ಫೆ. ೧, ೨ ಕ್ಕೆ ಟೈಕಾನ್ ಉದ್ಯಮಶೀಲತಾ ಶೃಂಗಸಭೆ

ಹುಬ್ಬಳ್ಳಿ,ಜ.೨೮- ಯುವಜನತೆ ಮತ್ತು ಮಹಿಳಾ  ಉದ್ಯಮಿಗಳ ಉತ್ತೇಜನಕ್ಕೆ  ಇಂಡಸ್  ಎಂಟರ್ ಪ್ರೆನೂರ್ಸ್ (ಟೆಇಇ) ವತಿಯಿಂದ ಫೆ.1 ಮತ್ತು 2 ರಂದು ಟೈಕಾನ್ -2020 ಉದ್ಯಮಶೀಲತಾ ಶೃಂಗಸಭೆಯನ್ನು ನಗರದ   ಗೋಕುಲರಸ್ತೆಯ ಡೆನಿಸನ್ಸ್ ಹೊಟೆಲ್ ನಲ್ಲಿ ಆಯೋಜಿಸಲಾಗಿದೆ ಎಂದು   ಶಶಿಧರ ಶೆಟ್ಟರ್  ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಟೈಕಾನ್ ಹುಬ್ಬಳ್ಳಿಯಿಂದ ದೇಶದಾದ್ಯಂತ ಹಲವಾರು ಉದ್ಯಮಶೀಲತೆ ಜಾಗೃತಿ ಕಾರ್ಯಕ್ರಮ ನಡೆಸಿದ್ದು, ಅದರಂತೆ ಯಶಸ್ವಿ ಉದ್ಯಮ, ಉನ್ನತ ವೃತ್ತಿಪರರು, ವೈದ್ಯರು, ಶಿಕ್ಷಣ ತಜ್ಞರು ಹೊಸತನವನ್ನು ಒಗ್ಗೂಡಿಸಿ ಈ ವಿಷಯಗಳ ಬಗ್ಗೆ ಚರ್ಚಿಸಲು ಇಮ್ಯಾಜಿನ್, ಇನ್ನೋವೇಟ್, ಸ್ಪೂರ್ತಿ ಕಾರ್ಯಕ್ರಮಗಳನ್ನು ಟೈಕಾನ್ -2020 ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಎರಡು ದಿನಗಳ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಶ್ರೀನಿವಾಸ ಮಾನೆ, ಗೌರವ ಗುಪ್ತಾ ಉದ್ಘಾಟನೆ ಮಾಡಲಿದ್ದು, ಫೆ.1 ರಂದು ಮಹಿಳಾ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜಾಗ್ರಾನ್ ಪ್ರಕಾಶನ್ ಲಿಮಿಟೆಡ್ ನ ಅಧ್ಯಕ್ಷ ಅಪೂರ್ವ ಪುರೋಹಿತ, ಗ್ಲೋಬಲ್ ಅಡ್ಜಸ್ಟ್ಮೇಂಟ್ಸ್ ಫೌಂಡೇಶನ್ ಅಧ್ಯಕ್ಷೆ ಡಾ.ರಂಜಿನಿ ಮಣಿಯನ್ ಮಹಿಳೆಯಲ್ಲಿ ನಾಯಕತ್ವದ ಗುಣ ಬೆಳೆಸುವ ಜೊತೆಗೆ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಲಿದ್ದಾರೆ. ಈ ವೇಳೆ ಸೆಂಚುರಿ ಫೈಬಾಕ್ಷಿಯಕ್ ದುಬೈ ಇಂಟರ್ನ್ಯಾಷನಲ್ ಮಾಡೆಲ್ ಸುಶ್ಮೀತಾ ದಿವಾಂಜೆ, ಜೆಟ್ ಸೆಟ್ ಗೋ ಏನಿಯೇಷನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಸಿಇಓ ಕನಿಕಾ ತೆಕ್ರಿವಾಲ್, ನಟಿ ಪ್ರೀಯಾ ಮಲಿಕ್, ಫೈನ್ ವೈನ್ಸ್ ಮೋರ್ ಕಾಮ್ ಸಿಇಒ ಧಾರ್ತಿ ದೇಸಾಯಿ, ನವ್ಯಾ ಬಯೋಲಾಜಿಕಲ್ಸ್ ಪ್ರೈ ಲಿಮಿಟೆಡ್ ಸ್ಥಾಪಕ ಡಾ.ಕೆ.ಆರ್.ರಾಜಶ್ರೀ ಇರಲಿದ್ದಾರೆ ಎಂದರು.
ಫೆ.2 ರಂದು ಪತಂಜಲಿ ಸಹ ಸಂಸ್ಥಾಪಕ ಹಾಗೂ ಯೋಗ ಗುರು ಬಾಬಾ ರಾಮದೇವ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು  ಮೂಲ ಸೌಕರ್ಯ ಅಭಿವರ್ಧಕ ಜೆಎಂ ಆರ್ ಸಮೂಹದ ಸ್ಥಾಪಕ

Leave a Comment