ಫೆ 7 ಕ್ಕೆ ” ಜಿಲ್ಕ” ಚಿತ್ರ ಬಿಡುಗಡೆ

 

ಕಲಬುರಗಿ ಜ 14:ಕನ್ನಡ ಹಿಂದಿ ಮರಾಠಿ ಭಾಷೆಯಲ್ಲಿ ಏಕ ಕಾಲಕ್ಕೆ ನಿರ್ಮಾಣವಾದ ಜಿಲ್ಕ ಕನ್ನಡ ಚಿತ್ರ ಫೆ 7 ರಂದು ತೆರೆಗೆ ಬರಲಿದೆ ಎಂದು ಚಿತ್ರದ ನಾಯಕ ನಟ, ನಿರ್ದೇಶಕ ಕವೀಶ್ ಶೆಟ್ಟಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಂದು ಪಾತ್ರಕ್ಕಾಗಿ ಮೂರು ಬಾರಿ ದೇಹ ತೂಕ ಏರಿಳಿತ ಮಾಡಿಕೊಂಡು ಅಭಿನಯಿಸಿದ್ದೇನೆ.ಇದು ಕನ್ನಡದಲ್ಲಿ ಪ್ರಥಮ ಪ್ರಯೋಗ ಎಂದು ಕವೀಶ್ ಶೆಟ್ಟಿ ಹೇಳಿದರು.ಈ ಚಿತ್ರದಲ್ಲಿ  ನಟಿಯರಾದ ಪ್ರಿಯಾಹೆಗ್ಡೆ,ಲಕ್ಷ ಶೆಟ್ಟಿ ಮತ್ತು ಗೋಪಿಕಾ ದಿನೇಶ್ ಅಭಿನಯಿಸಿದ್ದಾರೆ.ಪ್ರಾಂಶು ಜಾ ಸಂಗೀತ ನೀಡಿದ್ದಾರೆ.ಈ ಚಿತ್ರವನ್ನು ಹಿಂದಿಯಲ್ಲಿ ಇರೋಸ್ ಇಂಟರ್ ನಾಷನಲ್ ಮತ್ತು ಮರಾಠಿಯಲ್ಲಿ  ಝೀ ಸ್ಟುಡಿಯೋದವರು ನಿರ್ಮಿಸುತ್ತಿದ್ದಾರೆ.ಜಿಲ್ಕ ಎಂದರೆ ಪೀಳಿಗೆ ಎಂದರ್ಥ.ಎರಡು ಪೀಳಿಗೆಗಳ ನಡುವಿನ ಅಂತರದಲ್ಲಿ ಹುಟ್ಟುವ ಭಿನ್ನ ತಿರುವುಗಳ ವ್ಯತ್ಯಾಸವನ್ನು ಜಿಲ್ಕ ಚಿತ್ರ ಹೊಂದಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶ್ರೀಶ ಶೆಟ್ಟಿ,ವಿರೇಶ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

Leave a Comment