ಫುಟ್‍ಪಾತ್ ನಿರ್ಮಿಸಿ,ಶೌಚಾಲಯ ಆರಂಭಿಸಿ:ಜೈಕರವೇ

( ನಮ್ಮ ಪ್ರತಿನಿಧಿಯಿಂದ)
ಕಲಬುರಗಿ ಮೇ 19: ನಗರದಲ್ಲಿ ಹೊಸದಾಗಿ ತಯಾರಾದ ರಸ್ತೆಗಳ ಪಕ್ಕ ನಿರ್ಮಿಸದೇ ಇರುವ ಫುಟ್‍ಪಾತ್‍ಗಳನ್ನು ನಿರ್ಮಿಸುವಂತೆ ಹಾಗೂ ಈಗಾಗಲೇ ನಿರ್ಮಾಣಗೊಂಡು ಚಾಲನೆಗೆ ಬಾರದಿರುವ ಸಾರ್ವಜನಿಕ ಶೌಚಾಲಯಗಳನ್ನು ಪ್ರಾರಂಭಿಸುವಂತೆ ಜೈ ಕನ್ನಡಿಗರ ರಕ್ಷಣಾ ವೇದಿಕೆ ಆಗ್ರಹಿಸಿದೆ.
ನಗರದಲ್ಲಿ ಸುಪರ್ ಮಾರುಕಟ್ಟೆಯಿಂದ ಲಾಲಗಿರಿ ಕ್ರಾಸ್, ಹಳೆಯ ಆರ್‍ಟಿಓ ಕಚೇರಿಯಿಂದ ಶಹಬಾದ ರಿಂಗ್ ರಸ್ತೆ, ಮೋಹನ್ ಲಾಜ್ ದಿಂದ ರಾಮಮಂದಿರ,ಹುಮನಾಬಾದ್ ರಿಂಗ್ ರಸ್ತೆಯಿಂದ ಸರದಾರ ವಲ್ಲಭಬಾಯಿ ಪಟೇಲ ವೃತ್ತ ಹೀಗೆ ಸುಮಾರು 21 ರಸ್ತೆಗಳ ನವೀಕರಣವಾಗಿದೆ. ಆದರೆ ಈ ರಸ್ತೆಗಳಲ್ಲಿ ಫುಟ್‍ಪಾತ್ ನಿರ್ಮಾಣವಾಗಿಲ್ಲ.ಹೀಗಾಗಿ ಸಾರ್ವಜನಿಕರು ರಸ್ತೆ ಮೇಲೆ ಅಡ್ಡಾಡುತ್ತಿರುವದರಿಂದ ಅಪಘಾತಗಳು ಹೆಚ್ಚುತ್ತಿವೆ ಎಂದು ವೇದಿಕೆ ಅಧ್ಯಕ್ಷ ಸಚಿನ್ ಫರತಾಬಾದ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
ಕಲಬುರಗಿ ನಗರದಲ್ಲಿ ಮಿನಿವಿಧಾನಸೌಧ,ಪಾಲಿಕೆ,ತಹಶೀಲ ಕಚೇರಿ ಎದುರು ಸಾಮಾನ್ಯ ಶೌಚಾಲಯ ಹಾಗೂ ಸಂತ್ರಸವಾಡಿ.ರೈಲು ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ,ಮೋಹನಲಾಜ್ ಮತ್ತು ರಾಷ್ಟ್ರಪತಿ ವೃತ್ತದ ಹತ್ತಿರ ಆಧುನಿಕ ಇ ಶೌಚಾಲಯ ನಿರ್ಮಿಸಲಾಗಿದೆ. ಈ ಶೌಚಾಲಯಗಳು ನಿರ್ಮಾಣವಾಗಿ 1 ವರ್ಷವಾದರೂ ಸಾರ್ವಜನಿಕರ ಬಳಕೆಗೆ ತೆರೆಯದೇ ಇರುವದು ಆಶ್ಚರ್ಯ ತಂದಿದೆ
ಮಹಾನಗರ ಪಾಲಿಕೆಯವರು ಒಂದು ವಾರದೊಳಗೆ ಸೂಕ್ತ ಕ್ರಮಕ್ಕೆ ಮುಂದಾಗದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಮನೆಗೆ ಮುತ್ತಿಗೆ ಹಾಕಲಾಗುವದು ಎಂದರು
ಸುದ್ದಿಗೋಷ್ಠಿಯಲ್ಲಿ ಕಾಶೀನಾಥ ಮಾಳಗೆ, ಲಕ್ಷ್ಮೀಕಾಂತ ಉದನೂರ. ಸುರೇಶ ಹನಗುಂಡಿ,ರವಿ, ಕಲ್ಯಾಣಿ ಹಾಗೂ ಇತರರಿದ್ದರು

Leave a Comment