ಫಲಾನುಭವಿಗಳಿಗೆ ಯೋಜನಾ ಕಾರ್ಡ್ ವಿತರಣೆ

ಧಾರವಾಡ,ಜು17-ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಸಹಬಾಗೀತ್ವದ ಮಹತ್ವಾಕಾಂಕ್ಷಿ ಜನಪರ ಯೋಜನೆಯಾದ ಆರೋಗ್ಯ ಇಲಾಖೆಯ ಆಯುಷ್ಮಾನ್ ಭಾರತ – ಕರ್ನಾಟಕ ಆರೋಗ್ಯ ಯೋಜನೆ ಕಾರ್ಡ್‍ಗಳನ್ನು ಫಲಾನುಭವಿಗಳಿಗೆ ವಿತರಿಸಲು ಜಿಲ್ಲೆಯ ಸುಮಾರು 67 ಕೇಂದ್ರಗಳಲ್ಲಿ ನೀಡಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.
ಧಾರವಾಡ ಜಿಲ್ಲಾಸ್ಪತ್ರೆ, ತಾಲೂಕಾ ಸಾರ್ವಜನಿಕ ಆಸ್ಪತ್ರೆ ಕಲಘಟಗಿ, ಕುಂದಗೋಳ ಮತ್ತು ನವಲಗುಂದ (ಶುಲ್ಕ-ರೂ.10/-) ಮತ್ತು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ
ಧಾರವಾಡ ಒನ್ ಎಲ್ಲ 12 ಕೇಂದ್ರಗಳಲ್ಲಿ (ಶುಲ್ಕ-ರೂ.35/-) ಮತ್ತು ಸರ್ಕಾರ ಅನುಮತಿ ನೀಡಿರುವ (ಕಾಮನ್ ಸರ್ವಿಸ್ ಸೆಂಟರ್) 47 ಸೇವಾ ಸಿಂಧು ಕೇಂದ್ರ (ಶುಲ್ಕ-ರೂ.35/-) ಮತ್ತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ (ಶುಲ್ಕ-ರೂ.35/-) ಆಯುಷ್ಮಾನ್ ಭಾರತ – ಕರ್ನಾಟಕ ಆರೋಗ್ಯ ಯೋಜನೆ ಕಾರ್ಡ್‍ಗಳನ್ನು ವಿತರಿಸಲಾಗುತ್ತದೆ. ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ನೀಡಿ ಫಲಾನುಭವಿಗಳು ಈ ಆರೋಗ್ಯ ಕಾರ್ಡ್ ಪಡೆಯಬಹುದಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ತಾಲೂಕಾ ಆಸ್ಪತ್ರೆಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment