ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಬಿಗ್‌ಎಫ್‌ಎಂ ಆರ್‌ಜೆಗಳ ಸಂಕಲ್ಪ

20 ಶಾಲೆಗಳಲ್ಲಿ ಅಭಿಯಾನ

ಇತ್ತೀಚೆಗಂತೂ ಪರಿಸರ ಕಾಪಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.ಒಂದೆಡೆ ಜಾಗತಿಕ ತಾಪಮಾನ ಏರಿಕೆಯು ಪ್ರಮುಖ ಕಾರಣವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹದಗೆಟ್ಟು ಜನರು ನರಕಯಾತನೆ ಅನುಭವಿಸುವಂತಾಗಿದೆ. ಪರಿಸರದ ಮೇಲೆ ಪ್ಲಾಸ್ಟಿಕ್ ಕೂಡ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಶಾಲಾ ಮಕ್ಕಳಿಗೆ ಹೆಚ್ಚು ಹೆಚ್ಚು ಅರಿವು ಮೂಡಿಸಲು ದೇಶದ ಅತಿದೊಡ್ಡ ರೇಡಿಯೊ ನೆಟ್ವರ್ಕ್ ೯೨.೭ ಬಿಗ್ ಎಫ್‌ಎಂ ಕೈ ಜೋಡಿಸಿದೆ.
ಈ ನಿಟ್ಟಿನಲ್ಲಿ ಕಾರ್ಯನ್ಮೋಖರಾಗಿರುವ ಬಿಗ್ ಎಫ್ ಎಂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎಫ್ ಎಂಸಿಜಿ ಪ್ರಮುಖ ಆಹಾರ ವಿಭಾಗದೊಂದಿಗೆ ಪ್ಲಾಸ್ಟಿಕ್ ಬೇಕು ಅಭಿಯಾನ ಸಮಾಜದಲ್ಲಿ ಬದಲಾವಣೆ ತರಲು ದಿಟ್ಟ ಹಜ್ಜೆಯನ್ನಿಟ್ಟಿದೆ. ಅರ್ ಜೆ ಗಳು ಕಲೆಕ್ಷನ್ ಡ್ರೈವ್ ನ ಭಾಗವಾಗಿ ೨೦ ಶಾಲೆಗಳಿಗೆ ಭೇಟಿ ನೀಡಿ ಸಿಲಿಕಾನ್ ಸಿಟಿಯಲ್ಲಿ ಪ್ಲಾಸ್ಟಿಕ್ ಸಮಸ್ಯೆ ಕುರಿತು ಅರಿವು ಮೂಡಿಸುವ ವಿನೂತನ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದಾರೆ.
” ಬದಲಾವಣೆ ನಿಮ್ಮಿಂದ ಪ್ರಾರಂಭ” ಎಂಬ ಘೋಷ ವಾಕ್ಕದೊಂದಿಗೆ ತ್ಯಾಜ್ಯ ಬೇರ್ಪಡಿಸಿ ಅರಿವು ಮೂಡಿಸುವ ಗುರಿ ಹೊಂದಿದೆ ಬಿಗ್ ಎಫ್ ಎಂ. ಇದರ ಹಿಂದೆ ಹೆಸರಾಂತ ಆರ್ ಜೆ ಪ್ರದೀಪ ಮತ್ತು ನಂಬರ್ ಒನ್ ಮಾರ್ನಿಂಗ್ ಶೋನ ರೂವಾರಿ ಪಟ್ ಪಟ್ ಪಟಾಕಿ ಶ್ರುತಿ ಮತ್ತು ಬೆಂಗಳೂರಿನ ಎಲ್ಲ ಅರ್ ಜೆಗಳು ಶಾಲಾ ವಿದ್ಯಾರ್ಥಿಗಳೊಂದಿಗೆ ಪ್ರತಿವಾರ ಶಾಲೆಗಳಿಗೆ ತೆರಳಿ ಸಂವಾದ ನಡೆಸಲಿದ್ದಾರೆ.
ಒಣ ಮತ್ತು ಹಸಿ ತ್ಯಾಜ್ಯವನ್ನು ಬೇರ್ಪಡಿಸುವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆ ಬಗ್ಗೆ ನೆರವು ಒದಗಿಸಲಿದ್ದಾರೆ. ಈ ವಿಧಾನವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಒಂದು ವಾರದಲ್ಲಿ ಪ್ರತಿ ಶಾಲೆಯಲ್ಲೂ ಕಸ ಸಂಗ್ರಹದ ತೊಟ್ಟಿಗಳನ್ನು ಇಟ್ಟು ಅರಿವು ಮೂಡಿಸುವ ಮೂಲಕ ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಲು ಪಣತೊಟ್ಟಿದೆ.

