ಫೆ. 22 ರಂದು ಬನ್ನಿ ನಮ್ಮ ಸಂವಿಧಾನ ಅರಿಯೋಣ ಜಾಗೃತಿ

ಹುಬ್ಬಳ್ಳಿ, ಫೆ. 20- ಸಂವಿಧಾನ ಜಾಗೃತಿ ವೇದಿಕೆ ವತಿಯಿಂದ  ಸಂವಿಧಾನ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಫೆ.22 ರಂದು ಬನ್ನಿ ನಮ್ಮ ಸಂವಿಧಾನ ಅರಿಯೋಣಾ ಎಂಬ ವಿಷಯದ ಕುರಿತು ಸಾರ್ವಜನಿಕ ಸಭೆಯನ್ನು ಕೊಪ್ಪಿಕರ ರಸ್ತೆಯ ಮೆಟ್ರೊಪೋಲಿಸ್ ಹೊಟೆಲ್ ನಲ್ಲಿ ಆಯೋಜಿಸಿದೆ ಎಂದು ಸಂವಿಧಾನ ಜಾಗೃತಿ ವೇದಿಕೆಯ ಗುರುನಾಥ ಉಳ್ಳಿಕಾಶಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳ ಕುರಿತು ಜನರನ್ನು ಸುಶಿಕ್ಷಿತರನ್ನಾಗಿ ಮಾಡುವುದು, ಸಂವಿಧಾನ ಕೊಡಮಾಡುವ ವಾಕ್ ಸ್ವಾತಂತ್ರ್ಯ ದ ಹಕ್ಕು, ಕಾನೂನಿನ ಅಡಿಯಲ್ಲಿ ಸಮಾನತೆಯ ಹಕ್ಕು, ಸಾಮಾಜಿಕ ವಿಷಯದಲ್ಲಿ ಸಮಾನತೆಯ ಅವಕಾಶಗಳು, ಇತರೆ ನಾಗರಿಕರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಹಾಗೇ ಪ್ರಸಾರ ಮಾಡುವುದು, ಸಂವಿಧಾನ ಸಂರಕ್ಷಣೆಯ ಭರವಸೆ ಮೂಡಿಸುವ ಉದ್ದೇಶದಿಂದ ನಗರದ ವಿವಿಧ ನಗರದ ಜನರೊಂದಿಗೆ ಚರ್ಚಾಕೂಟ ಏರ್ಪಡಿಸಲಾಗುತ್ತಿದ್ದು, ಅದರಂತೆ ಮೊದಲು ಫೆ.22 ರಂದು ನಡೆಯಲಿದೆ ಎಂದರು.
ಇನ್ನೂ ಅಂದಿನ ಸಾಮಾಜಿಕ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ವಕೀಲರುಗಳಾದ ಕೆ.ಪ್ರಕಾಶ, ಎಸ್.ಎಸ್.ಖತೀಬ ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ವಿ.ಪಾಟೀಲ, ಪ್ರಭುದಾಸ, ಕೆ.ಎ.ಜಮಾದಾರ ಸೇರಿದಂತೆ ಮುಂತಾದವರು ಇದ್ದರು.

Leave a Comment