ಫಿಫಾ ವಿಶ್ವಕಪ್- ಮೈದಾನದಲ್ಲಿ ಜೂ. ಕ್ರಿಸ್ಟಿಯಾನೋ ಕಿಕ್

ರಷ್ಯಾ, ಜೂ ೧೩- ಫಿಫಾ ವಿಶ್ವಕಪ್ ವೇಳೆ ಪೊರ್ಚ್‌ಗಲ್ ನಾಯಕ, ರಿಯಲ್ ಮ್ಯಾಡ್ರಿಡ್‌ನ ಹಿರೋ ಕ್ರಿಸ್ಟಿಯಾನೋ ರೊನೊಲ್ಡೊ ಮೈದಾನದಲ್ಲಿ ಚೆಂಡನ್ನು ಆಡಿಸುವ ರೀತಿಗೆ ಅಭಿಮಾನಿಗಳು ಎಂದೂ ಫಿದಾ ಆಗಿದ್ದರು, ಇದೀಗ ಜೂನಿಯರ್ ಕ್ರಿಸ್ಟಿಯಾನೋ ಹೊಸ ಜಾದೂ ಮಾಡಲು ಸಜ್ಜಾಗುತ್ತಿದ್ದಾನೆ.

೮ರ ಈ ಬಂಟ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತಂದೆಯಂತೆ ಪುಟ್‌ಬಾಲ್‌ನಲ್ಲಿ ಹೊಸ ಗೋಲ್ ಬಾರಿಸುವ ತವಕದಲ್ಲಿದ್ದಾನೆ. ತಂದೆ ಆಟವನ್ನೇ ಮೈಗೂಡಿಸಿಕೊಂಡಿರುವ ಜೂನಿಯರ್ ಕ್ರಿಸ್ಟಿಯಾನೋ ಅಪ್ಪನ ೭ ನಂಬರಿನ ಜೆರ್ಸಿಯಂತೆ ತನ್ನ ಟೀ ಶರ್ಟ್‌ಗೂ ೭ ನಂಬರ್ ಹಾಕಿಕೊಂಡು ಪುಟ್‌ಬಾಲ್ ಆಟದ ಕೌಶಲ್ಯಗಳನ್ನು ಕಲಿಯುತ್ತಿದ್ದಾನೆ, ಅಲ್ಲದೇ ಈ ವರ್ಷದ ಪ್ರಮುಖ ಆಕರ್ಷಣೆಗಳಲ್ಲಿ ಜೂನಿಯರ್ ಕ್ರಿಸ್ಟಿಯಾನೋ ಕೂಡ ಗಮನ ಸೆಳೆದಿದ್ದಾರೆ.

ತಂದೆ ಕ್ರಿಸ್ಟಿಯಾನೋ ರೊನೊಲ್ಡೊ ತನ್ನು ಬಲಗಾಲಿನಿಂದ ವೇಘವಾಗಿ ಚೆಂಡು ಒದೆಯುವಂತೆ ಕ್ರಿಸ್ಟಿಯಾನೋ ರೊನೊಲ್ಡೊ ಕೂಡ ಚೆಂಡನ್ನು ಒದೆಯುವ ಪ್ರಯತ್ನಕ್ಕೆ ಅಭಿಮಾನಿಗಳು ಮಾರು ಹೋಗಿದ್ದಾರೆ. ಹಿರಿಯ ಮಗನ ಮೇಲೆ ಅಪಾರ ಕಾಳಜಿ ತೋರಿಸಿರುವ ರೊನಾಲ್ಡೊ ಹಲವಾರು ಟೂರ್ನಿಗಳಿಗೆ ಹಾಘೂ ಪ್ರಶಸ್ತಿ ಸಮಾರಂಭಗಳಗೂ ಜೂ. ಕ್ರಿಸ್ಟಿಯಾನೋನನ್ನು ಕರೆದುಕೊಂಡು ಹೋಗುತ್ತಾರೆ. ಕ್ರಿಸ್ಟಿಯಾನೋ ರೊನೊಲ್ಡೊಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

ಒಟ್ಟಿನಲ್ಲಿ ೨೧ನೇ ಫಿಫಾ ವಿಶ್ವಕಪ್‌ನಲ್ಲಿ ಜೂ. ಕ್ರಿಸ್ಟಿಯಾನೋ ಮೈದಾನದಲ್ಲಿ ಕಾಣಿಸಿಕೊಂಡಿರುವುದು ಎಲ್ಲಾರ ಗಮನ ಸೆಳೆದಿದೆ. ಮುಂಬರುವ ವಿಶ್ವಕಪ್‌ನಲ್ಲಿ ಜೂ. ಕ್ರಿಸ್ಟಿಯಾನೋ ತಂದೆಯಂತೆ ಇತಿಹಾಸ ಸೃಷ್ಟಿಸಿದರೂ ಅಚ್ಚರಿ ಇಲ್ಲ. ಅಲ್ಲದೇ ತಂದೆ ಕೋಚ್ ಆಗಿ ಪುತ್ರ ಆಟಗಾರನಾಗಿ ಮೈದಾನದಲ್ಲಿ ಕಾಣಿಸಿಕೊಂಡು ಮೋಡಿ ಮಾಡುತ್ತಾರೆ ಎಂಬುಂದನ್ನು ಯಾರು ಅಲ್ಲಗೆಳೆಯುವಂತಿಲ್ಲ.

ಅಲ್ಗೆರಿಯಾ ತಂಡದ ವಿರುದ್ಧ ಇತ್ತೀಚೆಗೆ ನಡೆದ ಅಭ್ಯಾಸ ಪಂದ್ಯದಲ್ಲಿ ಫೊರ್ಚ್‌ಗಲ್ ೩-೦ ಗೋಲುಗಳಿಂದ ಜಯ ಸಾಧಿಸಿದ ಬಳಿಕ ಮೈದಾನದಲ್ಲಿ ರೊನಾಲ್ಡೊ ಪುತ್ರನೊಂದಿಗೆ ಕಾಲ ಕಳೆದರು. ಅಲ್ಲದೇ ಪುಟ್‌ಬಾಲ್ ಟಿಪ್ಸ್‌ಗಳನ್ನು ನೀಡಿದರು. ಇದನ್ನೆಲ್ಲಾ ಗ್ಯಾಲರಿಯಲ್ಲಿ ಕೂತು ವೀಕ್ಷಿಸುತ್ತಿದ್ದ ಪ್ರೇಕ್ಷಕರು ಮುಂದೆ ತಂದೆ ಜೂ.ಕ್ರಿಸ್ಟಿಯಾನೋ ಕೂಡ ಸ್ಟಾರ್ ಆಟಗಾರ ಆಗುವುದರಲ್ಲಿ ಅನುಮಾನವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

Leave a Comment