ಫಿಫಾ ಅಂಡರ್-17 ವಿಶ್ವಕಪ್ ಮುಂದೂಡಿಕೆ

 

ಬೆಂಗಳೂರು, ಏ 4- ಕೊರೊನ ಸೋಂಕಿನಿಂದ ಎಲ್ಲೆಡೆ ಪ್ರಮುಖ ಟೂರ್ನಿಗಳು ರದ್ದಾಗಿವೆ. ಇದೀಗ ಭಾರತದಲ್ಲೆ ನಡೆಯಬೇಕಿದ್ದ ಫಿಫಾ ಅಂಡರ್-17 ವಿಶ್ವಕಪ್‌ಗೂ ಕೊರೊನಾ ಕರಿನೆರಳು ಆವರಿಸಿದೆ.

ಕೊರೊನಾ ಹಾವಳಿಯಿಂದ ಭಾರತದಲ್ಲಿ ಈ ವರ್ಷದ ನವೆಂಬರ್‌ನಲ್ಲಿ ನಡೆಯಬೇಕಾಗಿದ್ದ ಅಂಡರ್-೧೭ ಮಹಿಳಾ ವಿಶ್ವಕಪ್ ಟೂರ್ನಿಯನ್ನು ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಮುಂದೂಡುವ ನಿರ್ಧಾರವನ್ನು ಪ್ರಕಟಿಸಿದೆ.

ಮಹಿಳಾ ವಯೋಮಿತಿಯ ವಿಶ್ವಕಪ್ ಟೂರ್ನಿಯು ನವೆಂಬರ್ ೨ರಿಂದ ೨೧ರ ತನಕ ಭಾರತದ ಐದು ತಾಣಗಳಾದ ಕೋಲ್ಕತಾ, ಗುವಾಹಟಿ, ಭುವನೇಶ್ವರ, ಅಹ್ಮದಾಬಾದ್ ಹಾಗೂ ನವಿ ಮುಂಬೈನಲ್ಲಿ ನಿಗದಿಯಾಗಿತ್ತು. ಟೂರ್ನಿಯಲ್ಲಿ ಒಟ್ಟು ೧೬ ತಂಡಗಳು ಸ್ಪರ್ಧೆಯಲ್ಲಿದ್ದವು. ಆತಿಥೇಯ ಭಾರತ ನೇರವಾಗಿ ಅರ್ಹತೆ ಪಡೆದಿತ್ತು. ಭಾರತ ಇದೇ ಮೊದಲ ಬಾರಿ ಅಂಡರ್-೧೭ ಮಹಿಳಾ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದಿತ್ತು.

ಕೋವಿಡ್-೧೯ರಿಂದ ಉಂಟಾಗುವ ಸಮಸ್ಯೆಯನ್ನು ನಿಭಾಯಿಸಲು ಫಿಫಾ ಕೌನ್ಸಿಲ್ ಇತ್ತೀಚೆಗೆ ರಚಿಸಿದ್ದ ಫಿಫಾ ಕಾನ್ಫಡರೇಶನ್ ಕಾರ್ಯಕಾರಿ ಗುಂಪು ಫಿಫಾ ಅಂಡರ್-೧೭ ವಿಶ್ವಕಪ್‌ನ್ನು ಮುಂದೂಡುವ ನಿರ್ಧಾರವನ್ನು ಕೈಗೊಂಡಿದೆ.

Leave a Comment