ಫಿಟ್‌ನೆಸ್, ಪ್ರಧಾನಿ ಸವಾಲು ಸಿ.ಎಂ. ವಿನಮ್ರ ತಿರುಗೇಟು

ಬೆಂಗಳೂರು, ಜೂ. ೧೩- `ನನ್ನ ದೇಹದಾರ್ಢ್ಯತೆಕ್ಕಿಂತಲೂ ರಾಜ್ಯದ ಅಭಿವೃದ್ಧಿ ಮತ್ತು `ಫಿಟ್‌ನೆಸ್ ಮುಖ್ಯ.` ಹೀಗೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ನಯವಾಗಿಯೇ ಹೇಳಿದ್ದಾರೆ.

ದೇಹದಾರ್ಢ್ಯತೆ (ಫಿಟ್‌ನೆಸ್) ಸವಾಲು ಒಪ್ಪಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರು ಹಾಕಿರುವ ಸವಾಲಿಗೆ ಪ್ರೀತಿಯಿಂದಲೇ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ.ನನ್ನ ಆರೋಗ್ಯ ಕುರಿತು ನಿಮಗೆ ಇರುವ ಕಾಳಜಿಯನ್ನು ಗೌರವಿಸುತ್ತೇನೆ. ದೇಹದಾರ್ಢ್ಯತೆ ಕಾಪಾಡಿಕೊಳ್ಳುವುದು ಮುಖ್ಯ ಎಂಬುದು ಗೊತ್ತಿದೆ. ಯೋಗ ಮತ್ತು ಟ್ರೆಂಡ್‌ಮಿಲ್ ನನ್ನ ದೈನಂದಿನ ಕಸರತ್ತಾಗಿ ಎಂದು ಹೇಳಿದ್ದಾರೆ.

ನನ್ನ ದೇಹದಾರ್ಢ್ಯತೆಕ್ಕಿಂತಲೂ ರಾಜ್ಯದ ಅಭಿವೃದ್ಧಿಮುಖ್ಯ. ಹೀಗಾಗಿ ರಾಜ್ಯ ಅಭಿವೃದ್ಧಿಗಾಗಿ ನಿಮ್ಮ ಸಹಕಾರ ಇರಲಿ ಎಂದು ಪ್ರಧಾನಿಗೆ ಮನವಿ ಮಾಡಿದ್ದಾರೆ.

ಕಸರತ್ತು ನಡೆಸುತ್ತಿರುವ ವೀಡಿಯೋವನ್ನು ಜಾಲತಾಣದಲ್ಲಿ ಫೋಸ್ ಮಾಡಲು ಕುಮಾರಸ್ವಾಮಿ ನಿರಾಕರಿಸಿದ್ದಾರೆ.

Leave a Comment