big-fms-rj-pradeepa-at-florence-public-schoolrt-nagar-1
ಬರೋಬ್ಬರಿ ಮೂರು ವಾರಗಳ ಅವಧಿಯಲ್ಲಿ ನ್ಯೂ ಬಿಷಪ್ ಕಾಟನ್ ಪ್ರೌಢಶಾಲೆ, ಸೇಂಟ್ ಪ್ಯಾಟ್ರಿಕ್, ಚೈತನ್ಯ ಟೆಕ್ನೋ, ನ್ಯೂ ಹಾರಿಸನ್, ಕೇಂದ್ರೀಯ ವಿದ್ಯಾಲಯ ಎಂಇಜಿ ಮತ್ತು ಕೇಂದ್ರ , ದಿ ಸಲೋನಿ, ವಿಸ್ಡಮ್ ಇಂಟರ್ ನ್ಯಾಷನಲ್ ಹಾಗೂ ಎಸ್.ಎಸ್. ಪಬ್ಲಿಕ್ ಶಾಲೆಗಳಲ್ಲಿ ಈ ಅಭಿಯಾನ ನಡೆಸಲಿದ್ದಾರೆ ಅರ್ .ಜೆ ಗಳು. ಈ ಮೂಲಕ ಅರ್ ಜೆ ಗಳು ಕೇವಲ ಬಿಗ್ ಎಫ್ಂನಲ್ಲಿ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಸೀಮಿತವಾಗದೆ ಪರಿಸರ ಕಾಪಾಡುವ ಕಾಳಜಿ ಹೊಂದಿರುವುದು ಸ್ವಾಗತಾರ್ಹ.
ಈ ಅಭಿಯಾನದ ಮೂಲಕ ಶಾಲೆಗಳನ್ನು ಕೇಂದ್ರೀಕರಿಸಿ ವಿದ್ಯಾರ್ಥಿಗಳಿಗೆ ಉತ್ತಮ ಸಮುದಾಯ ರೂಪಿಸಲು ನೆರವು ನೀಡುವುದರ ಜತೆಗೆ ಅತ್ಯಂತ ಪರಿಣಾಮಕಾರಿಯಾಗಿ ಸಾಮಾಜಿಕ,ಆರ್ಥಿಕವಾಗಿ ಸಮರ್ಥ ತ್ಯಾಜ್ಯ ನಿರ್ವಹಣೆಗೆ ಸಹಾಯವಾಯವಾಗಲಿದೆ. ಈ ಡ್ರೈವ್ ಮುಖೇನ ಪ್ಲಾಸ್ಟಿಕ್ ತ್ಯಾಜ್ಯವನ್ನು ಟರ್ಮಿನಲ್ ಎರಡರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಆಂತರಿಕ ರಸ್ತೆಗಳನ್ನು ದುರಸ್ತಿಗೊಳಿಸಲು ಬಳಕೆ ಮಾಡಲಾಗುತ್ತದೆ.
ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸಲು ಇಷ್ಟೊಂದು ದೊಡ್ದ ಪ್ರಮಾಣದಲ್ಲಿ ನಡೆಸುತ್ತಿರುವುದು ಹೆಮ್ಮೆಯ ವಿಷಯ. ಯುವಕರಿಗೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮತ್ತು ಅದನ್ನು ಮರು ಬಳಕೆ ಮಾಡುವ ಅಗತ್ಯದ ಬಗ್ಗೆ ತಿಳಿಸಿಕೊಟ್ಟರೆ ಬದಲಾವಣೆಯ ಹರಿಕಾರರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು ಆರ್.ಜೆ .ಪ್ರದೀಪ.
ಉದ್ಯಾನ ನಗರವೆಂದು ಕರೆಯುವ ಬೆಂಗಳೂರಿನಲ್ಲಿ ಎಲ್ಲೆಡೆ ಪ್ಲಾಸ್ಟಿಕ್ ಕಸ ಬಿಸಾಡಿರುವ ಸ್ಥಿತಿ ಗಮನಿಸಿದಾಗ ಬಹಳ ದುಃಖವಾಗುತ್ತದೆ ಈ ನಗರವನ್ನು ಮಾಲಿನ್ಯ ಮುಕ್ತ ಮಾಡುವ ಜವಾಬ್ದಾರಿಯನ್ನು ನಾವು ಪೂರೈಸುತ್ತೇವೆ ಎನ್ನುತ್ತಾರೆ.ಆರ್.ಜೆ.ಶ್ರುತಿ.
ತ್ಯಾಜ್ಯ ವನ್ನು ಹಸಿ ಮತ್ತು ಒಣ ತ್ಯಾಜ್ಯ ಗಳಾಗಿ ವಿಂಗಡಿಸಲು ಸಾರ್ವಜನಿಕರಿಗೆ ಸಹಾಯ ಮಾಡಲು ಮತ್ತು ಪರಿಸರ ಸ್ನೇಹಿ ಜೀವನದ ಅಗತ್ಯತೆಯ ಕುರಿತು ವಿದ್ಯಾರ್ಥಿ ಗಳಿಗೆ ತಿಳಿಸಿಕೊಡುವುದೆ ಈ ಕಾರ್ಯ ಕ್ರಮದ ಪ್ರಮುಖ ಉದ್ದೇಶವಂತೆ. ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಡ್ರೈವ್ ಮೂಲಕ ತ್ಯಾಜ್ಯ ವಿಲೇವಾರಿ ಕುರಿತು ಅರಿವು ಮೂಡಿಸಲು ಹಾಗೂ ಅದನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಲು ಬಿಗ್‌ಎಫ್ ಎಂ ಹಲವು ಕಾರ್ಯಕ್ರಮ ಗಳನ್ನು ಆಯೋಜಿಸಲಿದೆ. ಒಟ್ಟಾರೆ ಬೆಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಬಿಗ್ ಎಫ್ ಎಂ ಸಂಕಲ್ಪ ಮಾಡಿದೆ.ನಾವು ಕೂಡ ಈ ಅಭಿಯಾನಕ್ಕೆ ಕೈಜೋಡಿಸುವುದು ಒಳಿತಲ್ಲವೆ.

Leave a Comment