ಪ್ರೇಕ್ಷಕರಮನಗೆದ್ದ ಪುಟ್ಟರಾಜು

ಕಳೆದ ವಾರ ಬಿಡುಗಡೆಯಾದ ’ಪುಟ್ಟರಾಜು’ ಚಿತ್ರವು ಎಲ್ಲಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಿಡುಗಡೆಯಾದ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ.
ಚಿತ್ರಕ್ಕೆ ಉತ್ತಮ ಪ್ರತಿಕ್ರಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಿರ್ಮಾಪಕ ನಾಗರಾಜು ಮಾತನಾಡಿ ಮೂರು ದಿನಗಳಲ್ಲಿ ಗಳಿಕೆ ಒಳ್ಳೆ ರೀತಿಯಲ್ಲಿ ಆಗಿದೆ. ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ, ಪ್ರೇಕ್ಷಕರು ಶಿಳ್ಳೆ ಹೊಡೆಯುತ್ತಿದ್ದರು. ಬಿಗ್ ಸ್ಟಾರ್ ನಟರು ಇಲ್ಲದೆ ಹೋದರೂ ಹೊಸಬರ ಸಿನಿಮಾಕ್ಕೆ ಜನರು ಬರುತ್ತಿರುವುದು ಖುಷಿಯಾಗಿದೆ. ಮುಂದಿನವಾರದ ವರೆಗೆ ಇದೇ ರೀತಿಯಲ್ಲಿ ಕಲೆಕ್ಷನ್ ಆದರೆ ಬಂಡವಾಳ ವಾಪಸ್ಸು ಬರುತ್ತದೆ ಎನ್ನುತ್ತಾರೆ. ಪ್ರೇಕ್ಷಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಎಲ್ಲಾ ಕಡೆ ಓಕೆ ಅಂತ ಹೇಳುತ್ತಿದ್ದಾರೆ. ಕೋಕೋ ಆಟವನ್ನು ಇಷ್ಟಪಟ್ಟಿದ್ದಾರೆ. ಕಲಾವಿದರು, ತಂತ್ರಜ್ಞರ ಸಹಕಾರದಿಂದ ಸಿನಿಮಾ ಗೆಲ್ಲಲು ಕಾರಣವಾಯಿತು ಎಂಬುದು ನಿರ್ದೇಶಕ ಸಹದೇವ ಸಂತಸದ ನುಡಿ. ರಾಯಚೂರು, ತುಮಕೂರು, ಬೆಂಗಳೂರು ಕಡೆಗಳಲ್ಲಿ ಸುತ್ತಾಡಿ ಎಲ್ಲಾ ಕಡೆ ನನ್ನ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ.
ತುಮಕೂರು ಚಿತ್ರಮಂದಿರದಲ್ಲಿ ಜನರು ಮೇಲಕ್ಕೆ ಎತ್ತಿಕೊಂಡು ನಲಿದಾಡಿದರು ಎಂದು ಕರಡಿಸೀನ ಪಾತ್ರ ಮಾಡಿರುವ ಡಿಂಗ್ರಿನರೇಶ್ ಹೇಳುತ್ತಾರೆ.
ನಾಯಕ ಅಮಿತ್, ನಾಯಕಿಯರಾದ ಜಯಶ್ರೀಆರಾಧ್ಯ, ಸುಶ್ಮಿತಾ ಹಾಜರಿದ್ದು ಖುಷಿಯ ಅನುಭವಗಳನ್ನು ಹಂಚಿಕೊಂಡರು. ವಿತರಕ ವಿಜಯ್ ಮಾತನಾಡುತ್ತಾ ಮೂರು ವಾರದ ಹಿಂದೆ ಬಿಡುಗಡೆಯಾಗಿದ್ದರೆ ಗಳಿಕೆಗೆ ಸಹಕಾರಿ ಆಗುತ್ತಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಸೂಕ್ತ ಸ್ಪಂದನೆ ಸಿಕ್ಕಿದೆ ಎನ್ನುತ್ತಾರೆ. ಸಹ ನಿರ್ಮಾಪಕ ರಾಜುಬಾಲಕೃಷ್ಣ ಇದ್ದರು.

Leave a Comment