ಫೇಸ್ ಬುಕ್ ಖಾತೆ ನಿಷೇಧಕ್ಕೆ ಆಗ್ರಹ

ಮುಂಡಗೋಡ ಜೂ.12 ;- ಡಾ.ಝಾಕೀರ ನಾಯಕ ನೇತೃತ್ವದ ರಿಸರ್ಚ ಫೌಂಡೇಶನ ಮೇಲೆ ದೇಶದಲ್ಲಿ ನಿಷೇಧ ಹೇರಿದರೂ, ಸಂಘಟನೆಯ ಫೇಸ್ ಬುಕ್‍ಖಾತೆ ಮೇಲೆ ಇದುವರೆಗೂ ನಿಷೇಧ ಹೇರಿಲ್ಲ, ಫೇಸಬುಕ್ ನಂತಹ ಪ್ರಭಾವಿ ಸೋಶಿಯಲ್ ಮೀಡಿಯಾದಿಂದಝಾಕೀರ ನಾಯಕರಿಗೆ ಪ್ರಚಾರ ಮಾಡಲು ಅವಕಾಶ ನೀಡಲಾಗುತ್ತಿದ್ದು, ತಕ್ಷಣಡಾ.ಝಾಕೀರ ನಾಯಕ ಮತ್ತು ಅವನ ಸಂಘಟನೆಯ ಫೇಸಬುಕ್ ಸಹಿತಇನ್ನಿತರ ಸೊಶಿಯಲ್ ಮೀಡಿಯಾದ ಖಾತೆಗಳನ್ನು ನಿಷ್ಕ್ರೀಯಗೊಳಿಸಬೇಕೆಂದು ಮುಂಡಗೋಡ ಶಿವಸೇನೆ  ತಾಲೂಕಾಘಟಕದ ಅಧ್ಯಕ್ಷ ಪ್ರವೀಣಆರ್. ಪಾಟೀಲ್,ಕೇಂದ್ರ ಸರ್ಕಾರಕ್ಕೆ ಮನವಿ ಮೂಲಕ ಆಗ್ರಹಿಸಿದ್ದಾರೆ.
ಇಸ್ಲಾಮಿಕರಿಸರ್ಚ ಫೌಂಡೇಶನ ಮೇಲೆ ಹೇರಿದ ನಿಷೇಧವು ಕೇವಲ ತೋರಿಕೆಯಂತೆ ಕಂಡು ಬರುತ್ತದೆ.ಕೇಂದ್ರ ಸರ್ಕಾರವು ನಿರ್ಬಂಧ ಹೇರಿದ ಸಂಘಟನೆಯಲ್ಲಿ ಕಾರ್ಯ ಮಾಡುವಂತಿಲ್ಲ.ಹೀಗಿರುವಾಗ ಇಂದಿಗೂ ಡಾ.ಝಾಕೀರ ನಾಯಕ ಈತನ ಫೇಸಬುಕ್‍ಖಾತೆಯಲ್ಲಿಒಂದುಕೋಟಿಎಪ್ಪತ್ತು ಲಕ್ಷ  ಹಾಗೂ ಆತನಇಸ್ಲಾಮಿಕರಿಸರ್ಚ ಫೌಂಡೇಶನ ಫೇಸಬುಕ್‍ಖಾತೆಯಲ್ಲಿಅರವತ್ತು ಲಕ್ಷ ಅನುಯಾಯಿಗಳು ಕಾರ್ಯನಿರತರಾಗಿದ್ದಾರೆ. ಆದ್ದರಿಂದಡಾ.ಝಾಕೀರ ನಾಯಕ ಮತ್ತು ಅವನ ಸಂಘಟನೆಯ ಫೇಸಬುಕ್ ಸಹಿತ ಇನ್ನಿತರ ಸೊಶಿಯಲ್ ಮೀಡಿಯಾದ ಖಾತೆಗಳನ್ನು ತಕ್ಷಣ ರದ್ದುಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Leave a Comment