ಫುಡ್ ಪಾಯಿಸ್ನಿಂಗ್‌ಗೆ ಮನೆಮದ್ದು

* ಶುಂಠಿಯನ್ನು ಹೊಟ್ಟೆ ಸಮಸ್ಯೆಗೆ ಹಿಂದಿನಿಂದಲೂ ಬಳಸುತ್ತಾ ಬರಲಾಗಿದೆ. ಸಣ್ಣ ಶುಂಠಿ, ೧-೨ ಚಮಚ ಜೇನುತುಪ್ಪ, ಬಿಸಿ ನೀರಿನ ಸೇವನೆಯಿಂದ ಫುಡ್? ಪಾಯ್?ಸ್ನಿಂಗ್? ಲಕ್ಷಣವನ್ನು ನಿವಾರಿಸಬಹುದು. ಶುಂಠಿಯಲ್ಲಿನ ಜಿಂಜೆರೊಲ್? ಎಂಬ ಪದಾರ್ಥ ಆಯಂಟಿಮೈಕ್ರೋಬಿಯಲ್ ಗುಣವನ್ನು ಹೊಂದಿದೆ. ಇದು ಆಹಾರದಲ್ಲಿನ ಪೌಷ್ಠಿಕಾಂಶವನ್ನು ಹೀರಿಕೊಂಡು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗೆ ಜೇನುತುಪ್ಪ ಬೇಗ ಗುಣಮುಖವಾಗಲು ಸಹಾಯಮಾಡುತ್ತದೆ.

* ಬೆಳ್ಳುಳ್ಳಿಯಲ್ಲಿರುವ ಆಂಟಿವೈರಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣ, ದೇಹವನ್ನು ಸ್ವಚ್ಛಗೊಳಿಸುವಲ್ಲಿ ಉತ್ತಮ. ಹಸಿ ಬೆಳ್ಳುಳ್ಳಿಯ ಎಸಳನ್ನು ನೀರಿನ ಜೊತೆ ಸೇವಿಸಿ, ಇದರಿಂದ ಹೊಟ್ಟೆ ಸಮಸ್ಯೆ ಮಾಯವಾಗುತ್ತದೆ.

* ನಿಂಬೆ ರಸದಲ್ಲಿ ಆಂಟಿಆಕ್ಸಿಡೆಂಟ್ ಗುಣವಿರುವುದರಿಂದ, ಇದು ದೇಹವನ್ನು ಆರೋಗ್ಯವಾಗಿಡಲು ಉತ್ತಮ. ಒಂದು ಲೋಟ ನೀರಿಗೆ ಅರ್ಧ ಚಮಚ ನಿಂಬೆ ರಸ ಸೇರಿಸಿ ಸೇವಿಸುವುದರಿಂದ ಫುಡ್? ಪಾಯಿಸ್ನಿಂಗ್ ಸಮಸ್ಯೆ ಗುಣವಾಗುತ್ತದೆ. ಇದಕ್ಕೆ ಜೇನುತುಪ್ಪವನ್ನು ಬೇಕಾದರೆ ಸೇರಿಸಿಕೊಳ್ಳಬಹುದು.

* ತುಳಸಿ ಎಲೆಯನ್ನು ಜಜ್ಜಿ ರಸ ತೆಗೆಯಿರಿ. ಇದನ್ನು ಜೇನುತುಪ್ಪ, ಒಂದು ಚಮಚ ಏಲಕ್ಕಿ ಫುಡಿಯೊಂದಿಗೆ ಸೇವಿಸಿ. ತುಳಸಿಯಲ್ಲಿನ ಆಂಟಿಬಾಕ್ಟೀರಿಯಲ್ ಗುಣ ಆಹಾರದಿಂದ ಉತ್ಪತ್ತಿಯಾಗುವ ಆರೋಗ್ಯ ಕೆಡಿಸುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.

* ಫುಡ್ ಪಾಯಿಸ್ನಿಂಗ್ ನಿವಾರಿಸಲು ನಿತ್ಯವೂ ಒಂದು ಬಾಳೆಹಣ್ಣು ಅತವಾ ಬಾಳೆಹಣ್ನನ್ನು ಮೊಸರಿನ ಜೊತೆ ಸೇರಿಸಿ ಸೇವಿಸಿ. ಇದರಲ್ಲಿ ಫೈಬರ್ ಸಮೃದ್ಧವಾಗಿರುತ್ತದೆ. ಫುಡ್ ಪಾಯಿಸ್ನಿಂಗ್‌ನಿಂದ ಕಳೆದುಹೋದ ಪೊಟ್ಯಾಶಿಯಮ್?ನ್ನು ಮತ್ತೆ ತುಂಬಲು ಬಾಳೆಹಣ್ಣು ಸಹಾಯಕಾರಿ. *ಫುಡ್ ಪಾಯಿಸ್ನಿಂಗ್ ಸಮಸ್ಯೆಗೆ ಜೀರಿಗೆ ತಕ್ಷಣ ಪರಿಹಾರ ನೀಡುತ್ತದೆ. ಒಂದು ಚಮಚ ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ. ಇದಕ್ಕೆ ಕೊತ್ತಂಬರಿ ರಸ ಹಾಗು ಸ್ವಲ್ಪ ಉಪ್ಪು ಹಾಕಿ, ಅದರ ಜೊತೆ ಬೆರೆಸಿ ಸೇವಿಸಿ. ಇದರಿಂದ ದೇಹ ಸ್ವಚ್ಛವಾಗುತ್ತದೆ.

* ಯೋಗಾರ್ಟ್‌ನಲ್ಲಿ ಆಂಟಿಬ್ಯಾಕ್ಟೀರಿಯಲ್ ಗುಣವಿದೆ. ಹಾಗಾಗಿ ಇದು ಫುಡ್ ಪಾಯಿಸ್ನಿಂಗ್ ಗುಣಪಡಿಸಲು ಸಹಕಾರಿ. ಒಂದು ಚಮಚ ಸೋಂಪನ್ನು ಯೋಗಾರ್ಟ್ ಜೊತೆ ಸೇವಿಸಿದರೆ, ಹೊಟ್ಟೆ ನೋವು, ವಾಂತಿ ಸಮಸ್ಯೆ ಗುಣವಾಗುತ್ತದೆ.

 

Leave a Comment