ಪ್ರಿಯಾಮಣಿ ಸಿಬಿಐ ಅಧಿಕಾರಿ

  • ಚಿಕ್ಕನೆಟಕುಂಟೆ ಜಿ.ರಮೇಶ್

ಮದುವೆಯಾದ ಬಳಿಕ ಪ್ರಿಯಾಮಣಿ ಗರ್ಭಿಣಿಯಾಗಿದ್ದಾರೆ ಎನ್ನುವ ವಂದಂತಿ ಹಬ್ಬಿತ್ತು,ಅದು ಸುಳ್ಳು ಎನ್ನುವುದನ್ನು ನಿರೂಪಿಸಲು ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.ಇದೇ ಮೊದಲ ಬಾರಿಗೆ ಸಿಬಿಐ ಅಧಿಕಾರಿಯಾಗಿದ್ದಾರೆ.ಅದು”ಡಾ.೫೬” ಚಿತ್ರದ ಮೂಲಕ.

ಹೊಸಬರ ತಂಡ ಉತ್ಸಾಹದಿಂದ ನಿರ್ಮಿಸಿ ನಿರ್ದೇಶಿಸುತ್ತಿರುವ ಚಿತ್ರ ಇದು.ಈ ಚಿತ್ರದ ಮೂಲಕ ರಾಜಿ ಆನಂದ್ ಲೀಲಾ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ಪ್ರವೀಣ್ ರೆಡ್ಡಿ ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಚಿತ್ರದ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮದುವೆಯ ನಂತರಪ್ರಿಯಾಮಣಿ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿಗಳು ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ಪ್ರಿಯಾಮಣಿ ಯಾವುದೇ ಸ್ಪಷ್ಟನೆ ನೀಡದೆ ತಾವಾಯಿತು ತಮ್ಮ ಕೆಲಸವಾಯಿತು ಎಂದು ಇದ್ದರು. ಈ ನಡುವೆ ಕನ್ನಡದಲ್ಲಿ ಮರ್ಡರ್ ಮಿಸ್ಟ್ರಿಯ ಕಥೆ ಇರುವ “ಡಾ ೫೬” ಚಿತ್ರದಲ್ಲಿ  ಸಿಬಿಐ ಅಧಿಕಾರಿಯ ಪಾತ್ರದಲ್ಲಿ  ಕಾಣಿಸಿಕೊಂಡಿದ್ದಾರೆ. ಈ ಮೂಲಕ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

’ಡಾ.೫೬’ ಸೈನ್ಸ್,ಪಿಕ್ಷನ್ ಇರುವ ಮರ್ಡರ್ ಮಿಸ್ಟ್ರಿ ಚಿತ್ರ. ಪ್ರತಿ ೫೬ನಿಮಿಷಕ್ಕೆ ಚಿತ್ರದಲ್ಲಿ ಬದಲಾಣೆಯಾಗುತ್ತದೆ. ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ. ಚಿತ್ರ ಬಿಡುಗಡೆಯಾಗುವ ತನಕ ಒಂದಷ್ಟು ಕುತೂಹಲಗಳು ಇರಲಿ ಎನ್ನುವ ಕಾರಣಕ್ಕೆ ಕಥೆಯ ಮುಖ್ಯಭಾಗವನ್ನು ಬಹಿರಂಗಗೊಳಿಸುತ್ತಿಲ್ಲ ಎಂದು ಮಾತಿಗಿಳಿದರು ನಿರ್ದೇಶಕ ರಾಜಿ ಆನಂದ್ ಲೀಲಾ.

film-dr-56_145

೧೯೫೬ ರಿಂದ ೨೦೧೯ರ ತನಕ ಎಂದು ಚಿತ್ರದ ಶೀರ್ಷಿಕೆ ಕೆಳಗೆ ಅಡಿ ಬರಹ ಬರೆಯಲಾಗಿದೆ. ಅಲ್ಲಿಂದ ಇಲ್ಲಿ ತನಕ ಎಲ್ಲರೂ ಒಂದಿಲ್ಲೊಂದು ತಪ್ಪು ಮಾಡಿಕೊಂಡು ಬಂದಿದ್ದಾರೆ. ಆ ತಪ್ಪನ್ನು ಚಿತ್ರದ ಮೂಲಕ ಹೇಳಲಾಗುತ್ತಿದೆ. ಚಿತ್ರವನ್ನು ಅನೇಕಲ್ ಮತ್ತು ಪಿಚ್ಚಾವರಂನಲ್ಲಿ ಚಿತ್ರೀಕಣ ಮಾಡುವ ಉದ್ದೇಶವೊಂದಲಾಗಿದೆ. ಈ ತಿಂಗಳಲ್ಲಿ ಒಂದು ಶೆಡ್ಯೂಲ್ಡ್ ಮತ್ತು ಜನವರಿಯಲ್ಲಿ ಮತ್ತೊಂದು ಶೆಡ್ಯೂಲ್ಡ್ ಚಿತ್ರೀಕರಣ ಮಾಡುವ ಉದ್ದೇಶವಿದೆ ಎಂದು ವಿವರ ನೀಡಿದರು.

ನಿರ್ಮಾಪಕ ಕಮ್ ನಟ ಪ್ರವೀಣ್,ನಾಯಕನಾಗಿ ಈ ಮುಂಚೆ ಕಾಣಿಸಿಕೊಂಡಿದ್ದೆ.ಅದು ಇನ್ನೂ ಬಿಡುಗಡೆಯಾಗಿಲ್ಲ.ನಿರ್ಮಾಣದ ಮೊದಲ ಚಿತ್ರ.ಚಿತ್ರಕ್ಕೆ ನಾನೇ ಕಥೆ ಚಿತ್ರಕಥೆ ಮಾಡಿದ್ದೇನೆ. ಕುತೂಹಲಕಾರಿ ಸಂಗತಿಯ ಎಳೆಯನ್ನು ಚಿತ್ರ ಒಳಗೊಂಡಿದೆ ಎಂದರು.

ಪ್ರಿಯಾಮಣಿ ಮಾತನಾಡಿ,ಇದುವರೆಗೂ ಈ ರೀತಿಯ ಪಾತ್ರ ಮಾಡಿಲ್ಲ. ಖಡಕ್ ಸಿಬಿಐ ಅಧಿಕಾರಿಯ ಪಾತ್ರ.ಕೊಲೆ ಮತ್ತು ತನಿಖೆಯ ಕಡೆಗೆ ಸಂಪೂರ್ಣ ಗಮನ ಹರಿಸಿರುತ್ತೇನೆ. ಹೀಗಾಗಿ ತನಿಖೆಯ ವಿಷಯ ಬಿಟ್ಟು ಬೇರೆ ಯಾವುದರ ಕಡೆಗೂ ಗಮನ ಹರಿಸುವುದಿಲ್ಲ.

film-dr-56_113ನಿರ್ದೇಶಕರು ಮೊದಲ ಕಥೆ ಹೇಳಿದಾಗ,ಹೇಗೆ ಸಿನಿಮಾ ಮಾಡುತ್ತಾರೋ ಎನ್ನುವ ಭಯವಿತ್ತು.ಚಿತ್ರದ ಸಂಪೂರ್ಣ ಕಥೆ ಕೇಳಿ ಇಷ್ಟವಾಯಿತು. ನಾಯಕಿ ಪ್ರದಾನವಾದ ಸಿನಿಮಾ. ಮರ್ಡರ್ ಜೊತೆಗೆ ತನಿಖೆ ಹೇಗೆ ನಡೆಯುತ್ತದೆ ಎನ್ನುವುದು ಚಿತ್ರದ ತಿರುಳು ಎಂದು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ಛಾಯಾಗ್ರಾಹ ರಾಕೇಶ್, ಬೆಂಗಳೂರು ಸೇರಿದಂತೆ ಮೂರು ಕಡೆ ಚಿತ್ರೀಕರಣ ಮಾಡಲಾಗುತ್ತಿದೆ. ಪಿಚ್ಚಾವರಂನಲ್ಲಿ ಆಸ್ಪತ್ರೆಯ ಸೆಟ್ ಹಾಕಲಾಗಿದ್ದು ಛಾಯಾಗ್ರಾಹಣ ಸವಾಲಿನಿಂದ ಕೂಡಿದೆ ಎಂದು ಹೇಳಿಕೊಂಡರು.

ನೊಬಿನ್ ಪಾಲ್ ಎರಡು ಹಾಡುಗಳಿಗೆ ಸಂಗೀತ ನೀಡಲಿದ್ದಾರೆ. ಚಿತ್ರಕ್ಕೆ ಶ್ರೀಕಾಂತ್ ಕಶ್ಯಪ್ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.ಚಿತ್ರವನ್ನು ೨೫ ದಿನಗಳಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಚಿತ್ರತಂಡ ಹೊಂದಿದೆ.

Leave a Comment