಸಿದ್ದರು. ಬೇರೆಯವರಿಗೆ ಅವಕಾಶ ನೀಡುವ ಬದಲು ನಮ್ಮವಿರಗೆ ಅವಕಾಶ ನೀಡಿ ಗೌರವ ಸಲ್ಲಿಸಲಾಗಿದೆ. ಈ ತಿಂಗಳ ಕೊನೆ ಅಥವಾ ಮುಂದಿನ ತಿಂಗಳ ಮೊದಲ ವಾರ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ.

ಚಿತ್ರವನ್ನು ಬೆಂಗಳೂರು, ಕುಂದಾಪುರ ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ರಾಜಣ್ಣ ಮಗನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುತ್ತಾರೆ ಇಂತಹ ಸಮಯದಲ್ಲಿ ನಡೆಯುವ ಘಟನೆಯೊಂದರಿಂದ ಆಗುವ ಅನಾಹುತ ಅದನ್ನು ಸಮಾಜ ಹೇಗೆ ನೋಡುತ್ತದೆ ಎನ್ನುವ ಸುತ್ತಾ ಕತೆ ಸಾಗಲಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಎಂದು ಹೇಳಿಕೊಂಡರು.

ಹಿರಿಯ ನಟ ಚರಣ್ ರಾಜ್, ರಾಜಣ್ಣನ ಮಗ ಎನ್ನುತ್ತಿದ್ದಂತೆ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಆ ಹೆಸರಿಗೆ ದೊಡ್ಡ ಶಕ್ತಿ ಇದೆ. ಮಗನ್ನು ಪ್ರೀತಿಯಿಂದ ನೋಡಿಕೊಳ್ಳುವ ಅಪ್ಪ. ಒಂದು ಸಂದರ್ಭದಲ್ಲಿ ನಡೆಯುವ ಘಟನೆಯ ಬಳಿಕ ಮುಂದೇನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ಎಂದರು.

ಚಿತ್ರದಲ್ಲಿ ಅಕ್ಷತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮುಂಚೆ ಜಸ್ಟ್ ಮದ್ವೇಲಿ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಹರೀಶ್‌ಗೆ ರಾಜಣ್ಣನ ಮಗ ಎರಡನೇ ಚಿತ್ರ. ಈ ಚಿತ್ರಕ್ಕೂ ಬಂಡವಾಳ ಹಾಕುವ ಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.ಅತಿ ಶೀಘ್ರದಲ್ಲಿಯೇ ಚಿತ್ರವನ್ನು ತೆರೆಗೆ ತರುವ ಉದ್ದೇಶವೊಂದಿದೆ ಚಿತ್ರ ತಂಡ.

Leave a Comment