ಫೆ. 18 ರಂದು ಬಿ.ಎಸ್.ಎನ್.ಎಲ್ ಮುಷ್ಕರ

ಬೆಂಗಳೂರು, ಫೆ.೧೨- ಬಿ.ಎಸ್.ಎನ್.ಎಲ್.ಗೆ 4 ಜಿ ತರಂಗ ಗುಚ್ಚ ನೀಡುವುದು, ಮೂರನೇ ವೇತನ ಪರಿಷ್ಕರಣೆ ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ಬಿ.ಎಸ್.ಎನ್.ಎಲ್. ಅಧಿಕಾರಿ, ಅಧಿಕಾರಿಯೇತರ ಸಂಘಟನೆಗಳ ಒಕ್ಕೂಟದ ವತಿಯಿಂದ ರಾಷ್ಟ್ರಾದ್ಯಂತ ಫೆ 18 ರಿಂದ 20 ರವರೆಗೆ ಮುಷ್ಕರ ಹಮ್ಮಿಕೊಳ್ಳುವುದಾಗಿ ಬಿ.ಎಸ್.ಎನ್.ಎಲ್ ಜಿಲ್ಲಾ ಕಾರ್ಯದರ್ಶಿ ಎಚ್.ಎ.ಸುದರ್ಶನ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಅಂಬಾನಿ ಸಂಸ್ಥೆಯ ವಿಲೇಜ ಜಿಯೋಗೆ 4 ಜಿ ತರಂಗ ಗುಚ್ಚಗಳನ್ನು ನೀಡಿ ಭಾರತ ಸರಕಾರ ಸೌಮ್ಯದ ಬಿ.ಎಸ್.ಎನ್.ಗೆ ವಂಚನೆ ಮಾಡಿದೆ. ಇದು ಬಿ.ಎಸ್.ಎನ್.ಎಲ್. ಮುಚ್ಚುವ ಹುನ್ನಾರವಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಖಾಸಗಿ ಕಂಪನಿಗಳಿಗೆ ಆದ್ಯತೆ ನೀಡುತ್ತಿರುವ ಕೇಂದ್ರ ಸರಕಾರದ ನಿರ್ಧಾರ ಸರಿಯಲ್ಲ. ಇದರಿಂದ ಲಕ್ಷಾಂತರ ನೌಕರರ, ಕಾರ್ಮಿಕರ ಭವಿಷ್ಯ ಹಾಳಾಗಲಿದೆ ಎಂದು ಆರೋಪಿಸಿದರು.

ಖಾಸಗಿ ವಲಯದ ವಿಲೇಜ ಹಾಗೂ ಜಿಯೋ ಕಂಪನಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿರುವ ಕೇಂದ್ರ ಸರಕಾರ ಬಿ.ಎಸ್.ಎನ್.ಎಲ್. ಕಂಪನಿಗಳಿಗೆ ಯಾವುದೇ ಅನುದಾನವಾಗಲಿ, ಅಗತ್ಯ ಸೌಲಭ್ಯಗಳನ್ನು ನೀಡದೇ ನಿರ್ಲಕ್ಷ್ಯ ತಾಳಿದೆ. ಖಾಸಗಿ ಕಂಪನಿಗಳ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿರುವ ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ತಾಳಿದೆ.

ಹಾಗಾಗಿ ರಾಷ್ಟ್ರಾದ್ಯಂತ ಬಿ.ಎಸ್.ಎನ್.ಎಲ್.ಕಂಪನಿ ಉಳಿಸುವಂತೆ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಳೆದ 12 ವರ್ಷಗಳಿಂದ ಕೇಂದ್ರ ಸರಕಾರ ಮೂರನೇ ವೇತನ ಅನುಷ್ಕರಣೆ ಮಾಡದೇ ನಿರ್ಲಕ್ಷ್ಯ ತಾಳಿದೆ. ಇದರಿಂದ ನೌಕರರು ಬಹಳ ಕಷ್ಟದ ಜೀವನ ಎದುರಿಸುವಂತಾಗಿದೆ. ಕೇಂದ್ರ ಸರಕಾರಕ್ಕೆ ಶೇ. 24 % ತೆರಿಗೆ ಮೂಲಕ ಹಣ ನೀಡಲಾಗುತ್ತಿದೆ. ಆದರೂ ಕೇಂದ್ರ ಸರಕಾರ ಖಾಸಗಿ ಕಂಪನಿಗಳಿಗೆ ಒತ್ತು ನೀಡುತ್ತಿರುವುದನ್ನು ಕೈ ಬಿಟ್ಟು ಬಿ.ಎಸ್.ಎನ್.ಎಲ್. ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಗುಂಡಣ್ಣ, ಕೃಷ್ಣಾ ರೆಡ್ಡಿ, ಜಗದಾಳೆ, ಮೋಹನ ಹಾಜರಿದ್ದರು.

Leave a Comment