ಪ್ರೇಮಿಸಿದರೆ ಬಡಿದಾಟಬೇಕು

ಚಿತ್ರ: ರೋಗ್
ನಿರ್ದೇಶನ: ಪೂರಿ ಜಗನ್ನಾಥ್
ತಾರಾಗಣ: ಇಶಾನ್,ಏಂಜೆಲ ಕ್ರಿಜೆಂಕ್ಸಿ, ಮನ್ನಾರ ಚೋಪ್ರಾ, ಅವಿನಾಶ್, ಸಾಧುಕೋಕಿಲ ಮತ್ತಿತರರು
ರೇಟಿಂಗ್: **

ಪ್ರೀತಿ ಪ್ರೇಮ ಒಡೆದಾಟ ಬಡಿದಾಟವನ್ನೇ ಪ್ರಧಾನವಾಗಿರಿಸಿಕೊಂಡು ತೆರೆಗೆ ತಂದಿರುವ ಚಿತ್ರ ” ರೋಗ್”.
ತೆಲುಗಿನ ಯಶಸ್ವಿ ನಿರ್ದೇಶಕ ಪೂರಿಜಗನ್ನಾಥ್ ’ಅಪ್ಪು’ ಚಿತ್ರದ ಹದಿನೈದು ವರ್ಷದ ಬಳಿಕ ಕನ್ನಡದಲ್ಲಿ ನಿರ್ದೇಶಿಸಿರುವ ಚಿತ್ರ ರೋಗ್. ಕನ್ನಡದ ಜೊತೆ ತೆಲುಗಿನಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಕಾರಣಕ್ಕಾಗಿಯೆ ಒಂದಷ್ಟು ನಿರೀಕ್ಷೆ ಹೆಚ್ಚಿಗಿದ್ದುದು ಸಹಜ.
ಚಿತ್ರದ ತಾಂತ್ರಿಕತೆಯ ಭರಾಟೆಯ ಕಡೆಗೆ ನೀಡಿರುವ ಆದ್ಯತೆಯನ್ನು ಕಥೆ ಮತ್ತು ಹೊಸ ಕಲಾವಿದರ ನಟನೆಯಲ್ಲಿ ತೋರದಿರುವುದು ಎದ್ದು ಕಾಣುತ್ತದೆ. ಡಬ್ಬಿಂಗ್‌ನಲ್ಲಿ ಕಲಾವಿದರ ತುಟಿ ಚಲನೆ ಮತ್ತು ಸಂಭಾಷಣೆಗಳ ನಡುವೆ ಅಂತರ ಕಣ್ಣಿಗೆ ಕಟ್ಟುವಂತೆ ಗೋಚರಿಸುತ್ತದೆ.
ಅತಿಯಾಗಿ ಪ್ರೀತಿಸಿದ ಹುಡುಗಿ ಅಂಜಲಿ (ಎಂಜೆಲಾ) ತಾನು ಪ್ರೀತಿಸಿದ ಹುಡುಗನಿಗಿಂತ ಸ್ಥಿತಿವಂತ ಸಿಕ್ಕ ಎನ್ನುವ ಕಾರಣಕ್ಕೆ ಜಯ್ (ಇಶಾನ್)ಗೆ ಸೋಡಾ ಚೀಟಿ ನೀಡಿ ಬೇರೊಬ್ಬನ ಕೈ ಹಿಡಿಯುತ್ತಾಳೆ. ಇದನ್ನು ತಡೆಯಲು ಹೋದಾಗ ಪೊಲೀಸ್ ಪೇದೆಯ ಕಾಲು ಮುರಿಯುತ್ತದೆ. ಈ ಕಾರಣಕ್ಕಾಗಿ ಆತ ಜೈಲು ಪಾಲಾಗುತ್ತಾನೆ. ಇದು ಹುಡುಗಿಯರ ಬಗೆಗಿನ ಆಲಕ್ಷಕ್ಕೂ ಕಾರಣವಾಗುತ್ತದೆ.
ಕಾಕತಾಳೀಯ ಎಂದರೆ ಯಾವ ಹೆಸರು ಕೇಳ ಬೇಡವೋ ಅಂದೊಕೊಳುತ್ತಾನೋ ಅದೇ ಹೆಸರು ಮತ್ತೆ ಮತ್ತೆ ಆತನನ್ನು ಕಾಡುತ್ತದೆ. ಕಾಲು ಕಳೆದುಕೊಂಡ ಪೊಲಿಸನ ತಂಗಿಯ ಹೆಸರು ಕೂಡ ಅಂಜಲಿ (ಮನ್ನಾರ ಚೋಪ್ರಾ). ಮಾಡಿದ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಆತನ ಕುಟುಂಬ ನಿರ್ವಹಣೆಯ ಜವಬ್ದಾರಿ ಹೊರುತ್ತಾನೆ. ಈ ವೇಳೆ ಅಂಜಲಿಯೊಂದಿಗೆ ಪ್ರೀತಿಗೆ ತಿರುಗುತ್ತ ಇಲ್ಲ ಹುಡುಗಿಯರ ಬಗೆಗಿನ ತಿರಸ್ಕಾರ ಮನೋಭಾವ ಮುಂದುವರೆಯುತ್ತದೆ ಚಿತ್ರದಲ್ಲಿಯೇ ನೋಡಬೇಕು.
ನಿರ್ದೇಶಕ ಪೂರಿ ಜಗನ್ನಾಥ್,ಹೊಸ ಕಲಾವಿದರನ್ನು ಮುಂದಿಟ್ಟುಕೊಂಡು ಸಂತೆಗೆ ಮೂರು ಮಳ ಎನ್ನುವವಂತೆ ನೇಯ್ದಿದ್ದಾರೆ. ಹೊಸ ಕಲಾವಿದರಿಂದ ಇನ್ನಷ್ಟು ಕೆಸಲ ತೆಗೆಸುವ ಕೆಲಸ ಮಾಡಿದ್ದರೆ ಮಾಡಿದ ಪ್ರಯತ್ನ ಸಫಲವಾಗುತ್ತಿತ್ತು.
ನಾಯಕ ಇಶಾನ್, ಚೊಚ್ಚಲ ಚಿತ್ರ ಹಾಗಾಗಿ ನಟನೆಯ ಕಡೆಗೆ ಗಮನ ಹರಿಸವ ಅಗತ್ಯವಿದೆ. ನಾಯಕಿಯರಲ್ಲಿ ಏಂಜೆಲಾ ಗ್ಲಾಮರ್‌ಗಷ್ಟೇ ಸೀಮಿತವಾಗಿದ್ದಾರೆ. ಮತ್ತೊಬ್ಬ ನಾಯಕಿ ಮನ್ನಾರ ಚೋಪ್ರಾ ಇರುವುದರಲ್ಲಿ ಪರವಾಗಿಲ್ಲ. ಸುನೀಲ್ ಕಶ್ಯಪ್ ಸಂಗೀತದಲ್ಲಿ ಒಂದು ಹಾಡು ಪರವಾಗಿಲ್ಲ. ಮಖೇಶ್ ಕ್ಯಾಮರ ಚಿತ್ರಕ್ಕಿದೆ. ತಾರಾಬಳಗದಲ್ಲಿ ಅವಿನಾಶ್, ಸಾಧುಕೋಕಿಲ ಮತ್ತಿತರಿದ್ದಾರೆ.

Leave a Comment