ಪ್ರೀತಿಸಿ ವಿವಾಹವಾಗಿ ಗರ್ಭಿಣಿ ಮಾಡಿ ಕೈಕೊಟ್ಟ

ಬೆಂಗಳೂರು,ಆ.೩೦-ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ವೇಳೆ ಪರಿಚಯವಾಗಿದ್ದ ಹಿಂದೂ ಯುವತಿಯನ್ನು ಪ್ರೀತಿಸಿ ಆರು ತಿಂಗಳ ಹಿಂದೆ ವಿವಾಹವಾಗಿ ಗರ್ಭಿಣಿ ಮಾಡಿದ ಪ್ರೀತಿಸಿ ಮುಸ್ಲಿಂ ಯುವಕ ನೊಬ್ಬ ಕೈ ಕೊಟ್ಟು ಪರಾರಿಯಾಗಿರುವ ಘಟನೆ ಲಗ್ಗೆರೆಯಲ್ಲಿ ನಡೆದಿದೆ.

ಕಳೆದ ಫೆ. ೬ರಂದು ಹಿಂದೂ ಯುವತಿಯನ್ನು ಮದುವೆಯಾಗಿದ್ದ ಗರೀಬ್ ಆಕೆ ನಾಲ್ಕು ತಿಂಗಳು ಗರ್ಭಿಣಿಯಾದ ಮೇಲೆ ಬಕ್ರೀದ್ ಹಬ್ಬಕ್ಕೆ ಹೋಗಿ ಬರುವುದಾಗಿ ಹೇಳಿ ಊರಿಗೆ ಹೋದವನು ಇಲ್ಲಿಯವರೆಗೆ ಪತ್ತೆಯಾಗಿಲ್ಲ ಮೊಬೈಲ್ ಕರೆ ಬರುವಂತೆ ಮಾಡಿ ಅಂಗಲಾಚಿದರೂ ಮನೆಗೆ ಬಾರದೆ ಸತಾಯಿಸುತ್ತಿದ್ದಾನೆ ಎಂದು ನೊಂದ ಯುವತಿ ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾತೋರ್‌ಗೆ ದೂರು ನೀಡಿದ್ದಾರೆ.
ದೂರಿನ ವಿವರ
ನಾನು ಹಾಗೂ ನನ್ನ ಗಂಡ ಗರೀಬ್ ೧ ವರ್ಷದಿಂದ ಪ್ರೀತಿಸುತ್ತಿದ್ದು, ಫೆಬ್ರವರಿ ೧೬ರಂದು ಶಿವಗಂಗೆಯ ಬೆಟ್ಟದ ದೇವಸ್ಥಾನದಲ್ಲಿ ಮದುವೆಯಾಗಿ ಒಟ್ಟಿಗೆ ಬಾಳುತ್ತಿದ್ದೇವು. ಈಗ ನಾನು ನಾಲ್ಕು ತಿಂಗಳ ಗರ್ಭಿಣಿ ಆಗಿದ್ದೇನೆ. ಆದರೆ ಅವರು ಬಕ್ರೀದ್ ಹಬ್ಬಕ್ಕೆ ಅವರ ತಂದೆ-ತಾಯಿಯ ಮನೆಗೆ ಹೋಗಿ ಮತ್ತೇ ಹಿಂದಿರುಗಿ ಬಂದಿಲ್ಲ. ತಂದೆ-ತಾಯಿ ಜೊತೆ ಸೇರಿಕೊಂಡು ನನಗೆ ಮೋಸ ಮಾಡಿದ್ದಾನೆ. ಈಗ ಅವರಿಗೆ ಫೋನ್ ಮಾಡಿದರು ತೆಗೆಯುವುದಿಲ್ಲ.
ಇಲ್ಲವೇ ಅವರ ತಂದೆ-ತಾಯಿ ಅವನನ್ನು ಕೂಡಿ ಹಾಕಿ ಬೇರೆ ಮದುವೆ ಮಾಡಲು ಹೊರಟಿದ್ದು ದಯಮಾಡಿ ನನಗೆ ಅವನ ಜೊತೆ ಜೀವನ ನಡೆಸಲು ಸಹಕರಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ತಾಯಿ-ತಂದೆ ಇಲ್ಲದ ತಬ್ಬಲಿ ಹೆಣ್ಣು ಮಗಳು. ನನಗೆ ಅವರ ಜೊತೆ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಕೈಮುಗಿದು ಬೇಡಿಕೊಳ್ಳುತ್ತೇನೆ. ಅತಿ ಶೀಘ್ರವಾಗಿ ಕ್ರಮ ಕೈಗೈಗೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ.
ನನಗೆ ಏನಾದರು ಮುಂದೆ ತೊಂದರೆಯಾದರೆ ಅದಕ್ಕೆ ನೇರ ಹೊಣೆ ಅವರು ಹಾಗೂ ಅವನ ತಂದೆ, ತಾಯಿ, ಅಕ್ಕ ತಂಗಿಯರು ಆಗಿರುತ್ತಾರೆ. ದಯಮಾಡಿ ನ್ಯಾಯ ಒದಗಿಸಬೇಕೆಂದು ನಿಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ಯುವತಿ ಡಿಸಿಪಿ ಹಾಗೂ ರಾಜಗೋಪಾಲನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Leave a Comment