ಪ್ರೀತಿಯ ರತ್ನಾವತಿ…

ಹೊಸಬರೇ ತುಂಬಿರುವ “ರತ್ನಾವತಿ” ಸದ್ದುಗದ್ದಲವಿಲ್ಲದೆ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿ ಎರಡನೇ ಹಂತಕ್ಕೆ ಸಜ್ಜುಗೊಂಡಿದೆ. ಮುಂದಿನ ತಿಂಗಳಿನಿಂದ ಚಿತ್ರದುರ್ಗದಲ್ಲಿ ಹಾಕಲಾದ ವಿಶೇಷವಾಗಿ ಹಾಕಲಾಗಿರುವ ಸೆಟ್‌ನಲ್ಲಿ ಚಿತ್ರೀಕರಣ ನಡೆಸಲು ಸಿದ್ದವಾಗಿದೆ. ಚಿತ್ರದ ಮೂಲಕ ಮಂಜು ಅಲಿಯಾಸ್ ಅಪರಿಜಿತ್ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ.

ಜೊತೆಗೆ ಪವನ್, ಭರತ್ ಕುಮಾರ್, ಸುನೀಲ್ ರಾಣಾ, ಶಿಲ್ಪ, ರಶ್ಮಿಗೌಡ ಸೇರಿದಂತೆ ಹಲವು ಕಲಾವಿದರಿದ್ದಾರೆ. ಚಿತ್ರಕ್ಕೆ ರವೀಂದ್ರ ಬಾಬು ಬಂಡವಾಳ ಹಾಕಿದ್ದು, ಅವರೊಂದಿಗೆ ಡಾ. ಮಹೇಶ್ ಕುಮಾರ್ ಕೈಜೋಡಿಸಿದ್ದಾರೆ.

ಕಳೆದವಾರ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮರಂಭವಿತ್ತು. ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್, ನಟ ಹರ್ಷ ಸೇರಿದಂತೆ ಮತ್ತಿತರರು ಆಗಮಿಸಿ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿ ಹಾರೈಸಿದರು.

ಈ ವೇಳೆ ಮನೋಹರ್, ರಾಜ್ಯದಲ್ಲಿ ಸಿಂಗಲ್ ಚಿತ್ರಮಂದಿರಗಳನ್ನು ಉಳಿಸಿಇ ಬೆಳೆಸುವಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರಮಂದಿರಗಳ ಮಾಲೀಕರ ಸಭೆ ಕರೆದು ಚಿತ್ರಮಂದಿರದಲ್ಲಿ ಸೌಂಡ್, ಸೀಟ್ ಮತ್ತು ಪರದೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ನಿರ್ದೇಶಕ ಅಪರಿಜಿತ್, ೨೦೦ ವರ್ಷಗಳ ಹಿಂದಿನ ಸಮಸ್ಯೆಯನ್ನು ಈಗಿನ ಕಾಲಕ್ಕೆ ಸೇರಿಸಿಕೊಂಡು ಚಿತ್ರ ಮಾಡಲಾಗಿದೆ. ಪ್ರೀತಿ ಆಗಲೂ ಇತ್ತು ಈಗಲೂ ಇದೆ ಮುಂದೆಯೂ ಇರಲಿದೆ.

ಚಿತ್ರದಲ್ಲಿನ ರತ್ನಾವತಿ ಪಾತ್ರ ನೈಜ ಎಳೆಯನ್ನಿಟ್ಟುಕೊಂಡು ಅದಕ್ಕೆ ಸಿನಿಮೀಯ ರೂಪ ನೀಡಲಾಗಿದೆ. ರತ್ನಾವತಿಗೂ ಚಿತ್ರಕ್ಕೂ ಹೇಗೆ ಸಂಬಂಧ ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು.

ಸಸ್ಪನ್ಸ್ ಥ್ರಿಲ್ಲರ್ ಕಥೆಯನ್ನು ಚಿತ್ರ ಒಳಗೊಂಡಿದೆ. ಚಿತ್ರದಲ್ಲಿ ಶೇ.೪೦ ರಷ್ಟು ಗ್ರಾಫಿಕ್ಸ್ ಕೆಲಸವಿರಲಿದೆ. ೮೦ ಲಕ್ಷ ರೂಪಾಯಿ ವೆಚ್ಚದಲ್ಲಿ ಚಿತ್ರವನ್ನು ಚಿತ್ರೀಕರಿಸುವ ಉದ್ದೇಶವೊಂದಲಾಗಿದೆ. ಪ್ಲಾಶ್ ಬ್ಯಾಕ್‌ನಲ್ಲಿ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ ಹೊಸಬರ ತಂಡಕ್ಕೆ ಬೆಂಬಲ ಮತ್ತು ಸಹಕಾರವಿರಲಿ ಎಂದು ಕೇಳಿಕೊಂಡರು.

ಬಹುತೇಕರು ಹೊಸಬರಾಗಿದ್ದ ಹಿನ್ನೆಲೆಯಲ್ಲಿ ಮಾತನಾಡಲು ತೊಡರಿಸಿದರು. ಹೊಸಬರಿಗೆ ಪ್ರೋತ್ಸಾಹ ನೀಡಿ ಎಂದು ಎಲ್ಲಾ ಕಲಾವಿದರು ಕೇಳಿಕೊಂಡರು.

Leave a Comment