ಪ್ರೇಮಿಗಳಿಗಾಗಿ ಕುಣಿದು ಕುಪ್ಪಳಿಸಿದ ಸಲ್ಮಾನ್

ಪ್ರೇಮಿಗಳ ದಿನಾಚರಣೆಗೆ ದಿನಗಣನೆ ಶುರುವಾಗಿರುವ ಸಂದರ್ಭದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕುಣಿದು ಕುಪ್ಪಳಿಸುವ ಮೂಲಕ ಒಲವಿನ ಉಡುಗೊರೆ ನೀಡಲು ಸಜ್ಜಾಗಿದ್ದಾರೆ.

ಹೌದು ಪ್ರೇಮಿಗಳ ದಿನವನ್ನು ಅದ್ಧೂರಿಯಾಗಿ ಆಚರಿಸಲು ಪೆಪ್ಸಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದಕ್ಕಾಗಿ ಇಂದು ಪೆಪ್ಸಿ ‘ಸ್ವಾಗ್ ಸೆ ಸೋಲೋ’ ಅನ್ನು ಬಿಡುಗಡೆ ಮಾಡಿದ್ದು, ಪೆಪಸಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಬಾಲಿವುಡ್‌ನ ಸೂಪರ್‌ಸ್ಟಾರ್ ಸಲ್ಮಾನ್‌ಖಾನ್ ಅವರು ಈ ಸ್ವಾಗ್ ಸೆ ಸೋಲೋದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಸ್ವಾಗ್ ಸೆ ಸೋಲೋ ಸಂಗೀತವನ್ನು ಸಿದ್ಧಪಡಿಸಲಾಗಿದೆ.

ಯುವ ಪೀಳಿಗೆಗೆ ಹೇಳಿ ಮಾಡಿಸಿದಂತಿರುವ ಕ್ಯಾಚಿಯಾಗಿರುವ ಈ ಗೀತೆಯನ್ನು ಹೆಸರಾಂತ ಸಂಗೀತ ದಿಗ್ಗಜರು ಸಿದ್ಧಪಡಿಸಿದ್ದಾರೆ. ಇದಕ್ಕೆ ತಾನಿಷ್ಕ್ ಬಾಗ್ಚಿ ಅವರ ಸಂಗೀತ ಸಂಯೋಜನೆ ಇದ್ದರೆ, ರೆಮೋ ಡಿಸೋಜಾ ಕೋರಿಯೋಗ್ರಾಫಿ ನೀಡಿದ್ದಾರೆ. ಯುವ ಸಮುದಾಯ ಕೇಂದ್ರಿತ ಹಾಡು ಇದಾಗಿದ್ದು, ‘ಹರ್ ಘೂಂಟ್ ಮೇನ್ ಸ್ವಾಗ್’ ಎಂಬಲ್ಲಿಂದ ಆರಂಭವಾಗುತ್ತದೆ.

s2
ಭಾರತದಲ್ಲಿ ೧೫-೩೦ ರ ವಯೋಮಾನದ ಪ್ರತಿ ೧೦ ಯುವಕರಲ್ಲಿ ೭ ಮಂದಿ ಒಂಟಿಯಾಗಿರುತ್ತಾರೆ. ಅವರಲ್ಲಿ ಆತ್ಮ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಈ ಸ್ವಾಗ್ ಸೇ ಸೋಲೋವನ್ನು ಸಿದ್ಧಪಡಿಸಲಾಗಿದ್ದು, ಈ ಮೂಲಕ ಅವರಲ್ಲಿ ಸಂಬಂಧಗಳ ಗಟ್ಟಿತನವನ್ನು ಉತ್ತೇಜಿಸಲಾಗುತ್ತದೆ.

