ಪ್ರೇಯಸಿಗಾಗಿ ಪತ್ನಿಯನ್ನು ಕೊಂದ ಹಂತಕರು

ಬೆಂಗಳೂರು, ಆ. ೨೫- ಮಹಿಳೆಗಾಗಿ ಪತ್ನಿಯನ್ನು ಹತ್ಯೆ ಮಾಡಿ ನಂತರ ಶವವನ್ನು ಕುದುರೆಮುಖದ ಬಳಿಯ ನದಿಗೆ ಎಸೆದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಕೊಲೆಗೀಡಾದ ವ್ಯಕ್ತಿಯನ್ನು ನವಾಜ್ (30) ಎಂದು ಗುರುತಿಸಲಾಗಿದೆ. ಆಗಸ್ಟ್ 20 ರಂದು ಹಂತಕರು, ನವಾಜ್‌ನನ್ನು ಕ್ಯಾಂಟರ್ ವಾಹನ ಬಾಡಿಗೆಗೆ ಬೇಕೆಂದು ಕರೆಸಿಕೊಂಡು ನವಾಜ್‌ನನ್ನು ಭೀಕರವಾಗಿ ಹತ್ಯೆಮಾಡಿದ್ದರು.
ನವಾಜ್ ತಲೆಗೆ ರಾಡ್‌ನಿಂದ ಹೊಡೆದು, ಕುತ್ತಿಗೆ ಕೊಯ್ದು, ಕೊಲೆ ಮಾಡಿ ಶವವನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದ ಬಳಿಯ ನದಿಗೆ ಎಸೆದಿದ್ದರು.
ಹೊರಹೋಗಿದ್ದ ಪತಿ ಮನೆಗೆ ಬಾರದ ಕಾರಣ ಗಾಬರಿಗೊಂಡ ಪತ್ನಿ ಆಯೇಷಾ, ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಎರಡು ದಿನವಾದರೂ ನವಾಜ್‌ನ ಸುಳಿವು ಪತ್ತೆಯಾಗಲಿಲ್ಲ.
ಪೊಲೀಸರು, ನವಾಜ್ ಮೊಬೈಲ್‌ನ ಸಿಡಿಆರ್ ಪರಿಶೀಲನೆ ನಡೆಸಿದಾಗ ಬೆಳಗಿನ ಜಾವ 3.10ಕ್ಕೆ ಬಂದಿದ್ದ ಕರೆಯ ಹೆಜ್ಜೆ ಜಾಡನ್ನು ಹಿಡಿದು ಕಾರ್ಯಾಚರಣೆ ನಡೆಸಿದಾಗ ಶಿವಕುಮಾರ್ ಸ್ನೇಹಿತ ಪವನ್, ಪೊಲೀಸರಿಗೆ ಸಿಕ್ಕಿಬಿದ್ದನು. ಆತನನ್ನು ವಿಚಾರಣೆಗೆ ಗುರಿಪಡಿಸಿದಾಗ ನವಾಜ್‌ನನ್ನು ಹತ್ಯೆ ಮಾಡಿದ ವಿಷಯವನ್ನು ಬಾಯ್ಬಿಟ್ಟಿದ್ದಾನೆ. ನಂತರ ಪೊಲೀಸರು, ಶಿವಕುಮಾರ್ ಸೇರಿದಂತೆ, ನಾಲ್ವರನ್ನು ಬಂಧಿಸಿದ್ದರು.
ಹತ್ಯೆಗೀಡಾದ ನವಾಜ್ ಪತ್ನಿ ಆಯೇಷಾಳನ್ನು ಶಿವಕುಮಾರ್ ಪ್ರೀತಿಸುತ್ತಿದ್ದನು. ಆದರೆ ಆಕೆಗೆ ಮದುವೆಯಾಗಿರುವ ಬಗ್ಗೆ ತಡವಾಗಿ ತಿಳಿಯಿತು. ಹೇಗಾದರೂ ಮಾಡಿ ಆಕೆಯನ್ನು ಪಡೆದುಕೊಳ್ಳಬೇಕೆಂದು ಪ್ರಯತ್ನಿಸಿದ್ದನು. ಇದಕ್ಕಾಗಿ ಪತ್ನಿಯನ್ನೇ ಕೊಲೆ ಮಾಡುವ ಸಂಚು ರೂಪಿಸಿದ್ದನು.
ಈ ವಿಚಾರವನ್ನು ತನ್ನ ಗೆಳೆಯರಿಗೂ ತಿಳಿಸಿ ನವಾಜ್‌ನನ್ನು ಕೊಲೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment