ಪ್ರೀತಿಗೆ ಹೆಬ್ಬುಲಿ ರಾಯಬಾರಿ

-ಚಿಕ್ಕನೆಟಕುಂಟೆ.ಜಿ ರಮೇಶ್
ಚಿತ್ರರಂಗದಲ್ಲಿ ಭವಿಷ್ಯ ಕಂಡುಕೊಳ್ಳಬೇಕೆಂಬ ಹಂಬಲ ಮತ್ತು ಕನಸು ಹಲವರದು. ಈ ನಿಟ್ಟಿನಲ್ಲಿ ಹಲವು ಪ್ರಯತ್ನ ಮುಂದುವರಿದಿದೆ. ಇದಕ್ಕೆ ಹೊಸ ಸೇರ್ಪಡೆ ’ಪ್ರೀತಿಯ ರಾಯಭಾರಿ’ ಚಿತ್ರ.

ಚಿತ್ರ ಸಂಪೂರ್ಣ ಚಿತ್ರೀಕರಣ ಪೂರ್ಣಗೊಳಿಸಿದ್ದು ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಚಿತ್ರಕ್ಕೆ ರಾಜಕಾರಣಿ ವೆಂಕಟೇಶ್ ಗೌಡ ಬಂಡವಾಳ ಹಾಕಿದ್ದು ಅವರ ಪುತ್ರ ನಕುಲ್ ನಾಯಕ. ನಾಯಕಿಯಾಗಿ ಅಂಜನಾ ದೇಶಪಾಂಡೆ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಹಲವು ಹಿರಿಯ ಕಿರಿಯ ಕಲಾವಿದರ ದಂಡು ಚಿತ್ರಕ್ಕಿದೆ.

ಇನ್ನೂ ಬಿಡುಗಡೆಯಾಗದ “ಗೆರಿಲ್ಲಾ ಚಿತ್ರಕ್ಕೆ ಆಕ್ಷನ್‌ಕಟ್ ಹೇಳಿರುವ ಎಂ.ಎಂ ಮುತ್ತು ’ಪ್ರೀತಿಯ ರಾಯಭಾರಿ’ಯನ್ನು ಜನರ ಮುಂದೆ ತರಲು ಸಜ್ಜಾಗಿದ್ದಾರೆ. ವಾಹಿನಿಯೊಂದರಲ್ಲಿ ಮೂಡಿ ಬಂದ ಕ್ರೈಮ್ ವಿಷಯವನ್ನು ಆಧರಿಸಿ ಚಿತ್ರ ನಿರ್ದೇಶನ ಮಾಡಿದ್ದಾರೆ.

ಕಳೆದವಾರ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವಿತ್ತು. ವೇದಿಕೆಯ ಮೇಲೆ ರಾರಾಜಿಸಿದ್ದುದು ನಟ ಸದೀಪ್ ಮತ್ತು ಅವರ ಮುಂಬರುವ ಚಿತ್ರ ’ಹೆಬ್ಬುಲಿ’ಯ ಆರ್ಭಟ. ಹೆಬ್ಬುಲಿಯ ನೃತ್ಯ ಮತ್ತು ಟೀಸರ್ ನೆರೆದಿದ್ದ ಜನರಿಗೆ ರಂಜನೆ ನೀಡಿತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೆಬ್ಬುಲಿ ಹಾಡಿನೊಂದಿಗೆ ಧ್ವನಿ ಸುರುಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆ ಬಳಿಕವೂ ಎಸ್.ಆರ್.ವಿ ಪ್ರೊಡಕ್ಷನ್ ಮತ್ತು ಉಮಾಪತಿ ಫಿಲ್ಸ್ಂ ಜಂಟಿಯಾಗಿ ರಘುನಾಥ್ ಮತ್ತು ಉಮಾಪತಿ ನಿರ್ಮಾಣ ಮಾಡಿರುವ ಹೆಬ್ಬುಲಿಯದ್ದೇ ಮಾತು-ಕತೆ. ಹೀಗಾಗಿ ಅದು ’ಪ್ರೀತಿಯ ರಾಯಬಾರಿಯೋ’ ಅಥವಾ ’ಹೆಬ್ಬುಲಿ’ ಚಿತ್ರದ ಬಗೆಗಿನ ಕಾರ್ಯಕ್ರಮವೋ ಎನ್ನುವಷ್ಟರ ಮಟ್ಟಿಗೆ ನೆರೆದಿದ್ದವರಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು. ಪ್ರೀತಿಗೆ ಹೆಬ್ಬುಲಿ ರಾಯಭಾರಿಯಾಗಿದ್ದರು.

’ಪ್ರೀತಿಯ ರಾಯಬಾರಿ’ಗೆ ಹರಸಿ ಹಾರೈಸಲು ಬಂದಿದ್ದ ಕಿಚ್ಚ ಸುದೀಪ್‌ಗೆ ಅಚ್ಚರಿಯಾಗುವಂತೆ ಹೆಬ್ಬುಲಿಯ ಬಗ್ಗೆ ಘರ್ಜನೆಯಾಯಿತು. ಬಳಿಕ ಮಾತಿಗಿಳಿದ ಸುದೀಪ್, ಹೆಬ್ಬುಲಿಯ ಬಗ್ಗೆ ವ್ಯಕ್ತವಾದ ಬೆಂಬಲಕ್ಕೆ ಮನ ತುಂಬಿಬಂದಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿ ಹಾರೈಸಿದರು.

ಕಾರ್ಯಕ್ರಮಕ್ಕೂ ಮುನ್ನ ನಿರ್ದೇಶಕ ಮುತ್ತು, ವಾಹಿನಿಯಲ್ಲಿ ಬಂದ ಎಳೆಯಿಂದ ಸ್ಪೂರ್ತಿ ಪಡೆದು ಚಿತ್ರ ಮಾಡಲಾಗಿದೆ. ನಂದಿಬೆಟ್ಟದಲ್ಲಿ ಪ್ರೇಮಿಗಳಿಗೆ ಆದ ಘಟನೆಯೇ ಚಿತ್ರದ ಕಥಾವಸ್ತು. ಇನ್ನು ಮಾಹಿತಿ ಹೇಳಿದರೆ ಕತೆ ಬಹಿರಂಗಗೊಳ್ಳಲಿದೆ.ಬಿಡುಗಡೆಯಾಗುವರೆಗೂ ಕುತೂಹಲವಿರಲಿ. ಚಿತ್ರವನ್ನು ಚಿತ್ರದುರ್ಗ ಹಿರಿಯೂರಿನ ಭಾಗಗ ಹಳ್ಳಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರ ಸಂಪೂರ್ಣ ಪೂರ್ಣಗೊಂಡಿದ್ದು ಡಿಟಿಎಸ್ ಹಂತದಲ್ಲಿದೆ.

ಮುಂದಿನ ತಿಂಗಳು ತೆರೆಗೆ ತರುವ ಆಲೋಚನೆ ಇದೆ. ಇದೊಂದು ಪಕ್ಕಾ ಪ್ರೇಮಕಥೆಯ ಚಿತ್ರ. ಪ್ರೀತಿ ಮಾಡುವರಿಗೆ ಸಿನಿಮಾ ರಾಯಭಾರಿಯಾಗಲಿದೆ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.ನಟ ನಕುಲ್ ಮೊದಲ ಚಿತ್ರ, ನಮ್ಮದೇ ಹೋಮ್ ಬ್ಯಾನರ್‌ನಲ್ಲಿ ಚಿತ್ರ ಮೂಡಿಬಂದಿದೆ. ಇದುವರೆಗೂ ಚಿತ್ರಕ್ಕೆ ಎಷ್ಟು ವೆಚ್ಚವಾಗಿದೆ ಎನ್ನುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಒಳ್ಳೆಯ ಚಿತ್ರ ನೀಡುವುದಷ್ಟೇ ನಮ್ಮ ಉದ್ದೇಶ. ನಿರ್ಮಾಪಕರೂ ಆಗಿರುವ ತಂದೆ ವೆಂಕಟೇಶ್ ಗೌಡ ಅವರು ಈ ಬಗ್ಗೆ ಎಲ್ಲವನ್ನೂ ನೋಡಿಕೊಂಡಿದ್ದಾರೆ.

ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳಲಾಗಿದೆ. ಓದಿ ಹಳ್ಳಿಯಲ್ಲಿರುವ ಹುಡುಗನ ಪಾತ್ರ. ನಾಯಕಿ ಎನ್.ಎಸ್.ಎಸ್ ಶಿಬಿರಕ್ಕೆ ಬಂದಾಗ ಅಲ್ಲಿ ನಾಯಕಿಯ ಜೊತೆ ವಾಗ್ವಾದ ಮತ್ತು ಆ ಬಳಿಕ ಪ್ರೀತಿ ಬೆಳೆಯಲಿದೆ ,ಪ್ರೀತಿ, ಎಮೋಷನ್, ಸೆಂಟಿಮೆಂಟ್ ಸೇರಿದಂತೆ ಸಂಪೂರ್ಣ ಮನರಂಜನಾತ್ಮಕವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಾಯಕಿ ಅಂಜನಾ ದೇಶಪಾಂಡೆ,ಎರಡನೇ ಚಿತ್ರ. ಸಾಂಪ್ರದಾಯಿಕ ಮತ್ತು ಪಕ್ಕದ ಮನೆ ಹುಡುಗಿಯ ಪಾತ್ರ. ಕಾಲೇಜಿಗೆ ಹೋಗುವ ಹುಡುಗಿ. ನಿಜ ಜೀವನಕ್ಕೆ ಹತ್ತಿರವಾಗುವಂತಹುದು. ಪೂರ್ಣ ಪ್ರಮಾಣದ ನಾಯಕಿ. ಚಿತ್ರ ನೋಡಿದ ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ. ಪಾತ್ರ ಎಲ್ಲರ ಕಣ್ಣಲ್ಲಿ ನೀರು ತರಿಸಲಿದೆ, ಈ ಚಿತ್ರದ ಮೂಲಕ ನೆಲೆ ನಿಲ್ಲಲಿದೆ ಎಂದು ಹೇಳಿಕೊಂಡರು. ಚಿತ್ರದಲ್ಲಿ ಸಾಧುಕೋಕಿಲ, ಲಕ್ಷ್ಮಿ ಸಿದ್ದಯ್ಯ, ಮುನಿ, ಗಿರಿ, ಪದ್ಮಜಾರಾವ್ ಸೇರಿದಂತೆ ಅನೇಕ ಮಂದಿ ಕಲಾವಿದರಿದ್ದಾರೆ.

Leave a Comment