ಫಿಸಿಯೋಥೆರಪಿ ಗೊತ್ತಿರದ ಸಂಗತಿಗಳು

ಫಿಸಿಯೋಥೆರಪಿಯಿಂದ ಹಲವು ರೋಗಗಳನ್ನು ಗುಣಪಡಿಸಬಹುದು. ಸಾಮಾನ್ಯವಾಗಿ ಗುಣಪಡಿಸಬಹುದಾದ ಸಮಸ್ಯೆಗಳು ರೀತಿ ಇವೆ.

ತಲೆ ಸುತ್ತುವಿಕೆ ಸಮಸ್ಯೆಯನ್ನು ಗುಣಪಡಿಸಬಲ್ಲದು

ಬಿಪಿಪಿವಿ (ಬಿನೈನ್ ಪ್ಯಾರೊಕ್ಸಿಸ್ಮಲ್ ಪೊಸಿಷನಲ್ ವರ್ಟಿಗೋವು ತಲೆ ಸುತ್ತುವಿಕೆಗೆ ಬಹಳ ಸಾಮಾನ್ಯ ಕಾರಣವಾಗಿದೆ)ಗೆ ನೀಡುವ ಫಿಸಿಯೋಥೆರಪಿ ಚಿಕಿತ್ಸೆಯು ನಿಗದಿತ ತಲೆ ಮತ್ತು ದೇಹದ ಚಲನೆಗಳನ್ನು ಒಳಗೊಂಡಿದ್ದು, ಇದು ಒಳಗಿವಿಯಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ಕ್ರಿಸ್ಟಲ್‌ಗಳ ಸೂಕ್ತ ಚಲನೆಗೆ ಸಹಕರಿಸುತ್ತದೆ. ಆ ಮೂಲಕ ತಲೆ ಸುತ್ತುವಿಕೆಯನ್ನು ಹಂತಹಂತವಾಗಿ ಗುಣಪಡಿಸುತ್ತದೆ.

physiotherapy1

ತೀವ್ರ ತರದ ದೀರ್ಘಕಾಲೀನ ಉಸಿರಾಟದ ತೊಂದರೆಗಳನ್ನು ಗುಣಪಡಿಸಬಲ್ಲದು

ಫಿಸಿಯೋಥೆರಪಿ ತಂತ್ರಗಳು ಬ್ರೋನ್ಕೋಕನ್ಸ್ಟ್ರಿಕ್ಷನ್ (ಶ್ವಾಸಕೋಶದಲ್ಲಿ ಉಸಿರಾಟದ ಹಾದಿ ಕಿರಿದಾಗುವಿಕೆ) ಹಾಗೂ ಡಿಸ್ಪ್ನಿಯ (ಉಸಿರಾಡಲು ತೊಂದರೆ) ಯಂಥ ಸಮಸ್ಯೆಗಳನ್ನು ತಗ್ಗಿಸುವ ಗುರಿ ಹೊಂದಿವೆ. ವಿವಿಧ ಹಾಗೂ ನಿರ್ದಿಷ್ಟ ಉಸಿರಾಟದ ಭಂಗಿಗಳು ಇಂತಹ ಪರಿಸ್ಥಿತಿಗಳನ್ನು ಗುಣಪಡಿಸುವಲ್ಲಿ ಯಶಸ್ವಿಯಾಗಿವೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ

ಕರುಳುಗಳಿಗೆ ರಕ್ತದ ಚಲನೆ ಹೆಚ್ಚಿಸಿ, ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸಿ, ಜನರ ಮಲಬದ್ಧತೆ ಸಮಸ್ಯೆ ನೀಗಿಸಿ ಜೀರ್ಣಕ್ರಿಯೆ ಸುಧಾರಿಸಲು ವ್ಯಾಯಾಮಗಳು ಸಹಾಯಕವಾಗಿವೆ. ಫಿಸಿಯೋಥೆರಪಿಯಿಂದ ತಲೆನೋವಿನ ಸಮಸ್ಯೆ ಗುಣಪಡಿಸಬಹುದು

ಒತ್ತಡದಿಂದ ಉಂಟಾಗುವ ತಲೆನೋವು, ಮೈಗ್ರೇನ್ ಹಾಗೂ ಕ್ಲಸ್ಟರ್ ತಲೆನೋವು, ತಲೆನೋವಿನ ಸಾಮಾನ್ಯ ವಿಧಗಳು. ಕೂರುವ ಭಂಗಿ ಸರಿಯಿಲ್ಲದಿದ್ದರೆ, ಒತ್ತಡ, ಸ್ನಾಯು ಬಿಗಿತ ಅಥವಾ ಕುತ್ತಿಗೆಗೆ ಏಟಾಗಿದ್ದರೆ ಅದರಿಂದ ಸಾಮಾನ್ಯ ತಲೆನೋವುಗಳು ಬರಬಹುದು.

