ಪ್ರೊ ಕಬಡ್ಡಿ ಟೂರ್ನಿಯ ಪ್ರಶಸ್ತಿ ಮೊತ್ತ ದುಪ್ಪಟ್ಟು 4 ಪಟ್ಟು ಏರಿಕೆ..!

ನವದೆಹಲಿ: ಐಪಿಎಲ್ ಟೂರ್ನಿ ನಂತರ ಭಾರತದಲ್ಲಿ ಅತೀ ಜನಪ್ರೀಯವಾಗಿರುವ ಲೀಗ್ ಅಂದ್ರೆ ಪ್ರೊಕಬಡ್ಡಿ. ನಾಲ್ಕು ಆವೃತ್ತಿಯಲ್ಲಿ ಭಾರೀ ಯಶಸ್ಸು ಗಳಿಸಿರುವ ಪ್ರೊ ಕಬಡ್ಡಿ ಲೀಗ್ ಇದೀಗ ತನ್ನ ಬಹುಮಾನದ ಮೊತ್ತವನ್ನು ದುಪ್ಪಟ್ಟು ಮಾಡಿಕೊಂಡಿದೆ.

ಕಳೆದ ನಾಲ್ಕು ಆವೃತ್ತಿಯಲ್ಲಿ ಪ್ರೊ ಕಬಡ್ಡಿ ಬಹುಮಾನದ ಮೊತ್ತ 2 ಕೋಟಿರೂ. ನಷ್ಟಿತ್ತು. ಇದೀಗ ಬಹುಮಾನದ ಒಟ್ಟು ಮೊತ್ತವನ್ನು 8 ಕೋಟಿರೂ.ಗೆ ಪ್ರೊ ಕಬಡ್ಡಿಲೀಗ್ ಹೆಚ್ಚಿಸಿಕೊಂಡಿದೆ. 5ನೇ ಆವೃತ್ತಿಯ ಲೀಗ್ ಜುಲೈ 28 ರಿಂದ ಪ್ರಾರಂಭಗೊಳ್ಳಲಿದ್ದು, ಹೈದರಾಬಾದ್ನಲ್ಲಿ ಚಾಲನೆ ದೊರೆಯಲಿದೆ. ನಾಲ್ಕೂ ಆವೃತ್ತಿಗಳಲ್ಲಿ 8 ತಂಡಗಳು ಇದ್ದವು. ಇದೀಗ ನಾಲ್ಕು ಹೊಸ ತಂಡಗಳನ್ನು ಲೀಗ್ಗೆ ಸೇರಿಸಿಕೊಳ್ಳಲಾಗಿದ್ದು, ಐದನೇ ಆವೃತ್ತಿಯಲ್ಲಿ ಒಟ್ಟು 12 ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಒಟ್ಟು 138 ಪಂದ್ಯಗಳುನಡೆಯಲಿದ್ದು, ವಿಜೇತತಂಡಪ್ರಶಸ್ತಿಜೊತೆಗೆ 3 ಕೋಟಿರೂ. ಬಹುಮಾನವಾಗಿ ಪಡೆದುಕೊಳ್ಳಲಿದೆ.

ಎರಡನೇ ಸ್ಥಾನ ಪಡೆದುಕೊಳ್ಳುವ ತಂಡರೂ. 1.8 ಕೋಟಿ, ಮೂರನೇ ತಂಡ 1.2 ಕೋಟಿ ರೂ. ಪಡೆದುಕೊಳ್ಳಲಿವೆ. ಇನ್ನುಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರನಿಗೆ ಕೊಡುವ ಶ್ರೇಷ್ಠ ಆಟಗಾರ ಪ್ರಶಸ್ತಿಯ ಮೊತ್ತವನ್ನೂ ಸಹ ಅಧಿಕಗೊಳಿಸಲಾಗಿದೆ.

ಐದನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ಗೆ ಜುಲೈ 28 ರಂದು ಚಾಲನೆ ದೊರೆಯಲಿದೆ. ಹೈದರಾಬಾದ್ನಲ್ಲಿ ಈ ಪಂದ್ಯ ನಡೆಯಲಿದ್ದು, ತೆಲುಗು ಟೈಟಾನ್ಸ್ ಹಾಗೂ ಹೊಸ ತಂಡ ತಮಿಳು ತಲೈವಾಸ್ ಉದ್ಘಾಟನಾ ಪಂದ್ಯ ಆಡಲಿವೆ.

Leave a Comment