ಪ್ರೀತಿ ಕಾಯುವ ದಳಪತಿ

ನೆನಪಿರಲಿ ಖ್ಯಾತಿಯ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ’ದಳಪತಿ’ ಚಿತ್ರ ಅಂತೂ ಇಂತೂ ಬಿಡುಗಡೆಗೆ ಸಜ್ಜಾಗಿದೆ. ಪ್ರಶಾಂತ್ ರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಪ್ರೇಮ್‌ಗೆ ಜೊತೆಯಾಗಿ ಮುದ್ದು ಬೆಡಗಿ ಕೃತಿ ಕರಬಂಧ ಕಾಣಿಸಿಕೊಂಡಿದ್ದಾರೆ.
ಮೂರು ವರ್ಷಗಳ ಹಿಂದೆ ಆರಂಭವಾದ ಚಿತ್ರ ಚಿತ್ರೀಕರಣ ಪೂರ್ಣಗೊಳಿಸಿದ್ದರೂ ವಿವಿಧ ಕಾರಣಗಳಿಂದಾಗಿ ಚಿತ್ರಮಂದಿರಕ್ಕೆ ಬರುವುದು ತಡವಾಗಿತ್ತು. ಇದೀಗ ಚಿತ್ರ ತೆರೆಗೆ ಬರುವ ಕಾಲ ಸನ್ನಿಹಿತವಾಗಿದೆ. ಮುಂದಿನ ವಾರ ರಾಜ್ಯಾದ್ಯಂತ ಸರಿ ಸುಮಾರು ೨೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ.
’ದಳಪತಿ’ಚಿತ್ರ, ಚಿತ್ರರಂಗದ ಕೆರಿಯರ್‌ನಲ್ಲಿ ಉತ್ತಮ ಚಿತ್ರವಾಗಲಿದೆ ಎಂದು ಮಾತಿಗಿಳಿದ ಪ್ರೇಮ್, ಪ್ರೀತಿ, ಸಂಬಂಧ,ಸೆಂಟಿಮೆಂಟ್ ಅಂಶಗಳನ್ನು ಒಳಗೊಂಡಿರುವ ಪಕ್ಕಾ ಕಮರ್ಷಿಯಲ್ ಚಿತ್ರ.ಚಿತ್ರ ನೋಡಿದ ಎಲ್ಲರೂ ಮೆಚ್ಚುಗೆ ಮಾತನಾಡಿದ್ದಾರೆ. ಹೀಗಾಗಿ ಚಿತ್ರದ ಬಗ್ಗೆ ಒಂದಷ್ಟು ನಿರೀಕ್ಷೆಗಳು ಹೆಚ್ಚಾಗಿದೆ.ತಡವಾದರೂ ಪರವಾಗಿಲ್ಲ ಒಳ್ಳೆಯ ಚಿತ್ರ ನೀಡುವ ಖುಷಿ ತಂಡಕ್ಕಿದೆ.
ಚಿತ್ರ ವಿಳಂಬವಾಗಲು ನಾನು, ನಟಿ ಕೃತಿ ಮತ್ತು ನಿರ್ದೇಶಕರು ತಮ್ಮದೇ ಆದ ಕೆಲಸ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರಿಂದ ಮತ್ತು ಮೂವರ ದಿಕ್ಕು ಬೇರೆ ಬೇರೆಯಾದ ಕಾರಣ ಚಿತ್ರ ತಡವಾಯಿತೇ ವಿನಃ ಅದರಲ್ಲಿ ಬೇರೆ ಯಾವುದೇ ಕಾರಣಗಳಿಲ್ಲ.
ಚಿತ್ರದಲ್ಲಿ ನನ್ನದು ಪ್ರೀತಿ ಕಾಯುವ ’ದಳಪತಿ’ಯ ಚಿತ್ರ. ಪಕ್ಕಾ ಮನರಂಜನೆಯ ಉದ್ದೇಶದಿಂದ ನಿರ್ದೇಶಕ ಪ್ರಶಾಂತ್ ರಾಜ್ ಚಿತ್ರವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಎಲ್ಲದಕ್ಕೂ ಮಿಗಿಲಾಗಿ ಚಿತ್ರ ತಾಂತ್ರಿಕವಾಗಿ ಮೂಡಿ ಬಂದಿರುವ ರೀತಿ ಇಡೀ ತಂಡಕ್ಕೆ ಖುಷಿ ಕೊಟ್ಟಿದೆ. ಇದೇ ಖುಷಿಯಲ್ಲಿ ಮುಂದಿನವಾರ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರಲಾಗುತ್ತಿದೆ. ಚಿತ್ರ ಎಲ್ಲರಿಗೂ ಹಿಡಿಸಲಿದೆ ಎನ್ನುವ ಆತ್ಮವಿಶ್ವಾಸ ಅವರದು.
ಚಿತ್ರವನ್ನು ಬೆಂಗಳೂರು ಸುತ್ತಮುತ್ತ ೪೫ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರ ಜೀವನದ ಕೆರಿಯರ್‌ನಲ್ಲಿ ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ನಿರ್ದೇಶಕ ಪ್ರಶಾಂತ್ ರಾಜ್, ಚಿತ್ರ ಚೆನ್ನಾಗಿ ಬಂದಿದೆ. ಹೀಗಾಗಿ ತಡವಾದರೂ ಚಿಂತೆಯಲ್ಲ. ಒಳ್ಳೆಯ ಚಿತ್ರ ನೀಡಿದರೆ ಜನ ಕಂಡಿತಾ ನೋಡುತ್ತಾರೆ ಎನ್ನುವ ವಿಶ್ವಾಸ ನನ್ನದು. ಚಿತ್ರ ನಮಗೆ ಹಿಡಿಸಿದೆ ಇನ್ನು ಚಿತ್ರ ನೋಡಿದ ಪ್ರೇಕ್ಷಕ ಇಷ್ಟಪಟ್ಟರೆ ನಮ್ಮ ಶ್ರಮ ಸಾರ್ಥಕವಾಗಲಿದೆ. ಅದಕ್ಕಾಗಿ ಎದುರು ನೊಡುತ್ತಿದ್ದೇವೆ. ಎಲ್ಲರ ಸಹಕಾರ ಬೇಕು ಎಂದು ಕೇಳಿಕೊಂಡರು.

Leave a Comment