ಭೌತ ಚಿಕಿತ್ಸಕರು ಅನುಸರಿಸುವ ಮೃದು ಅಂಗಾಂಶವನ್ನು ಕೌಶಲ್ಯದಿಂದ ನಿರ್ವಹಿಸುವ ತಂತ್ರಗಳು ಹಾಗೂ ಕೀಲುಗಳ ನಿರ್ವಹಣಾ ತಂತ್ರಗಳು ಆತಂಕದಿಂದ ಬರುವ ತಲೆನೋವುಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಬಲ್ಲದು. ಚಲನೆಯನ್ನು ಸರಿಪಡಿಸಿ ಮೇಲಿನ ಬೆನ್ನುಮೂಳೆಯಲ್ಲಿ ಉತ್ತಮ ಭಂಗಿ ನಿರ್ವಹಿಸಲು ಫಿಸಿಯೋಥೆರಪಿಸ್ಟ್ ಗಳು ಹಲವಾರು ರೀತಿಯ ತಂತ್ರಗಳನ್ನು ಬಳಸುತ್ತಾರೆ.

ಹಲ್ಲು ನೋವನ್ನು ಫಿಸಿಯೊಥೆರಪಿ ಗುಣಪಡಿಸುತ್ತದೆ

ಟಿಎಂಜೆ (ದವಡೆಯ ಮೂಳೆಯನ್ನು ತಲೆಬುರುಡೆಗೆ ಜೋಡಿಸುವ ಸಂಧಿ) ನೋವು ಹಾಗೂ  ಸರಿಯಾಗಿ ಕಾರ್ಯ ನಿರ್ವಹಿಸದಿರುವಿಕೆ ಸಮಸ್ಯೆ ಇದ್ದಲ್ಲಿ ಫಿಸಿಯೋಥೆರಪಿಸ್ಟ್ ನೋವು ನಿವಾರಿಸಿ, ಬಿಗಿತ ಕಡಿಮೆಗೊಳಿಸಿ ಸಾಮಾನ್ಯ ಚಟುವಟಿಕೆ ಹಾಗೂ ಚಲನೆಯನ್ನು ಪುನಾ ಸ್ವಸ್ಥಿತಿಗೆ ತರುತ್ತಾರೆ.

physiotherapy2

ಮೂತ್ರದ ಮೇಲೆ ನಿಯಂತ್ರಣ ಇಲ್ಲದ ಸಮಸ್ಯೆಗೆ ಪರಿಹಾರ

ಇದು ಮಹಿಳೆಯರಲ್ಲಿ ಬಹಳ ಸಾಮಾನ್ಯ ಸಮಸ್ಯೆ. ಗರ್ಭಧಾರಣೆ, ಹೆರಿಗೆಯ ಸಮಯ, ಶಸ್ತ್ರಚಿಕಿತ್ಸೆ, ದಮ್ಮು, ಸ್ನಾಯುಗಳ ಹಠಾತ್ ಸೆಳೆತ ಇತರೆ ಒಟ್ಟಾರೆ ಸಮಸ್ಯೆಗಳು ಮೂತ್ರದ ಮೇಲೆ ನಿಯಂತ್ರಣ ತಪ್ಪುವಂತೆ ಮಾಡಬಹುದು.

ಇಂಥ ಸಂದರ್ಭದಲ್ಲಿ ಫಿಸಿಯೋಥೆರಪಿಯು ಮೂತ್ರಕೋಶದ ಮೇಲೆ ಮರು ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ. ಚಿಕಿತ್ಸೆಯು ಪ್ರಾಥಮಿಕವಾಗಿ ಪೆಲ್ವಿಕ್ ಭಾಗದ ಸ್ನಾಯುಗಳನ್ನು ಕೇಂದ್ರೀಕರಿಸಿದ್ದು, ಅವು ಬಿಗಿಯಾಗುವಂತೆ ಮಾಡಿ ಇಲ್ಲವೇ ವಿಶ್ರಾಂತಗೊಂಡು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲಾಗುತ್ತದೆ.

