ಪ್ಲೇಬಾಯ್ ಪೇಜ್‌ನಲ್ಲಿ ತೃತೀಯಲಿಂಗಿ

ಜರ್ಮನಿ, ಜ ೧೧- ವಿಶ್ವದ ಶ್ರೇಷ್ಠ ಪ್ಲೇಬಾಯ್ ನಿಯತಕಾಲಿಕೆಯ ಪತ್ರಿಕೆಯಲ್ಲಿ ದೊಡ್ಡ ದೊಡ್ಡ ಸ್ಟಾರ್‍ಸ್ ಹಾಗೂ ಗಣ್ಯ ವ್ಯಕ್ತಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ, ಆದರೆ ಇದೇ ಮೊದಲ ಬಾರಿಗೆ ತೃತೀಯಲಿಂಗಿ ಮಹಿಳೆಯೊಬ್ಬಳು ಪ್ಲೇಬಾಯ್ ನಿಯತಕಾಲಿಕೆಯ ಜರ್ಮನಿ ಆವೃತ್ತಿಯ ಮುಖಪುಟದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾಳೆ.

೨೧ರ ಹರೆಯದ ಗಿಯುಲಿಯಾನಾ ಫಾರ್ಫಾಲಾ ಜರ್ಮನಿಯ ಖ್ಯಾತ ರೂಪದರ್ಶಿ. ಜರ್ಮಿನಿಯ ತೃತೀಯ ಲಿಂಗಿ ಎನಿಸಿಕೊಕೊಂಡಿದ್ದು, ಈಕೆ ಇದೇ ಮೊದಲ ಬಾರಿಗೆ ಪ್ಲೇ ಬಾಯ್ ಮ್ಯಾಗಝೀನ್ ಕವರ್ ಪೇಜ್ ನಲ್ಲಿ ಕಾಣಿಸಿಕೊಳ್ತಿದ್ದಾಳೆ. ನಿನ್ನೆಯಷ್ಟೆ ಆ ಫೋಟೋವನ್ನು ಇನ್ ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾಳೆ.

ಗಿಯುಲಿಯಾನಾಳ ಟಾಪ್ ಲೆಸ್ ಫೋಟೋಗೆ ಸಖತ್ ಪ್ರತಿಕ್ರಿಯೆ ಸಿಕ್ಕಿದೆ. ೧೦,೦೦೦ಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ತೃತೀಯಲಿಂಗಿ ಮಹಿಳೆಯೊಬ್ಬಳು ಪ್ಲೇಬಾಯ್ ನಿಯತಕಾಲಿಕೆಯ ಜರ್ಮನಿ ಆವೃತ್ತಿಯ ಮುಖಪುಟದಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು ಎಂಬ ಪಟ್ಟ ಈಕೆ ಪಾಲಾಗಿದೆ.

೧೬ನೇ ವರ್ಷದಲ್ಲಿ ಗಿಯುಲಿಯಾನಾ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಳು. ಈ ಹಿಂದೆ ಕೂಡ ಹಲವು ಬಾರಿ ಪ್ಲೇಬಾಯ್ ನಿಯತಕಾಲಿಕೆ ತೃತೀಯ ಲಿಂಗಿಗಳಿಗೆ ಅವಕಾಶ ನೀಡಿದೆ. ಮಾಡೆಲ್‌ಗಳನ್ನು ಕವರ್ ಪೇಜ್ ಗೆ ಆಯ್ಕೆ ಮಾಡಿಕೊಂಡಿದಲ್ಲದೇ, ಈ ಮೂಲಕ ಲಿಂಗ ಅಸಮಾನತೆ ತೊಡೆದು ಹಾಕಲು ಪ್ರಯತ್ನಿಸುತ್ತಿರುವುದಾಗಿ ಹೇಳಿಕೊಂಡಿದೆ.

Leave a Comment