ಫಾಲ್ಕನ್ ರಾಕೆಟ್‌ನಲ್ಲಿ

ಇದೇ ತಿಂಗಳು ೬ ರಂದು ಫಾಲ್ಟನ್ ಹೆವಿ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಹಾರಿ ಹೋದ ಎಲೋನ್‌ಮಸ್ಕಿ ಅವರ ಕೆಂಪು ಬಣ್ಣದ ಸ್ಪೋರ್ಟ್ಸ್ ಕಾರು ಈಗ ಬಾಹ್ಯಾಕಾಶದಲ್ಲಿ ಎಲ್ಲಿದೆ? ಮುಂದೆ ಅವರ ಭವಿಷ್ಯವೇನು ಎಂಬ ಲೆಕ್ಕಾಚಾರದಲ್ಲಿ ಬಾಹ್ಯಾಕಾಶ ಸಂಸ್ಥೆ ಮತ್ತು ವಿಜ್ಞಾನಿಗಳು ತೊಡಗಿದ್ದಾರೆ.

ಇದೇ ತಿಂಗಳು ೬ ರಂದು ಅತಿ ಶಕ್ತಿಶಾಲಿ ಫಾಲ್ಕನ್ ರಾಕೆಟ್ ಬೆನ್ನೇರಿ ಶಾಶ್ವತವಾಗಿ ಬಾಹ್ಯಾಕಾಶಕ್ಕೆ ಹಾರಿದ ಎಲೋನ್ ಮಾಸ್ಕಿ ಅವರ ಕಾರು ಮತ್ತು ಅದರ ಸ್ಟೀರಿಂಗ್ ಹಿಡಿದು ಕುಳಿಸಿರುವ ಚಾಲಕ ಒಂದು ವೇಳೆ ಜೀವಂತ ಚಾಲಕನಾಗಿದ್ದಿದ್ದರೆ, ಎಲ್ಲಿಗೆ ಪಯಣ….ಏಕಾಂಗಿ ಸಂಚಾರಿ…’ ಎಂಬ ಡಾ. ರಾಜ್‌ಕುಮಾರ್ ರ ಹಾಡನ್ನು ಗುನುಗುತ್ತಿದ್ದನೇನೊ.

ಮತ್ತೆಂದಿಗೂ ಭೂಮಿಗೆ ವಾಪಸ್ಸು ಬಾರದ ಈ ಕಾರು  ಲಕ್ಷ ಲಕ್ಷ ವರ್ಷಗಳವರೆವಿಗೂ ಬಾಹ್ಯಾಕಾಶದಲ್ಲೆ ಸುತ್ತುತ್ತಾ ಕೊನೆಗೆ ಭೂಮಿಗೋ, ಗುರುಗ್ರಹಕ್ಕೋ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಟೊರಾಂಟೊ ವಿಶ್ವವಿದ್ಯಾನಿಲಯದ ವಿಜ್ಞಾನಿ ಹನ್ನೊರೆಯಿನ್ ಅಭಿಪ್ರಾಯ ಪಟ್ಟಿದ್ದಾರೆ.

ಭೂಮಿಯಿಂದ ಶಾಶ್ವತವಾಗಿ ಹಾರಿ ಹೋದ ಈ ಕಾರು ಈಗ ಸೌರಮಂಡಲದ ಆಕಾಶಕಾಯವಾಗಿದ್ದು, ಈಗ ಇದು ಭೂಮಿಯಿಂದ ೪.೫ ದಶಲಕ್ಷ ಕಿ.ಮೀ ದೂರದಲ್ಲಿ ಸೂರ್ಯನ ಸುತ್ತ ಸುತ್ತುತ್ತಿವೆ ಎಂದು ನಾಸಾದ ಜೆಟ್ ಪ್ರೊಪುಲ್‌ಷನ್ ಪ್ರಯೋಗಾಲಯದ ವಿಜ್ಞಾನಿಗಳು ಹೇಳಿದ್ದಾರೆ.

ಈ ಕಾರು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಶೇ. ೬ರಷ್ಟಿದ್ದು, ಅದು ಬಹುಶಃ ೨೦೯೧ರಲ್ಲಿ ಅಪ್ಪಳಿಸಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ದಶಲಕ್ಷ ವರ್ಷಗಳಲ್ಲಿ ಅದು ಭೂಮಿಗೋ, ಗುರುಗ್ರಹಕ್ಕೋ ಇಲ್ಲವೆ ಸೂರ್ಯನಿಗೋ ಅಪ್ಪಳಿಸುತ್ತದೆ ಎಂದಾಯಿತು. ಶತ ಶತ ಕೋಟಿ ಡಾಲಱ್ಸ್ ಖರ್ಚು ಮಾಡಿ ಅತೀ ಭಾರದ ರಾಕೆಟ್ ಮೂಲಕ ಈ ಕಾರನ್ನು ಕಳುಹಿಸುವ ಅವಶ್ಯಕತೆ ಏನಿತ್ತು. ಇದು ಹುಚ್ಚಾಟ ಎಂದು ಅನಿಸಬಹುದಾದರೂ, ಇದನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ಅಮೆರಿಕಾದ ಸ್ಪೇಸ್ ಎಕ್ಸ್ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಎಲೋನ್ ಮಸ್ಕಿ ಅವರ ಗುರಿ ಮುಂದೊಂದು ದಿನ ಮಂಗಳನಲ್ಲಿಗೆ ಮಾನವನನ್ನು ಕಳುಹಿಸುವುದು, ತಮ್ಮ ಆ ಕನಸಿನ ಭಾಗವಾಗಿಯೇ ಫೆ. ೬ ರಂದು ಫಾಲ್ಟನ್ ರಾಕೆಟ್ ಉಡಾವಣೆ ಮಾಡಲಾಗಿದೆ.

‘ಫಾಲ್ಟನ್ ಹೆವಿ ರಾಕೆಟ್ ಯಶಸ್ವಿ ಉಡಾವಣೆ, ನನ್ನ ಮುಂದಿನ ಯಾನಕ್ಕೆ ಭಾರಿ ಭರವಸೆ ತುಂಬಿದೆ. ೨೦೨೦ರಲ್ಲಿ ಹೊಸ ತಲೆಮಾರಿನ ಇನ್ನಷ್ಟು ಪ್ರಬಲ ಸಾಮರ್ಥ್ಯದ ರಾಕೆಟ್ ಹಾರಿಸಲಾಗುವುದು’ ಎಂದು ಎಲೋನ್ ಮಾಸ್ಕ್ ಹೇಳಿದ್ದಾರೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ವಿಜ್ಞಾನಿಗಳನ್ನು ವೈಜ್ಞಾನಿಕ ಸಲಕರಣೆಗಳನ್ನು ಸಾಗಿಸಿ ಸರಬರಾಜು ಮಾಡುವಲ್ಲಿ ಯಶಸ್ವಿಯಾಗಿದ್ದು, ಅಮೆರಿಕಾದ ಈ ಖಾಸಗಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸ್ಪೇಸ್ ಎಕ್ಸ್ ನಾಸಾ ಸೇರಿದಂತೆ ಹಲವು ರಾಷ್ಟ್ರಗಳ ಅಂತರ್ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಗಳಿಗೆ ಸಾಮಾನು ಸರಂಜಾಮು ಸಾಗಿಸಿದೆ.

27 ಇಂಜಿನ್‌ಗಳನ್ನು ಒಳಗೊಂಡ ಜಗತ್ತಿನ ಅತಿ ಶಕ್ತಿಶಾಲಿ ರಾಕೆಟ್ ಎನಿಸಿದ ಫಾಲ್ಟನ್ ಹೆವಿ ರಾಕೆಟಿನ ಎಲ್ಲ ಮೂರು ಬೂಸ್ಟರ್‌ಗಳು ಭೂಮಿಗೆ ವಾಪಸ್ಸು ಬರುವಂತೆ ನಿರ್ಮಿಸಲಾಗಿದೆ. ಬದಿಯಲ್ಲಿರುವ ೨ ಬೂಸ್ಟರ್‌ಗಳು ಕೇಪ್‌ರ್ನಿವಾಲ್‌ನ ಕಾಂಕ್ರಿಟ್ ಪ್ಯಾಡ್ ಮೇಲೆ ಇಳಿದರೆ, ಮಧ್ಯದ ಭಾಗ ಸಮುದ್ರದಲ್ಲಿರುವ ಬೃಹತ್ ಹಡಗಿನ ಮೇಲೆ ಇಳಿಸಲಾಗುತ್ತದೆ. ಇವನ್ನು ಮರು ಬಳಕೆ ಮಾಡಬಹುದಾಗಿದೆ.

– ಉತ್ತನೂರು ವೆಂಕಟೇಶ್

Leave a Comment