ಫಿಫಾ ವಿಶ್ವಕಪ್- ಇತಿಹಾಸದಲ್ಲಿ ಅತಿ ಹೆಚ್ಚು ಹಣ ಖರ್ಚು

ರಷ್ಯಾ, ಜೂ ೧೨- ಇದೇ ಜೂ ೧೪ರಿಂದ ಆರಂಭವಾಗಲಿರುವ ಫಿಫಾ ವಿಶ್ವಕಪ್‌ಗಾಗಿ ಇದುವರೆಗೂ ೮೮ ಸಾವಿರ ಕೋಟಿ ರೂ ವೆಚ್ಚ ಮಾಡಲಾಗಿದೆಯಂತೆ.

ವಿಶ್ವಕಪ್ ಆತಿಥ್ಯ ವಹಿಸಿರುವ ರಷ್ಯಾ ಪಂದ್ಯಾವಳಿಗಾಗಿ ಅತಿ ಹೆಚ್ಚು ಹಣ ಸುರಿದಿದ್ದು, ಇದು ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಇದು ಅತಿ ಹೆಚ್ಚಿನ ಹಣವಾಗಿದೆ ಎಂದು ಅಂದಾಜಿಸಲಾಗಿದೆ. ಫಿಫಾ ಆತಿಥ್ಯ ವಹಿಸಿರುವ ರಷ್ಯಾಗೆ ಇದ್ದರಿಂದ ೨.೦೯ ಲಕ್ಷ ಕೋಟಿ ಲಾಭವಿದೆ. ರಷ್ಯಾ ಕ್ರೀಡೆ ಹಾಗೂ ಕ್ರೀಡಾ ಸಾಧನಗಳಿಗಾಗಿ ೮೮ ಸಾವಿರ ಕೋಟಿ ಖರ್ಚು ಮಾಡಿದೆಯಂತೆ. ಇದರಲ್ಲಿ ಶೇಕಡಾ ೩೦ರಷ್ಟು (೨೮ ಸಾವಿರ ಕೋಟಿ) ಕ್ರೀಡೆಗೆ ಖರ್ಚಾಗಿದೆ. ಶೇಕಡಾ ೫೦ರಷ್ಟು ಸಾರಿಗೆ, ಆರೋಗ್ಯ, ಭದ್ರತೆಗೆ ಖರ್ಚು ಮಾಡಿದೆ. ಶೇಕಡಾ ೨೦ರಷ್ಟು (೧೪ ಸಾವಿರ ಕೋಟಿ) ಹೊಟೇಲ್ ಹಾಗೂ ಇತರೆ ಕೆಲಸಕ್ಕೆ ಖರ್ಚು ಮಾಡಲಾಗಿದೆ.

ರಷ್ಯಾ ದೀರ್ಘಾವಧಿಯಲ್ಲಿ ಇದರ ಪ್ರಯೋಜನ ಪಡೆಯಲಿದೆ. ೨೦೨೩ರ ವೇಳೆಗೆ ರಷ್ಯಾಕ್ಕೆ ೨.೦೯ ಲಕ್ಷ ಕೋಟಿ ಲಾಭವಾಗಲಿದೆ. ವಿಶ್ವಕಪ್ ತಯಾರಿ ಸಂಬಂಧ ರಷ್ಯಾದಲ್ಲಿ ೨.೨೨ ಲಕ್ಷ ಉದ್ಯೋಗ ಸೃಷ್ಟಿಯಾಗಿತ್ತು. ವಿಶ್ವಕಪ್ ಪಂದ್ಯಾವಳಿಯಲ್ಲಿ ೧೪ ತಂಡ ಪಾಲ್ಗೊಳ್ಳಲಿದೆ. ೧೦೪ ದೇಶಗಳ ಜನರು ಪಂದ್ಯಾವಳಿ ವೀಕ್ಷಣೆಗೆ ತೆರಳಲಿದ್ದಾರೆ.ಈವರೆಗೆ ೧೦ ವಿಶ್ವಕಪ್ ನಡೆದಿದ್ದು, ೧೨ನೇ ವಿಶ್ವಕಪ್ ೨೦೧೯ರಲ್ಲಿ ಇಂಗ್ಲೆಂಡ್ ನಲ್ಲಿ ನಡೆಯಲಿದೆ. ೨೦೧೪ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ಗಾಗಿ ೧೧.೬೩ಬಿಲಿಯನ್ ಡಾಲರ್ ಹಣ ವ್ಯಯ ಮಾಡಲಾಗಿತ್ತು.

ಫುಟ್ಬಾಲ್ ತಾರೆ ಪೀಲೆ ಗೈರಾಗುವ ಸಾಧ್ಯತೆ

ಫಿಫಾ ಫುಟ್ಬಾಲ್ ವಿಶ್ವ ಕಪ್ ಆರಂಭಕ್ಕೆ  ಇನ್ನು ಎರಡು ದಿನ ಮಾತ್ರ ಬಾಕಿ ಉಳಿದಿವೆ. ಆದರೆ ಫುಟ್ಬಾಲ್ ವಿಶ್ವಕಪ್ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶ್ವವಿಖ್ಯಾತ ಫುಟ್ಬಾಲ್ ಸ್ಟಾರ್ ಪೀಲೆ ಭಾಗಿಯಾಗುತ್ತಾರಾ ಅಥವಾ ಇಲ್ಲವಾ ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.
ಬ್ರೆಜಿಲ್‌ನ ಫುಟ್ಬಾಲ್ ತಾರೆ ಪೀಲೆ ಮಾಸ್ಕೊದಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ಉದ್ಘಾಟನಾ ಸಮಾರಂಭದಿಂದ ದೂರ ಉಳಿಯುವ ಸಾಧ್ಯತೆ ಇದೆ. ಬಹಳ ಸಮಯದಿಂದ ಪೀಲೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರ ಕಾಲಿನ ನೋವು ಮತ್ತೆ ಉಲ್ಬಣಿಸಿದೆ. ಇದೇ ಕಾರಣದಿಂದ ಸಮಾರಂಭಕ್ಕೆ ಗೈರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ೭೭ ವರ್ಷದ ಪೀಲೆ ಅವರನ್ನು ಹಲವು ರೋಗಗಳು ಕಾಡುತ್ತಿವೆ. ಹೀಗಾಗಿ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.

Leave a Comment