ಫೆ. 26 ರಿಂದ ಬಿಜೆಪಿಯಿಂದ ‘ಕಮಲ ಜ್ಯೋತಿ’ ಆಂದೋಲನ

ಮೈಸೂರು, ಫೆ 12- ರಾಜ್ಯ ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ವಿಫಲಗೊಂಡಿರುವ  ಯ   ಜೆಡಿಎಸ್- ಕಾಂಗ್ರೆಸ್   ಮೈತ್ರಿ ಸರ್ಕಾರದ ವಿರುದ್ಧ  ರಾಜ್ಯ ಭಾರತೀಯ ಜನತಾ ಪಕ್ಷ-ಬಿಜೆಪಿ  ಇದೇ ಫೆಬ್ರವರಿ 26ರಂದು ಕಮಲ ಜ್ಯೋತಿ ಆಂದೋಲನ ಹಮ್ಮಿಕೊಳ್ಳಲಿದೆ.

ಸುದ್ದಿಗೋಷ್ಟಿಯಲ್ಲಿ ಈ ವಿಷಯ ಪ್ರಕಟಿಸಿದ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ  ಭಾರತಿ ಶೆಟ್ಟಿ, ಮೋರ್ಚಾ ರಾಜ್ಯಾದ್ಯಂತ 58 ಸಾವಿರದ 178 ಬೂತ್ ಗಳಿಂದ 11 ಸಾವಿರದ 687 ಶಕ್ತಿ ಕೇಂದ್ರಗಳನ್ನು ರಚಿಸಲಾಗಿದ್ದು, ಈ ಕೇಂದ್ರಗಳು ಲೋಕಸಭಾ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿವೆ ಎಂದರು.

ಕಮಲ ಜ್ಯೋತಿ ಆಂದೋಲನದ ವೇಳೆ, ಪಕ್ಷದ ಕಾರ್ಯಕರ್ತರು, ಪ್ರತಿಯೊಂದು ಮನೆಗೆ ಭೇಟಿ ನೀಡಿ ಬಿಜೆಪಿ ಪೋಸ್ಟರ್ ಗಳನ್ನು ಅಂಟಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಳೆದ  ಐದು ವರ್ಷಗಳಲ್ಲಿ  ಜಾರಿಗೊಳಿಸಿರುವ ಯೋಜನೆಗಳನ್ನು ವಿವರಿಸಲಿದೆ ಎಂದರು

ಮಾರ್ಚ್ 2ರಂದು ಬೈಕ್  ಮೆರವಣಿಗೆ ಹಮ್ಮಕೊಳ್ಳಲಾಗಿದೆ. ಮಹಿಳೆಯರ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಕಾರ್ಯಕ್ರಮ ಕೈಗೊಂಡಿದ್ದಾರೆ. ಮುದ್ರಾ, ಬೇಟಿ ಬಚಾವೋ, ಬೇಟಿ ಪಡಾವೋ.ಮತ್ತಿತರ ಯೋಜನೆಗಳನ್ನು ಎನ್ ಡಿ ಎ ಸರ್ಕಾರ ಜಾರಿಗೊಳಿಸಿದ್ದು ಈ ಕಾರ್ಯಕ್ರಮಗಳ ಬಗ್ಗೆ ವಿಶೇಷವಾಗಿ ಮಹಿಳೆಯರಿಗೆ ಮಾಹಿತಿ ಇಲ್ಲ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

Leave a Comment