ಪ್ರೊ ಕಬಡ್ಡಿ: ಪುಣೇರಿ ಪಲ್ಟಾನ್‌ ತಂಡಕ್ಕೆ ಸುರ್ಜೀತ್‌ ಸಿಂಗ್‌ ನಾಯಕ

ಪುಣೆ, ಜು 17 – ಪ್ರೊ ಕಬಡ್ಡಿ-ಲೀಗ್‌ನ ಫ್ರಾಂಚೈಸಿ ಪುಣೇರಿ ಪಲ್ಟಾನ್‌ ತಂಡವನ್ನು ಮುಂಬರುವ ಏಳನೇ ಆವೃತ್ತಿಯಲ್ಲಿ ಸುರ್ಜೀತ್‌ ಸಿಂಗ್‌ ಮುನ್ನಡೆಸಲಿದ್ದಾರೆ.
ಈ ಕುರಿತು ಪುಣೇರಿ ಪಲ್ಟಾನ್‌ ಬುಧವಾರ ಪ್ರಕಟಿಸಿದ್ದು, ಸುರ್ಜೀತ್‌ ಸಿಂಗ್ ಅವರು ಪುಣೇರಿ ಪಲ್ಟಾನ್‌ ತಂಡದಲ್ಲಿ ಮೂರನೇ ಆವೃತ್ತಿಯಲ್ಲಿ ಡಿಫೆಂಡರ್‌ ಆಗಿದ್ದರು. ಸುರ್ಜೀತ್‌ ಸಿಂಗ್ ಅವರು ತಂಡವನ್ನು ವೈಭವೀಕರಿಸಲು ನೆರವಾಗಲಿದ್ದಾರೆ ಎಂದು ಮುಖ್ಯ ಕೊಚ್‌ ಅನೂಪ್‌ ಕುಮಾರ್‌ ಹೇಳಿದ್ದಾರೆ.
” ಸುರ್ಜೀತ್‌ ಸಿಂಗ್‌ ತಂಡದಲ್ಲಿ ಮೌಲ್ಯಯುತ ಆಟಗಾರನಾಗಿದ್ದು, ಪುಣೇರಿ ಪಲ್ಟಾನ್‌ ತಂಡವನ್ನು ಗೆಲುವಿನ ದಡ ಸೇರಿಸಬಲ್ಲರು. ತಂಡವನ್ನು ಮುನ್ನಡೆಸುವಷ್ಟು ಅನುಭವ ಅವರಿಗಿದೆ. ಇವರ ನಾಯಕತ್ವ ಪ್ರಸ್ತುತ ಆವೃತ್ತಿಯಲ್ಲಿ ತಂಡಕ್ಕೆ ನೆರವಾಗಲಿದೆ ಎಂದು ನಂಬಿದ್ದೇನೆ” ಎಂದು ಅನೂಪ್ ಕುಮಾರ್‌ ಹೇಳಿದ್ದಾರೆ.
ಸುರ್ಜೀತ್‌ ಸಿಂಗ್ ಅವರ ನಾಯಕತ್ವ ಹಾಗೂ ತಂಡವನ್ನು ಗಮನಿಸಿದಾಗ ಈ ಋತುವಿನಲ್ಲಿ ನಾವು ಗಮನಾರ್ಹ ಪ್ರದರ್ಶನವನ್ನು ನೀಡುತ್ತೇವೆ ಎಂಬಂತೆ ನನಗೆ ವಿಶ್ವಾಸವಿದೆ” ಎಂದು ಅನೂಪ್‌ ಕುಮಾರ್‌ ಹೇಳಿದ್ದಾರೆ.
ಮೂರನೇ ಆವೃತ್ತಿಯಲ್ಲಿ ಪುಣೇರಿ ಪಲ್ಟಾನ್‌ ಆಡಿದ ಬಳಿಕ ಎರಡನೇ ಬಾರಿ ಇದೇ ತಂಡಕ್ಕೆ ಆಡುತ್ತಿದ್ದೇನೆ. ಇದಕ್ಕಿಂತ ವಿಶೇಷವಾಗಿ ತಂಡವನ್ನು ಮುನ್ನಡೆಸುತ್ತಿರುವುದು ಇದಕ್ಕಿಂತ ಉತ್ತಮವಾದದ್ದು ಬೇರೊಂದಿಲ್ಲ ಎಂದು ಸುರ್ಜೀತ್‌ ಸಿಂಗ್‌ ಸಂತಸ ವ್ಯಕ್ತಪಡಿಸಿದರು.
ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಜುಲೈ 20 ರಂದು ಹೈದರಾಬಾದ್‌ನಲ್ಲಿ ಆರಂಭವಾಗಲಿದೆ. ಪುಣೇರಿ ಪಲ್ಟಾನ್‌ ತಂಡ 22 ರಂದು ಹರಿಯಾಣ ಸ್ಟೀಲರ್ಸ್‌ ವಿರುದ್ಧ ಮೊದಲ ಪಂದ್ಯವಾಡಲಿದೆ.

Leave a Comment