ಫೆ. 9: ನೈಸರ್ಗಿಕ ಚಿಕಿತ್ಸಾ ಶಿಬಿರ, ಸಂದರ್ಶನ

ತುಮಕೂರು, ಫೆ. ೭- ಶಿರಸಿಯ ನಿಸರ್ಗ ಆಸ್ಪತ್ರೆ ಮತ್ತು ವೇದಾ ವೆಲ್‌ನೆಸ್ ಸೆಂಟರ್‌ ವತಿಯಿಂದ ನೈಸರ್ಗಿಕ ಚಿಕಿತ್ಸಾ ಶಿಬಿರ ಮತ್ತು ಸಂದರ್ಶನವನ್ನು ನಗರದ ವಿವೇಕಾನಂದ ರಸ್ತೆಯಲ್ಲಿರುವ ತುಂಬೆ ಕಂಫರ್ಟ್ಸ್‌ನಲ್ಲಿ ಫೆ. 9 ರಂದು ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಏರ್ಪಡಿಸಲಾಗಿದೆ.

ಈ ಶಿಬಿರದಲ್ಲಿ ನೈಸರ್ಗಿಕವಾಗಿ ರೋಗ ನಿರ್ವಹಣೆ ಮಾಡುವಲ್ಲಿ ಜನಪ್ರಿಯಗೊಂಡಿರುವ ಪುಸ್ತಕ ಪವರ್ ಡಯಟ್, ನಾಟಿ ಔಷಧಿ ಮನೆ ಮದ್ದು ಹಾಗೂ ಆಹಾರೌಷಧಿ ಅಲ್ಫಾ ನ್ಯಾಚುರಲ್ ಒಮೆಗಾ-3 ಕೂಡ ಲಭ್ಯವಿದೆ ಎಂದು ಡಾ. ವೆಂಕಟರಮಣ ಹೆಗಡೆ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.

ಇಂದು ಜೀವನ ಶೈಲಿ ಹಾಗೂ ತಪ್ಪು ಆಹಾರ ಶೈಲಿ ಸಂಬಂಧಿತ ಖಾಯಿಲೆಗಳಾದ ಮಧುಮೇಹ, ಹೃದಯರೋಗ, ಏರು ರಕ್ತದೊತ್ತಡ, ಬೊಜ್ಜು ಮುಂತಾದ ರೋಗಗಳು ದೇಶದಲ್ಲಿ ಹೆಚ್ಚಾಗುತ್ತಿದೆ. ಇದರಿಂದಾಗಿ ಜೀವನ ಶೈಲಿ, ಆಹಾರ ಶೈಲಿ ಬದಲಾಯಿಸುವ ಅನಿವಾರ್ಯತೆ ನಮಗೆಲ್ಲರಿಗೂ ಇದೆ ಎಂದು ಅವರು ಹೇಳಿದರು.

ಪ್ರಕೃತಿ ಚಿಕಿತ್ಸೆ, ಪ್ರಕೃತಿ ದತ್ತ ಆಹಾರ, ಯೋಗ ಮತ್ತು ವ್ಯಾಯಾಮದ ಮೂಲಕ ರೋಗಗಳನ್ನು ಬೇರು ಸಹಿತ ಕಡಿಮೆ ಮಾಡುವ ಉಪಾಯಗಳನ್ನು ಶಿರಸಿಯ ನಿಸರ್ಗ ಆಸ್ಪತ್ರೆ ಹಾಗೂ ನಿಸರ್ಗ ಮನೆ ಸಾರ್ವಜನಿಕರಿಗೆ ತಿಳಿಸುತ್ತಾ ಬಂದಿದೆ ಎಂದರು.

ಫೆ. 9 ರಂದು ನಡೆಯಲಿರುವ ಆರೋಗ್ಯ ಶಿಬಿರ ಮತ್ತು ಸಂದರ್ಶನಕ್ಕಾಗಿ ಹಾಗೂ ಸಂದರ್ಶದ ಸಮಯ ಖಚಿತಪಡಿಸಿಕೊಳ್ಳಲು ಮೊಬೈಲ್ ಸಂಖ್ಯೆ: 8970822508ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

Leave a Comment