ಕೈಕಾಲು ಊತ ಸಮಸ್ಯೆಯನ್ನು ಗುಣಪಡಿಸಬಹುದು

ಲಿಂಫೆಡೆಮಾ ಎಂದು ಕರೆಯಲ್ಪಡುವ ಕೈಕಾಲು ಊತ ಸಮಸ್ಯೆಯು ದೇಹದ ದುಗ್ಧರಸ ವ್ಯವಸ್ಥೆಯ ಏರುಪೇರಿನಿಂದ ಆಗುತ್ತದೆ. ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆ ನೀಡುವಾಗ ದುಗ್ಧರಸ ಗ್ರಂಥಿಗಳನ್ನು ತೆಗೆದಾಗ ಈ ಸಮಸ್ಯೆ ಸಾಮಾನ್ಯವಾಗಿ ಕಂಡುಬರುತ್ತದೆ.

ವಿಶೇಷ ತರಬೇತಿ ಪಡೆದ ಭೌತ ಚಿಕಿತ್ಸಕರು ಕೆಲ ವಿಧದ ದುಗ್ಧರಸ ಗ್ರಂಥಿ ಕಾಲುವೆ ಮಸಾಜ್ ತಂತ್ರಗಳ ಮೂಲಕ ಅಂಗಗಳ ಊತ ಕಡಿಮೆಗೊಳಿಸಬಲ್ಲರು. ಲಿಂಫೆಡೆಮಾ  ಭೌತ ಚಿಕಿತ್ಸೆಯು ಮಸಾಜ್, ಕಟ್ಟಿಕೊಂಡ ಗ್ರಂಥಿ ರಸಗಳನ್ನು ನಾಳಗಳಿಂದ ಹೊರ ಹೋಗುವಂತೆ ಮಾಡುವುದು ಹಾಗೂ ಬೆಲ್ಟ್ ಹಾಕುವ ಮೂಲಕ ಪರಿಸ್ಥಿತಿಯ ನಿರ್ವಹಣೆಗೆ ಸಹಕರಿಸುವ ವಿಧಾನಗಳನ್ನು ಒಳಗೊಂಡಿದೆ.

ಟೆಲಿಮೆಡಿಸಿನ್ ಆಧಾರಿತ ಫಿಸಿಯೋಥೆರಪಿಯು ಮನೆ ವ್ಯಾಯಾಮ ಕಾರ್ಯಕ್ರಮದ ಮೂಲಕ ರೋಗಿಗೆ ನೆರವಾಗಬಲ್ಲದು ವಾರಕ್ಕೆ ಹಲವು ಬಾರಿ ಭೌತ ಚಿಕಿತ್ಸಕರನ್ನು ಭೇಟಿ ಮಾಡಬೇಕಾದ ರೋಗಿಗಳು, ಕ್ಲಿನಿಕ್ ಗೆ ಹೋಗದೆಯೇ ತಮಗೆ ಅಗತ್ಯವಿರುವ ಚಿಕಿತ್ಸೆ ಪಡೆಯಬಹುದೆಂಬ ವಿಚಾರವನ್ನು ಖಂಡಿತಾ ಇಷ್ಟಪಡುತ್ತಾರೆ.

ಮನೆಯ ವಾತಾವರಣದಲ್ಲೇ ಚಿಕಿತ್ಸೆ ಎಂದರೆ ರೋಗಿಗಳಿಗೆ ಹೆಚ್ಚು ನೆಮ್ಮದಿ ನೀಡುತ್ತದೆ. ವಿಡಿಯೋ ಮಾದರಿಯ ಮೂಲಕ ಆನ್ಲೈನ್ ನಲ್ಲೇ ವ್ಯಾಯಾಮ ಕಾರ್ಯಕ್ರಮಗಳನ್ನು ನೀಡಬಹುದು.

ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ

ವ್ಯಕ್ತಿಯ ಚಟುವಟಿಕೆಯನ್ನು ಹೆಚ್ಚಿಸಲು ಭೌತಚಿಕಿತ್ಸಕರು  ವ್ಯಾಯಾಮ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಬಹುದು.  ವ್ಯಾಯಾಮಗಳು ಹವನ್ನು ದಣಿಸಿ, ಆತಂಕವನ್ನು ತಗ್ಗಿಸಿ ದೇಹದ ಜೈವಿಕ ಗಡಿಯಾರದ ಲಯ ಬದಲಿಸಲು ಸಹಕರಿಸುತ್ತವೆ ಮತ್ತು ಗುಣಮಟ್ಟದ ನಿದ್ದೆಗೆ ಕಾರಣವಾಗುವಂತೆ ದೇಹದ ಉಷ್ಣತೆಯನ್ನು ಬದಲಾಯಿಸುತ್ತವೆ.

Leave a Comment