ಪ್ಲಾಸ್ಟಿಕ್ ಕಪ್ ಬಳಕೆಯಿಂದ ಅಪಾಯ ಕಟ್ಟಿಟ್ಟಬುತ್ತಿ

 

ಅಂಗಡಿಗಳಲ್ಲಿ ಅಥವಾ ಟೀ ಸ್ಟಾಲ್‌ಗಳಲ್ಲಿ ಬಳಸುವ ಪ್ಲಾಸ್ಟಿಕ್ ಗ್ಲಾಸ್ ಅನ್ನು ಪಾಲಿಯೆಸ್ಟರ್‌ನಿಂದ ತಯಾರಿಸಲಾಗುತ್ತದೆ. ಈ ಕಪ್‌ನಲ್ಲಿ ಬಿಸಿ ಟೀ ಹಾಕಿದಾಗ ಅದರಲ್ಲಿ ಅಂಟಿರುವ ಹಾನಿಕಾರಕ ಅಂಶಗಳು ಚಹಾದೊಡನೆ ಸೇರಿತ್ತವೆ.
ಮುಂಜಾನೆ ಎದ್ದ ತಕ್ಷಣ ಅನೇಕರಿಗೆ ಟೀ ಬೇಕೆಬೇಕು. ಇನ್ನು ಕೆಲವರಿಗೆ ಆಫೀಸಿನ ಒತ್ತಡದ ಸಂದರ್ಭದಲ್ಲಿ ರಿಲಾಕ್ಸ್ ಆಗಲು ಟೀ ಕುಡಿಯದಿದ್ದರೆ ಸಮಧಾನವೇ ಆಗುವುದಿಲ್ಲ. ಆದರೆ ಮನೆಯಲ್ಲಿದ್ದಾಗ ಮಾತ್ರ ಟೀ ಕುಡಿಯಲು ಸ್ಟೀಲ್ ಗ್ಲಾಸ್ ಬಳಸುವ ನಾವು ಹೊರಗಡೆ ಹೋದಾಗ ಪ್ಲಾಸ್ಟಿಕ್ ಕಪ್‌ನಲ್ಲಿ ಕುಡಿಯುತ್ತೇವೆ. ಆದರೆ ಪ್ಲಾಸ್ಟಿಕ್ ಕಪ್‌ನಲ್ಲಿ ಕುಡಿಯುವ ಟೀ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?

ಅಧ್ಯಾಯನವೊಂದರ ಪ್ರಕಾರ ಪ್ಲಾಸ್ಟಿಕ್ ಕಪ್‌ನಲ್ಲಿ ಚಹಾ ಸೇವಿಸುದರಿಂದ ಬಾಯಿ ಕಾನ್ಸರ್ ಕೂಡ ಕಾರಣವಾಗಬಹುದೆಂದು ತಿಳಿಸಿದೆ.
ಪ್ಲಾಸ್ಟಿಕ್ ಕಪ್ ತಯಾರಿಸುವ ವೇಳೆ ಸೋರದಂತೆ ತಡೆಯಲು ಕೃತಕ ಮೇಣದ ಬತ್ತಿಯನ್ನು ಲೇಪನ ಮಾಡಿರುತ್ತಾರೆ. ಬಿಸಿ ಚಹಾ ೪೫ ಡಿಗ್ರಿಗಿಂತ ಹೆಚ್ಚಾದಾಗ ಮೇಣ ಕರಗಿ ಚಹಾದೊಂದಿಗೆ ಸೇರುತ್ತದೆ. ಇದನ್ನು ಸವಿಯುದರಿಂದ ಕರುಳಿನ ಸೋಂಕು ಅಥವಾ ಜೀರ್ಣಾಂಗ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.

ಇನ್ನು ಥರ್ಮೊಕೋಲ್ ಕಪ್ನಲ್ಲಿ ಚಹಾ ಕುಡಿದರೆ ಚರ್ಮದ ಸೋಂಕು ಕಾಡುತ್ತದೆ. ಇದರಿಂದ ನಿಮ್ಮ ಚರ್ಮದ ಮೇಲೆ ಕೆಂಪು ಕಲೆಗಳು, ತುರಿಕೆ ಕಾಣಿಸಿಕೊಳ್ಳುಬಹುದು. ದಿನನಿತ್ಯ ಥರ್ಮೊಕೋಲ್ ಕಪ್ ಬಳಸುದರಿಂದ ಹೊಟ್ಟೆಯ ಸಮಸ್ಯೆ ಉಂಟಾಗಬಹುದು. ಹಾಗಾಗಿ ಇನ್ನಾದರು ಎಚ್ಚೆತ್ತುಕೊಂಡು ಪ್ಲಾಸ್ಟಿಕ್ ಕಪ್‌ಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.

 

 

Leave a Comment