ಪ್ರೇಕ್ಷಕರು ಒಲಿಯಬೇಕು…

ಡಾ, ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಸಿನೆಮಾಗಳಲ್ಲಿ ಸಿಗರೇಟ್, ಮದ್ಯ ಸೇವನೆಯ ದೃಶ್ಯಗಳು, ದ್ವಂದ್ವಾರ್ಥದ ಸಂಭಾಷಣೆ ಇರುತ್ತಿರಲಿಲ್ಲ ಮೌಲ್ಯಗಳಿರುತ್ತಿತ್ತು, ಅದೇ ರೀತಿಯಲ್ಲಿ ನಮ್ಮ ಚಿತ್ರವಿರಬೇಕು ನಾಯಕಿಯ ಸ್ಕಿನ್ ಶೋ ಇರಬಾರದು, ದೇಶೀಯ ವಸ್ತುಗಳೇ ಇರಬೇಕು, ಯಾವ ದೃಶ್ಯವೂ ಇನ್ನೊಂದು ಚಿತ್ರದಲ್ಲಿ ನೋಡಿದ್ದೇವೆನಿಸಬಾರದು ಈ ರೀತಿಯ ಷರತ್ತುಗಳನ್ನು ತಮಗೆ ತಾವೇ ಹಾಕಿಕೊಂಡು ನಿರ್ಮಿಸಬೇಕೆನ್ನುವ ತಮ್ಮ ಉದ್ದೇಶವನ್ನು ೧/೪ ಕೆಜಿ ಪ್ರೀತಿ ಚಿತ್ರ ಯಶಸ್ವಿಯಾಗಿಸಿದೆ ಎಂದಿರುವ ಚಿತ್ರತಂಡ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಪ್ರೋತ್ಸಾಹಿಸಬೇಕೆಂದು ಕೋರಿತು.

ಕಳೆದವಾರ ಚಿತ್ರ ಬಿಡುಗಡೆಯಾದ ಮೂರನೆ ದಿನದಿಂದ ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಹೆಚ್ಚಾಗಿ ಬರುತ್ತಿದ್ದಾರೆ. ರಾಜ್ಯಾದ್ಯಂತ ಕೆಲ ಚಿತ್ರಮಂದಿರಗಳಲ್ಲಿ ಪ್ರದರ್ಶನದ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಲಾಯಿತು. ಉತ್ತಮ ಕನ್ನಡ ಚಿತ್ರವನ್ನು ಮಾಡಬೇಕೆನ್ನುವ ಆಸೆಯಿಂದ ಹೊಸಬರನ್ನೇ ಇಟ್ಟುಕೊಂಡು ನಿರ್ಮಿಸಿರುವುದಾಗಿ ರಾಜೀವ್ ಹೇಳಿದರು.

ನಾಯಕಿ ಹಿತ ಚಂದ್ರಶೇಖರ್ ಈ ಚಿತ್ರದಲ್ಲಿ ನಟಿಸಿರುವುದು ತಮ್ಮ ಅದೃಷ್ಟ ಚಿತ್ರ ಹೆಚ್ಚು ಜನರನ್ನು ತಲುಪಬೇಕೆನ್ನುವ ಆಶಯವನ್ನು ತಿಳಿಸಿದರೆ, ನಾಯಕ ವಿಹಾನ್‌ಗೌಡಗೆ ಇದ್ದ ಒಂದು ಒಳ್ಳೆ ಚಿತ್ರದಲ್ಲಿ ನಟಿಸಿದರೆ ಸಾಕೆನ್ನುವ ಭಾವನೆಯನ್ನು ೧/೪ ಕೆಜಿ ಪ್ರೀತಿ ಚಿತ್ರ ಪೂರ್ಣಗೊಳಿಸಿರುವ ಜೊತೆಗೆ ಜನರಿಂದ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆ ಸಿನೆಮಾದಲ್ಲಿ ಬೆಳೆಯುವ ಆಸೆ ಮೂಡಿಸಿದೆಯಂತೆ. ಚಿತ್ರದಲ್ಲಿರುವ ಹಾಸ್ಯಕ್ಕೆ ಮಹಿಳೆಯರು ಕೂಡ ಬಿದ್ದುಬಿದ್ದು ನಗುತ್ತಿದ್ದಾರೆ ಆ ದೃಷ್ಟಿಯಲ್ಲಿ ತಮ್ಮ ಉದ್ದೇಶ ಈಡೇರಿ ಸಕ್ಸಸ್ ಕಂಡಿದ್ದಾಗಿ ನಿರ್ದೇಶಕ ಸತ್ಯ ಶೌರ್ಯ ಸಾಗರ್ ಹೇಳಿದ್ದಾರೆ.

Leave a Comment