ಈ ಗೀತೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಪೆಪ್ಸಿಕೊ ಇಂಡಿಯಾದ ವಕ್ತಾರರು, “ಪೆಪ್ಸಿಯ ಸ್ವಾಗ್ ಅಭಿಯಾನವು ಸ್ವಾಗ್ ಸೇ ಸೋಲೋ ಗೀತೆಯೊಂದಿಗೆ ೨೦೨೦ ನೇ ವರ್ಷ ಮುಂದುವರಿಯುತ್ತದೆ. ಈ ಹಿಂದೆ ನಾವು ರಚಿಸಿದ್ದ ಹಾಡು ಅತ್ಯಂತ ಜನಪ್ರಿಯವಾದ ಹಿನ್ನೆಲೆಯಲ್ಲಿ ಸಂಗೀತವು ದೇಶವನ್ನು ಒಟ್ಟಾಗಿ ಪಾಲ್ಗೊಳ್ಳುವಂತೆ ಮಾಡುವ ಒಂದು ಶಕ್ತಿಶಾಲಿ ಅಸ್ತ್ರ ಎಂಬುದನ್ನು ಮನಗಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಜೋಡಿಗಳು ಸಾಂಪ್ರದಾಯಿಕವಾಗಿ ಪ್ರೇಮಿಗಳ ಸಪ್ತಾಹವನ್ನು ಆಚರಣೆ ಮಾಡಲೆಂಬ ಉದ್ದೇಶದಿಂದ ಈ ಸ್ವಾಗ್ ಸೇ ಸೋಲೋ ಹಾಡನ್ನು ಸಿದ್ಧಪಡಿಸಿ ಜನರ ಮುಂದಿಡುತ್ತಿದ್ದೇವೆ. ಈ ಸಂಗೀತದೊಂದಿಗೆ ಯುವ ಪೀಳಿಗೆ ಸಂತಸಪಡಬೇಕು ಮತ್ತು ಒಂಟಿಯಾಗಿದ್ದೇವೆಂಬ ಆತಂಕವಿಲ್ಲದೇ ಸಂಬಂಧದ ಮಾನ್ಯತೆಯೊಂದಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕೆಂಬುದು ನಮ್ಮ ಉದ್ದೇಶವಾಗಿದೆ. ಸಲ್ಮಾನ್‌ಖಾನ್ ಈ ಹಾಡಿನ ಮುಖ್ಯ ಭೂಮಿಕೆಯಲ್ಲಿದ್ದು, ಇಡೀ ದೇಶ ಈ ಹಾಡಿಗೆ ಹೆಜ್ಜೆ ಹಾಕಲಿದೆ ಎಂಬ ವಿಶ್ವಾಸ ನಮ್ಮದಾಗಿದೆ ಎಂದರು.

ಈ ಬಗ್ಗೆ ಮಾತನಾಡಿದ ಪೆಪ್ಸಿಯ ಬ್ರ್ಯಾಂಡ್ ಅಂಬಾಸಿಡರ್ ಸಲ್ಮಾನ್ ಖಾನ್ ಅವರು, ಸ್ವಾಗ್ ಸೇ ಸೋಲೋ ಒಂದು ಅತ್ಯುತ್ತಮ ಹಾಡಾಗಿದೆ. ವಿಶ್ವಾಸ ತುಂಬುವ ಹಾಡು ಇದಾಗಿದೆ. ಈ ಹಾಡಿನ ಶೂಟಿಂಗ್ ಸಂದರ್ಭದಲ್ಲಿ ನಾವೆಲ್ಲಾ ತುಂಬಾನೇ ಎಂಜಾಯ್ ಮಾಡಿದ್ದೇವು. ಈ ದಿಸೆಯಲ್ಲಿ ನಾನು ಪೆಪ್ಸಿಯೊಂದಿಗೆ ಸಹಯೋಗ ಮಾಡಿಕೊಂಡಿರುವುದು ನನಗೆ ಮತ್ತಷ್ಟು ಸಂತಸವಾಗಿದೆ ಎಂದು ತಿಳಿಸಿದರು.

ಟಿ-ಸೀರೀಸ್ ಸಹಯೋಗದೊಂದಿಗೆ ಸ್ವಾಗ್ ಸೇ ಸೋಲೋವನ್ನು ಬಿಡುಗಡೆ ಮಾಡಿದ್ದು, ಪೆಪ್ಸಿ ಮತ್ತು ಟಿ-ಸೀರೀಸ್ ಸಾಮಾಜಿಕ ಜಾಲತಾಣದಲ್ಲಿ ಈ ಹಾಡನ್ನು ಬಿತ್ತರ ಮಾಡುತ್ತಿವೆ. ಇದಲ್ಲದೇ, ಗಾನಾ.ಕಾಂದಲ್ಲಿಯೂ ಲಭ್ಯವಿದೆ.

Leave a Comment