ಫಿಫಾ ಮಹಿಳಾ ವಿಶ್ವಕಪ್‌: ಪ್ರೀ ಕ್ವಾರ್ಟರ್‌ ತಲುಪಿದ ಇಟಲಿ, ಬ್ರೆಜಿಲ್‌, ಆಸ್ಟ್ರೇಲಿಯಾ

ವೇಲೆನ್ಸಿಯೆನ್ಸ್ (ಫ್ರಾನ್ಸ್‌), ಜೂ 19 (ಕ್ಸಿನ್ಹುವಾ) ಬ್ರೆಜಿಲ್ ವಿರುದ್ಧ ಇಟಲಿ 0-1 ಅಂತರದಲ್ಲಿ ಸೋತರೂ ಗೋಲು ಅಂತರದಿಂದ ಫಿಫಾ ಮಹಿಳಾ ವಿಶ್ವಕಪ್‌ ಟೂರ್ನಿಯ ಅಂತಿಮ 16ರ ಹಂತಕ್ಕೆ ಪ್ರವೇಶಿಸಿತು.
ಮತ್ತೊಂದು ಪಂದ್ಯದಲ್ಲಿ ಸ್ಯಾಮ್‌ ಕೆರ್ರ್ ಅವರು ಗಳಿಸಿದ ನಾಲ್ಕು ಗೋಲುಗಳ ನೆರವಿನಿಂದ ಆಸ್ಟ್ರೇಲಿಯಾ 4-1 ಅಂತರದಲ್ಲಿ ಜಮೈಕಾ ತಂಡವನ್ನು ಮಣಿಸಿತು. ಆಸ್ಟ್ರೇಲಿಯಾ ಹಾಗೂ ಬ್ರೆಜಿಲ್‌ ಎರಡೂ ತಂಡಗಳು ತಲಾ ಆರು ಅಂಕಗಳೊಂದಿಗೆ ಪ್ರೀ ಕ್ವಾರ್ಟರ್‌ ಫೈನಲ್‌ ತಲುಪಿದವು.
ಬ್ರೆಜಿಲ್‌ ಫುಟ್ಬಾಲ್‌ ದಂತಕತೆ ಮಾರ್ಟ ಅವರು ಇಟಲಿ ವಿರುದ್ಧದ ಪಂದ್ಯದಲ್ಲಿ ಏಕೈಕ ಗೋಲು ಗಳಿಸುವ ಮೂಲಕ ಫಿಫಾ ವಿಶ್ವಕಪ್‌ನಲ್ಲಿ 17ನೇ ಗೋಲು ಸಿಡಿಸಿದ ಕೀರ್ತಿಗೆ ಭಾಜನರಾದರು. ಆರು ಬಾರಿ ವಿಶ್ವದ ಅತ್ಯುನ್ನತ ಆಟಗಾರ್ತಿಯಾಗಿರುವ ಅವರು 74ನೇ ನಿಮಿಷದಲ್ಲಿ ಸಿಕ್ಕಿ ಪೆನಾಲ್ಟಿಯಲ್ಲಿ ಸದುಪಯೋಗ ಪಡಿಸಿಕೊಂಡರು.
ಮಾರ್ಟ ಅವರು ಪುರುಷರ ಹಾಗೂ ಮಹಿಳೆಯರ ಎರಡೂ ವಿಭಾಗದ ಫಿಫಾ ವಿಶ್ವಕಪ್‌ನಲ್ಲಿ ಗಳಿಸಿದ ಅತಿ ಹೆಚ್ಚು ಗೋಲು ಗಳಿಸಿದ ಮೊದಲ ಆಟಗಾರ್ತಿ ಎಂಬ ಸಾಧನೆ ಮಾಡಿದರು. ಆ ಮೂಲಕ ಜರ್ಮನಿಯ ಪುರುಷರ ತಂಡದ ಮಾಜಿ ಸ್ಟ್ರೈಕರ್‌ ಮಿರೋಸ್ಲಾವ ಕ್ಲೋಸ್‌(16 ಗೋಲು) ಅವರ ದಾಖಲೆಯನ್ನು ಹಿಂದಿಕ್ಕಿದರು.

Leave a Comment