ಫಿಕ್ಸ್ ಪೇಮೆಂಟ್ ಪಾವತಿಗೆ ಒತ್ತಾಯಿಸಿ ಪ್ರತಿಭಟನೆ

ರಾಯಚೂರು.ಸೆ.04- ಆಶಾ ಕಾರ್ಯಕರ್ತರಿಗೆ ಬಾಕಿಯಿರುವ ರಾಜ್ಯದ ಫಿಕ್ಸ್ ಪೇಮೆಂಟ್ ಶೀಘ್ರ ಪಾವತಿಸಬೇಕು ಸೇರಿ ಇನ್ನಿತರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಪ್ರತಿಭಟನೆ ನಡೆಸಿತು.
ಸ್ಥಳೀಯ ಸಾರ್ವಜನಿಕ ಉದ್ಯಾನವನದಿಂದ ಜಿ.ಪಂ. ಕಛೇರಿವರೆಗೆ ಬೃಹತ್ ಱ್ಯಾಲಿ ಮೂಲಕ ಆಗಮಿಸಿ ನಂತರ ಜಿ.ಪಂ. ಸಿಇಓಗೆ ಮನವಿ ಸಲ್ಲಿಸಿ, ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶಗಳಲ್ಲಿ ಸಮಾಜದ ಆರೋಗ್ಯಕರ ಬದಲಾವಣೆಯಲ್ಲಿ ಆಶಾ ಕಾರ್ಯಕರ್ತೆಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಆದರೆ, ಕೆಲಸಕ್ಕೆ ತಕ್ಕಂತೆ ಸಮಾನ ವೇತನ ಪಾವತಿಸದಿರುವುದು ಖಂಡನೀಯ.
ರಾಜ್ಯ ಸರ್ಕಾರ ನಿಗದಿ ಪಡಿಸಿದ ಫಿಕ್ಸ್ ಪೇಮೆಂಟ್ ಶೀಘ್ರ ಪಾವತಿಸಬೇಕು. ಆಶಾ ಕಾರ್ಯಕರ್ತೆಯರಿಗೆ ಕೆಲಸ ಸಂದರ್ಭದಲ್ಲಿ ಕಿರುಕುಳ ನೀಡುವುದನ್ನು ತಡೆಯಬೇಕು. ಪ್ರತಿ ತಿಂಗಳು ಆಶಾ ಕಾರ್ಯಕರ್ತೆಯರ ಸಮಸ್ಯೆ ಆಲಿಸಲು ಕುಂದು ಕೊರತೆ ಸಭೆ ನಡೆಸಬೇಕು. ಶೌಚಾಲಯ ನಿರ್ಮಾಣಕ್ಕೆ ಪ್ರೇರೆಪಿಸಿದ ಕಾರ್ಯಕರ್ತೆಯರಿಗೆ ಇದುವರೆಗೂ ಪ್ರೋತ್ಸಾಹ ಧನ ಪಾವತಿಸದಿರುವುದಿಲ್ಲ. ಕೂಡಲೇ ಪ್ರೋತ್ಸಾಹ ಧನ ನೀಡಬೇಕು. ತಾಯಿ ಕಾರ್ಡ್ ವಿತರಣೆಯ ವಿಳಂಬ ಸರಿಪಡಿಸಬೇಕು. ಸೇರಿ ಇನ್ನಿತರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ವೀರೇಶ ಎನ್.ಎಸ್, ಈರಮ್ಮ, ಚನ್ನಬಸವ ಜಾನೇಕಲ್, ಮಹೇಶ, ಚೇತನಾ ಬನಾರೆ, ಭೀಮಮ್ಮ, ಲಕ್ಷ್ಮೀ, ಗೀತಾಲಕ್ಷ್ಮೀ, ಗೌರಮ್ಮ, ಮಂಜುಳಾ ಸೇರಿದಂತೆ ಉಪಸ್ಥಿತರಿದ್ದರು.

Leave a Comment