ಫೆಬ್ರವರಿ 28ರಂದು ಮಂಗಳೂರು ಪಾಲಿಕೆ ಮೇಯರ್ ಚುನಾವಣೆ

ಮಂಗಳೂರು, ಫೆ.12 – ಮಂಗಳೂರು ನಗರ ಪಾಲಿಕೆಯ ಮೇಯರ್ ಚುನಾವಣೆ ಫೆಬ್ರವರಿ 28ರಂದು ನಡೆಯಲಿದೆ ಎಂದು ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿದೆ.

ಮೈಸೂರು ಪ್ರಾದೇಶಿಕ ಆಯುಕ್ತ ವಿಶ್ವನಾಥ್ ವಿ. ಅವರು ಚುನಾವಣೆ ನಡೆಸಿಕೊಡಲಿದ್ದಾರೆ.

ಮೇಯರ್ ಚುನಾವಣೆ 21ನೇ ಸಾಲಿನ ಮೀಸಲಾತಿ ರೋಸ್ಟರ್‌ ಪದ್ಧತಿಯಂತೆ ನಡೆಯಲಿದ್ದು, ಈ ಬಾರಿ ಬಿಸಿಎಂ ಎ ಅಭ್ಯರ್ಥಿಗೆ ಮೇಯರ್ ಹುದ್ದೆ ಮೀಸಲಾಗಿದೆ. ಉಪ ಮೇಯರ್ ಹುದ್ದೆ ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗೆ ಮೀಸಲಾಗಿದೆ.

ನವೆಂಬರ್ 12ರಂದು ನಡೆದ 60 ಸದಸ್ಯ ಬಲದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನಗಳನ್ನು ಪಡೆದು ಬಹುಮತ ಹೊಂದಿದೆ.

Leave a Comment