ಫೆ.15 : ಶ್ರೀಕಾಂತರಿಗೆ ಡಾಕ್ಟರೇಟ್ ಪ್ರದಾನ

ರಾಯಚೂರು.ಫೆ.13- ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಶ್ರೀಕಾಂತ ರಾವ್ ಅವರಿಗೆ ಡಾಕ್ಟರೇಟ್ ಗೌರವ ನೀಡಲಾಗಿದೆ.
ಜಿಲ್ಲೆಯಲ್ಲಿ ನ್ಯಾಯವಾದಿಗಳಾಗಿ ಕಳೆದ 35 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಅವರು ಅನೇಕ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದ ಶ್ರೀಕಾಂತ ರಾವ್ ಅವರು ಲೋಕಾಯುಕ್ತ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು. ನಂತರ ಇವರ ಸೇವೆ ಪರಿಗಣಿಸಿ, ಲೋಕಸೇವ ಆಯೋಗ ಸದಸ್ಯರನ್ನಾಗಿ ನೇಮಿಸಲಾಗಿದೆ.
ಸರ್ವತೋಮುಖ ವ್ಯಕ್ತಿತ್ವ ಕುರಿತು ಶ್ರೀಕಾಂತ ಅವರ ಸರ್ವೋತ್ತಮ ಪುಸ್ತಕ ಬಿಡುಗಡೆಗೊಳಿಸಿದರು. ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಯುನಿವರ್ಸಿಟಿ 15-02-2020 ರಂದು ರಾಜ್ಯ ಹೊಸೂರು ಪಟ್ಟಣದಲ್ಲಿ ಶ್ರೀಕಾಂತ ರಾವ್ ಅವರಿಗೆ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಿದೆ. ಯುನಿವರ್ಸಿಟಿ ಅಧ್ಯಕ್ಷರಾದ ಕೆ.ಅಶೋಕ ಕುಮಾರ ಈ ಕುರಿತು ಅಧಿಕೃತ ಪ್ರಕಟಣೆ ನೀಡಿದ್ದಾರೆ. ಶ್ರೀಕಾಂತ ಅವರ ಸುಧೀರ್ಘ ಸೇವೆಗೆ ಈ ಡಾಕ್ಟರೇಟ್ ಪ್ರಶಸ್ತಿ ನೀಡುವ ಮೂಲಕ ಸನ್ಮಾನಿಸಿರುವುದು ಜಿಲ್ಲೆಗೆ ಕೀರ್ತಿ ತಂದಂತಾಗಿದೆಂದು ಜಿಲ್ಲಾ ಉಪ್ಪಾರ ಸಮಾಜದ ಮಾಜಿ ಜಿಲ್ಲಾ ಉಪಾಧ್ಯಕ್ಷ ಅಮರೇಶ ಆದೋನಿ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಎಲ್.ವೀರೇಶ ಅವರು ತಿಳಿಸಿದ್ದಾರೆ.

Leave a Comment