ಪ್ರೇರಣಾ ಫೌಂಡೇಷನ್ ವಾರ್ಷಿಕೋತ್ಸವ ನಾಳೆ

ಕಲಬುರಗಿ ಜ 12: ಮಕ್ಕಳಲ್ಲಿ ಕಲಿಕಾಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಸ್ಥಾಪನೆಗೊಂಡ ಕಲಬುರಗಿಯ ಪ್ರೇರಣಾ ಫೌಂಡೇಷನ್ ಪ್ರಥಮ ವಾರ್ಷಿಕೋತ್ಸವ ನಾಳೆ ( ಜನವರಿ 13) ಸಂಜೆ 5 ಗಂಟೆಗೆ ನಗರದ ಡಾ ಎಸ್ ಎಂ ಪಂಡಿತ ರಂಗಮಂದಿರದಲ್ಲಿ ನಡೆಯಲಿದೆ ಎಂದು ಫೌಂಡೇಷನ್ ಸಂಸ್ಥಾಪಕರಾದ ರವಿ ಶೀಲವಂತ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್‍ಐಪಿ ಅಕಾಡೆಮಿ ಹಾಗೂ ಇತರರ ಸಹಯೋಗದಲ್ಲಿ ಅಂತರರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ನಡೆಸಲಾಗಿದ್ದು 80 ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಕೈಬರಹ ಉನ್ನತೀಕರಣ ಮತ್ತು ಗಣಿತ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗುವದು ಎಂದರು.
ನಾಳಿನ ಕಾರ್ಯಕ್ರಮಕ್ಕೆ ಬಸವರಾಜ ಪಾಟೀಲ ಸೇಡಂ, ಮೀರಾ ಸುರೇಶ ಪಂಡಿತ, ಸಿ ಎನ್ ಲಕ್ಷ್ಮೀ ನಾರಾಯಣ, ಶಿವರಾಜ ಪಾಟೀಲ, ಪ್ರೊ ನರೇಂದ್ರ ಬಡಶೇಷಿ, ಶೇಷಮೂರ್ತಿ ಅವಧಾನಿ,ಕಲ್ಯಾಣಿ ಶೀಲವಂತ,ಉಮಾ ಗಚ್ಚಿನಮನಿ,ಡಾ ಐ.ಎ ಸ್ವಾತಿ, ಶಾರದಾ ಕಿತ್ತೂರ, ಶೋಭಾ ಯು ಎಂ ಸೇರಿದಂತೆ ಅನೇಕರು ಪಾಳ್ಗೊಳ್ಳುವರು ಎಂದರು.

Leave a Comment